ETV Bharat / international

ಚೀನಾದಲ್ಲಿ ಕಾಣಿಸಿಕೊಂಡ ಬರ್ಡ್​​ ಫ್ಲೂ: ಮೊದಲ ಮಾನವ ಸೋಂಕು ಪತ್ತೆ! - ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಬರ್ಡ್ ಫ್ಲೂ

ಜ್ವರ ಸೇರಿದಂತೆ ಹಲವು ರೋಗಲಕ್ಷಣಗಳನ್ನು ಹೊಂದಿದ್ದ ಬಾಲಕನಿಗೆ ಬರ್ಡ್​​ ಫ್ಲೂ ಸೋಂಕು ತಗುಲಿರುವುದು ಕಂಡುಬಂದಿದೆ. NHC ಹೇಳಿಕೆ ಪ್ರಕಾರ, ಬಾಲಕನೊಂದಿಗೆ ನಿಕಟ ಸಂಪರ್ಕದಲ್ಲಿದ್ದವರಿಗೆ ಸೋಂಕು ತಗುಲಿಲ್ಲ ಎಂದು ಹೇಳಲಾಗಿದೆ.

China reports first human case of H3N8 bird flu
ಚೀನಾದಲ್ಲಿ ಕಾಣಿಸಿಕೊಂಡ ಬರ್ಡ್​​ ಫ್ಲೂ: ಬಾಲಕನಲ್ಲಿ ಕಾಣಿಸಿಕೊಂಡ ಸೋಂಕು!
author img

By

Published : Apr 27, 2022, 12:37 PM IST

ಬೀಜಿಂಗ್: ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಬರ್ಡ್ ಫ್ಲೂ ಕಾಣಿಸಿಕೊಂಡಿದ್ದು, ಮೊದಲ ಮಾನವ ಸೋಂಕು ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಈ ಮಾಹಿತಿ ನೀಡಿದ್ದು, ಈ ಸೋಂಕು ಮಾನವನ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ ಎಂದು ಎನ್​​ಎಚ್​​ಸಿ ತಿಳಿಸಿದೆ ಎಂದು ವರದಿಯಾಗಿದೆ.

ಜ್ವರ ಸೇರಿದಂತೆ ಹಲವು ರೋಗಲಕ್ಷಣಗಳನ್ನು ಹೊಂದಿದ್ದ ಬಾಲಕನಿಗೆ ಈ ಸೋಂಕು ತಗುಲಿರುವುದು ಕಂಡುಬಂದಿದೆ. NHC ಹೇಳಿಕೆ ಪ್ರಕಾರ, ಬಾಲಕನೊಂದಿಗೆ ನಿಕಟ ಸಂಪರ್ಕದಲ್ಲಿದ್ದವರಿಗೆ ಸೋಂಕು ತಗುಲಿಲ್ಲ ಎಂದು ಹೇಳಲಾಗಿದೆ.

ನಾಲ್ಕು ವರ್ಷದ ಬಾಲಕ ತನ್ನ ಮನೆಯಲ್ಲಿದ್ದ ಕೋಳಿ ಮತ್ತು ಕಾಗೆಗಳೊಂದಿಗೆ ಸಂಪರ್ಕ ಹೊಂದಿದ್ದ ಎಂದು ಚೀನಾ ಆರೋಗ್ಯ ಆಯೋಗ ಹೇಳಿದೆ. H3N8 ರೂಪಾಂತರವು ಈ ಹಿಂದೆ ವಿಶ್ವದ ಬೇರೆ ಬೇರೆ ಕಡೆ ಕುದುರೆ, ನಾಯಿ, ಪಕ್ಷಿಗಳಲ್ಲಿ ಕಂಡು ಬಂದಿತ್ತು ಎಂದು ಆಯೋಗ ಹೇಳಿದೆ. ಆರಂಭಿಕ ಮಾಹಿತಿಗಳ ಪ್ರಕಾರ ಮಾನವನಲ್ಲಿ ಈ ಫ್ಲೂ ಪರಿಣಾಮಕಾರಿಯಾಗಿ ಹರಡುವ ಸಾಮರ್ಥ್ಯ ಹೊಂದಿಲ್ಲ ಎಂದೂ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನು ಓದಿ:ಇಂದಿನಿಂದ ಪೋಲೆಂಡ್​ಗೆ ಅನಿಲ ಸರಬರಾಜು ನಿಲ್ಲಿಸಲಿದೆ ರಷ್ಯಾ ಸರ್ಕಾರ.. ಏಕೆ ಗೊತ್ತಾ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.