ETV Bharat / international

2023ರ ಜನವರಿಯಿಂದ 60 ಸಾವಿರ ಭಾರತೀಯರಿಗೆ ವೀಸಾ ನೀಡಿದ ಚೀನಾ..

ಪ್ರವಾಸೋದ್ಯಮ, ವ್ಯಾಪಾರ ಅಧ್ಯಯನ, ಕೆಲಸ ಮತ್ತು ಕುಟುಂಬ ಪುನರ್ಮಿಲನ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಭಾರತೀಯ ಪ್ರಜೆಗಳಿಗೆ ವೀಸಾಗಳನ್ನು ನೀಡಲಾಗಿದೆ. ಮೂಲಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಅಂದ್ರೆ, ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಸೇರಿದಂತೆ ವಿದೇಶಿ ಪ್ರವಾಸಿಗರು ದೇಶಕ್ಕೆ ಪ್ರವೇಶಿಸಲಿದ್ದಾರೆ ಘೋಷಣೆ ಚೀನಾ ಮಾಡಿದೆ.

Chinese Embassy in India
2023ರ ಜನವರಿಯಿಂದ 60 ಸಾವಿರ ಭಾರತೀಯರಿಗೆ ವೀಸಾ ನೀಡಿದ ಚೀನಾ
author img

By

Published : May 30, 2023, 10:10 PM IST

ನವದೆಹಲಿ: 2023ರ ಮೊದಲ ಐದು ತಿಂಗಳಲ್ಲಿ ಚೀನಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಚೀನಾದ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್ 60,000ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ವಾಂಗ್ ಕ್ಸಿಯಾಜಿಯಾನ್ ಮಂಗಳವಾರ ತಿಳಿಸಿದ್ದಾರೆ.

ಚೀನಾದ ವಕ್ತಾರ ಮಾಡಿದ ಟ್ವೀಟ್​ನಲ್ಲೇನಿದೆ?: ಈ ಕುರಿತು ಟ್ವೀಟ್​ ಮಾಡಿದ ಚೀನಾದ ವಕ್ತಾರ, ''ಈ ವರ್ಷದ ಮೊದಲ 5 ತಿಂಗಳಲ್ಲಿ, ಚೀನಾ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್, ವ್ಯಾಪಾರ, ಅಧ್ಯಯನ, ಪ್ರವಾಸಿ, ಕೆಲಸ, ಕುಟುಂಬ ಪುನರ್ಮಿಲನ ಸೇರಿದಂತೆ ಇತರ ಉದ್ದೇಶಗಳಿಗಾಗಿ ಚೀನಾಕ್ಕೆ ಪ್ರಯಾಣಿಸುವ ಭಾರತೀಯರಿಗೆ 60,000 ವೀಸಾಗಳನ್ನು ನೀಡಿದೆ. ಚೀನಾಕ್ಕೆ ಸ್ವಾಗತ" ಎಂದು ಬರೆದಿದ್ದಾರೆ.

  • In the first 5 months of this year, the Chinese Embassy and Consulates General have issued over 60000 visas to Indian people traveling to China for purposes of business, study, tourist, work, family reunion etc. Welcome to China.

    — Wang Xiaojian (@ChinaSpox_India) May 30, 2023 " class="align-text-top noRightClick twitterSection" data=" ">

