ETV Bharat / international

CPEC ಪ್ರಾಜೆಕ್ಟ್​ ವಿಳಂಬ: ಪಾಕ್ ವಿರುದ್ಧ ಚೀನಾ ಆಕ್ರೋಶ - ಸಿಪೆಕ್ ಯೋಜನೆಗಳಿಗೆ ಹಣ ನೀಡುವುದು

ಚೀನಾ ಹಣಕಾಸು ಸಹಾಯದಲ್ಲಿ ನಡೆಯುತ್ತಿರುವ ಸಿಪೆಕ್ ಯೋಜನೆಗಳಿಗೆ ಹಿನ್ನಡೆಯಾಗಿದ್ದಕ್ಕೆ ಚೀನಾ ತೀವ್ರ ಆಕ್ರೋಶಗೊಂಡಿದೆ. ಚೀನಾ ಇತ್ತೀಚೆಗೆ ಪಾಕಿಸ್ತಾನಕ್ಕೆ ಮತ್ತೊಂದು ಹಂತದ ಸಾಲ ನೀಡಿತ್ತು.

China furious with Pakistan over delayed implementation of CPEC projects

author img

By

Published : May 21, 2023, 7:28 PM IST

ಇಸ್ಲಾಮಾಬಾದ್ (ಪಾಕಿಸ್ತಾನ) : ರಾಜಕೀಯ ಅಸ್ಥಿರತೆ ಮತ್ತು ಆರ್ಥಿಕ ಪ್ರಕ್ಷುಬ್ಧತೆಯ ಕಾರಣದಿಂದ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅಡಿಯಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ. ಇದರಿಂದ ಚೀನಾ ತೀವ್ರ ಆಕ್ರೋಶಗೊಂಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇತ್ತೀಚಿಗೆ ಚೀನಾ ಪಾಕಿಸ್ತಾನಕ್ಕೆ ಮತ್ತೊಂದು ಹಂತದ ಸಾಲಗಳನ್ನು ನೀಡಿ ಸಹಾಯ ಮಾಡಿದೆ. ಆದರೂ ತಾನು ಹಣಕಾಸು ನೀಡುತ್ತಿರುವ ಯೋಜನೆಗಳಿಗೆ ಹಿನ್ನಡೆ ಆಗಿರುವುದು ಚೀನಾಕ್ಕೆ ಆಕ್ರೋಶ ಮೂಡಿಸಿದೆ. ಪಾಕಿಸ್ತಾನದಲ್ಲಿನ ದುರಾಡಳಿತದಿಂದ ಚೀನಾದ ಅಧಿಕಾರಿಗಳು ಹೆಚ್ಚು ಸಿಟ್ಟಾಗಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ಹೇಳಿವೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಹಾಯ ದೊರಕುವುದು ಅಸಾಧ್ಯವಾಗಿರುವ ಈ ಸಮಯದಲ್ಲಿ ಪಾಕಿಸ್ತಾನವು ತನ್ನ ಯೋಜನೆಗಳಿಗೇ ಹಣ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಸಿಪೆಕ್ ಯೋಜನೆಗಳಿಗೆ ಹಣ ನೀಡುವುದು ದೂರದ ಮಾತಾಗಿದೆ. "ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆಯ ಬಗ್ಗೆಯೂ ಚೀನಾ ಚಿಂತಿತವಾಗಿದೆ. ನಿರಂತರ ವಿಳಂಬದಿಂದಾಗಿ ಭವಿಷ್ಯದ ಸವಾಲುಗಳನ್ನು ಪರಿಗಣಿಸಿ, ಐಎಂಎಫ್​​ 8 ಶತಕೋಟಿ ಯುಎಸ್​ ಡಾಲರ್ ಸಾಲದ ವ್ಯವಸ್ಥೆಯನ್ನು ಬೇಡಿಕೆ ಮಾಡುತ್ತಿದೆ ಎಂದು ತಿಳಿದು ಬಂದಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಮರುಪಾವತಿ ಮಾಡಬೇಕಿರುವುದರಿಂದ ಯೋಜನೆಗಳು ಮತ್ತೂ ವಿಳಂಬವಾಗಬಹುದು" ಎಂದು ಚೀನಾ ರಾಜತಾಂತ್ರಿಕರು ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದಾಗಿನಿಂದ ಪಾಕಿಸ್ತಾನವನ್ನು ಆವರಿಸಿರುವ ರಾಜಕೀಯ ಅಶಾಂತಿಯು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಆರ್ಥಿಕ ಸಹಾಯವನ್ನು ಪಡೆಯುವ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತದೆ ಮತ್ತು ಇದು ದೇಶದ ಆರ್ಥಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸಲಿದೆ. 220 ಮಿಲಿಯನ್ ಜನಸಂಖ್ಯೆ ಹೊಂದಿರುವ ದಕ್ಷಿಣ ಏಷ್ಯಾ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಕಳೆದ ವರ್ಷದಿಂದ ಬೆಳವಣಿಗೆಯು ಬಹುತೇಕ ಸ್ಥಗಿತವಾಗಿದೆ ಮತ್ತು ಹಣದುಬ್ಬರವು ಗಗನಕ್ಕೇರಿದೆ. ಪಾಕಿಸ್ತಾನದ ರೂಪಾಯಿ ತೀವ್ರವಾಗಿ ಕುಸಿಯುತ್ತಿದೆ ಮತ್ತು ವಿದೇಶಿ ಕರೆನ್ಸಿಯ ಮೀಸಲು ಕಡಿಮೆಯಾಗುತ್ತಿದೆ. ದೇಶವು ಆಹಾರದಂಥ ಅಗತ್ಯ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಹೆಣಗಾಡುತ್ತಿದೆ. ಆಹಾರ ವಿತರಣಾ ಕೇಂದ್ರಗಳಲ್ಲಿ ಆಹಾರ ಪಡೆಯಲು ಕಾಲ್ತುಳಿತಕ್ಕೆ ಜನ ಸಾಯುತ್ತಿದ್ದಾರೆ.

