ನವದೆಹಲಿ : ಡ್ರ್ಯಾಗನ್ ರಾಷ್ಟ್ರ ಚೀನಾ ತನ್ನ ನೆರೆಯ ರಾಷ್ಟ್ರಗಳ ಮೇಲೆ ಯಾವಾಗಲೂ ಬೇಹುಗಾರಿಕೆ ನಡೆಸುತ್ತಲೇ ಇರುತ್ತದೆ. ಇದೀಗ ಆಸ್ಟ್ರೇಲಿಯಾದ ಸಮೀಪದ ಹಿಂದೂ ಮಹಾಸಾಗರದಲ್ಲಿ ಚೀನಾದ ಹಡಗೊಂದು ಪತ್ತೆಯಾಗಿದೆ. ಇದು ತನ್ನ ವಿರುದ್ಧ ಬೇಹುಗಾರಿಕೆ ನಡೆಸುತ್ತಿದೆ ಎಂದು ಆಸ್ಟ್ರೇಲಿಯಾ ಹೇಳಿದೆ.
ಪಶ್ಚಿಮ ಆಸ್ಟ್ರೇಲಿಯಾದ ಎಕ್ಸ್‌ಮೌತ್ ನಗರದ ಸಮೀಪವಿರುವ ಸೇನಾ ಹಡಗು ನೆಲೆಯಿಂದ ಸುಮಾರು 6,500 ಕಿ.ಮೀ ದೂರದಲ್ಲಿ ಚೀನಾದ ಹೈಟೆಕ್ ಪೀಪಲ್ಸ್ ಲಿಬರೇಷನ್ ಆರ್ಮಿ ನೇವಿ ಬೇಹುಗಾರಿಕಾ ಹಡಗು ಮೇ 6ರಂದು ಪತ್ತೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ಗುಪ್ತಚರ ಮಾಹಿತಿಗಾಗಿ ಈ ಹಡಗು ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಲಾಗಿದೆ.
ಆಸ್ಟ್ರೇಲಿಯದ ರಕ್ಷಣಾ ಸಚಿವ ಪೀಟರ್ ಡಟ್ಟನ್ ಚೀನಾದ ಈ ಬೇಹುಗಾರಿಕಾ ತಂತ್ರವನ್ನು 'ಆಕ್ರಮಣಕಾರಿ ಕೃತ್ಯ' ಎಂದು ಟೀಕಿಸಿದ್ದಾರೆ. ಕಳೆದ ವರ್ಷ ಅಮೆರಿಕ ಮತ್ತು ಆಸ್ಟ್ರೇಲಿಯಾದ ನೌಕಾಪಡೆಗಳು 'ತಾಲಿಸ್ಮನ್ ಸೇಬರ್' ಹೆಸರಿನಲ್ಲಿ ನೌಕಾಭ್ಯಾಸ ನಡೆಸಿದ್ದವು. ಇದರಿಂದಾಗಿ ಚೀನಾ ಆಸ್ಟ್ರೇಲಿಯಾದ ಸಮುದ್ರ ಶಕ್ತಿಯ ಮೇಲೆ ಕಣ್ಣಿಟ್ಟಿದೆ.
ಕ್ವಾಡ್ ಸದಸ್ಯ ರಾಷ್ಟ್ರಗಳಾದ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್‌ನ ಸಹಯೋಗದಲ್ಲಿ ನೌಕಾಪಡೆಗಳು ಮಲಬಾರ್ನಲ್ಲಿ ನಡೆಸುವ ಅಭ್ಯಾಸದ ಮೇಲೆ ಕಣ್ಣಿಡಲು ಚೀನಾ 'ಹೈವಾಂಗ್ಸಿಂಗ್' ಪಡೆಯನ್ನು ಬಳಸುತ್ತದೆ. ಆಸ್ಟ್ರೇಲಿಯಾದ ಹಿಂದು ಮಹಾಸಾಗರದಲ್ಲಿ ಕಂಡು ಬಂದ ಹಡಗು ಕೂಡ ಹೈವಾಂಗ್ಸಿಂಗ್ನದ್ದೇ ಎಂದು ಗುರುತಿಸಲಾಗಿದೆ.
ಓದಿ: ಶರದ್ ಪವಾರ್ ಬಗ್ಗೆ ವಿವಾದಾತ್ಮಕ ಪೋಸ್ಟ್: ಮರಾಠಿ ನಟಿ ಪೊಲೀಸ್ ವಶಕ್ಕೆ