ಅಧಿಸೂಚನೆಯಲ್ಲಿ ಏನಿದೆ?: ಪ್ರವಾಸೋದ್ಯಮ, ವ್ಯಾಪಾರ ಅಧ್ಯಯನ, ಕೆಲಸ ಮತ್ತು ಕುಟುಂಬ ಪುನರ್ಮಿಲನ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಭಾರತೀಯ ಪ್ರಜೆಗಳಿಗೆ ವೀಸಾಗಳನ್ನು ಕೊಡಲಾಗಿದೆ. ಮೂಲಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಅಂದ್ರೆ, ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಸೇರಿದಂತೆ ವಿದೇಶಿ ಪ್ರವಾಸಿಗರು ದೇಶಕ್ಕೆ ಪ್ರವೇಶಿಸಲಿದ್ದಾರೆ ಎಂದು ಚೀನಾ ಘೋಷಿಸಿದೆ. ಮಾರ್ಚ್ 14ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್ ವಿವಿಧ ರೀತಿಯ ಚೀನಾ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸುವುದಾಗಿ ಹೇಳಿದೆ. ಅಧಿಸೂಚನೆಯಲ್ಲಿ, ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯು, "ಮಾರ್ಚ್ 28, 2020ರ ಮೊದಲು ನೀಡಲಾದ ಮತ್ತು ಮಾನ್ಯವಾಗಿರುವ ಚೀನಾ ವೀಸಾಗಳನ್ನು ಪುನಃ ಸಕ್ರಿಯಗೊಳಿಸಲಾಗುತ್ತದೆ" ಎಂದು ಚೀನಾ ಹೇಳಿದೆ.

ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದು ಹೀಗೆ: ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್ ವಿವಿಧ ರೀತಿಯ ಚೀನಾ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸುತ್ತದೆ. ಹೆಚ್ಚಿನ ವಿವರಗಳಿಗಾಗಿ, ಚೀನಾ ವೀಸಾ ಅರ್ಜಿಯ ಅವಶ್ಯಕತೆಗಳ ಕುರಿತು ನವೀಕರಿಸಿದ ಸೂಚನೆಯನ್ನು ಪರಿಶೀಲಿಸಬಹುದು ಎಂದು ತಿಳಿಸಲಾಗಿದೆ.

ಏಪ್ರಿಲ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಚೀನಾದಲ್ಲಿ ಇಬ್ಬರು ಭಾರತೀಯ ಪತ್ರಕರ್ತರ ವೀಸಾಗಳನ್ನು ಸ್ಥಗಿತಗೊಳಿಸಿರುವ ವರದಿಗಳ ನಡುವೆಯೇ ಚೀನಾದ ಅಧಿಕಾರಿಗಳು ಭಾರತೀಯ ಪತ್ರಕರ್ತರು ಚೀನಾದಿಂದ ವರದಿ ಮಾಡುವುದನ್ನು ಮುಂದುವರೆಸಲು ಅನುಕೂಲ ಮಾಡಿಕೊಡುತ್ತಾರೆ ಎಂದು ಭಾರತ ಭಾವಿಸುತ್ತದೆ ಎಂದು ಗಮನಿಸಿದರು.

"ನಮ್ಮಲ್ಲಿ ಚೀನಾ ಪತ್ರಕರ್ತರು ಇದ್ದಾರೆ. ಅವರು ಪತ್ರಿಕೋದ್ಯಮ ಚಟುವಟಿಕೆಗಳನ್ನು (ಭಾರತದಲ್ಲಿ) ಮುಂದುವರಿಸಲು ಭಾರತೀಯ ವೀಸಾಗಳನ್ನು ಹೊಂದಿದ್ದಾರೆ. ವರದಿ ಮಾಡುವಲ್ಲಿ ಮತ್ತು ಮಾಧ್ಯಮ ಪ್ರಸಾರದಲ್ಲಿ ಯಾವುದೇ ಮಿತಿಗಳು ಅಥವಾ ತೊಂದರೆಗಳನ್ನು ನಾನು ಕಾಣುತ್ತಿಲ್ಲ. ಚೀನಾದಿಂದ ಪತ್ರಕರ್ತರ ನಿರಂತರ ಉಪಸ್ಥಿತಿ ಮತ್ತು ವರದಿಯನ್ನು ಸುಗಮಗೊಳಿಸುತ್ತದೆ" ಎಂದು ಬಾಗ್ಚಿ ಹೇಳಿದರು. ಈ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅವರು ಭರವಸೆ ನೀಡಿದರು.

ಇದನ್ನೂ ಓದಿ: ಬರ್ಮಿಂಗ್​ಹ್ಯಾಮ್​ನ ​ಮೊದಲ ಬ್ರಿಟಿಷ್ - ಇಂಡಿಯನ್ ಮೇಯರ್ ಆದ ಹೋಶಿಯಾರ್ಪುರದ ಚಮನ್ ಲಾಲ್..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.