ಆಹಾರ ಪದಾರ್ಥಗಳ ಕೊರತೆ ಬೆಲೆಗಳು ಗಗನಕ್ಕೇರಲು ಕಾರಣವಾಗುತ್ತಿದೆ. ಹಣದುಬ್ಬರವು ಏಪ್ರಿಲ್‌ನಲ್ಲಿ 36.4 ಶೇಕಡಾ ವಾರ್ಷಿಕ ದರವನ್ನು ತಲುಪಿದೆ. ಆಹಾರದ ವೆಚ್ಚವು ನಗರ ಪ್ರದೇಶಗಳಲ್ಲಿ ಸುಮಾರು 47 ಶೇಕಡಾ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 52 ಕ್ಕಿಂತ ಹೆಚ್ಚಿದೆ. ಈಗ ಭ್ರಷ್ಟಾಚಾರದ ಆರೋಪದ ಮೇಲೆ ಖಾನ್ ಅವರನ್ನು ನಾಟಕೀಯವಾಗಿ ಬಂಧಿಸಿದ ನಂತರ ಉಂಟಾಗಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಮತ್ತು ಹಿಂಸಾತ್ಮಕ ಘರ್ಷಣೆಗಳು ದೇಶವನ್ನು ವ್ಯಾಪಿಸುತ್ತಿದ್ದು, ಹೆಚ್ಚು ಅಗತ್ಯವಿರುವ ಹಣಕಾಸಿನ ಸಹಾಯವನ್ನು ಪಡೆಯುವ ದೇಶದ ಸಾಮರ್ಥ್ಯ ಕ್ಷೀಣಿಸುತ್ತಿದೆ. ಇದಲ್ಲದೆ, ಪಾಕಿಸ್ತಾನ ಮತ್ತು ಐಎಂಎಫ್​​ ಮಧ್ಯದ ಒಪ್ಪಂದ ಜಾರಿಗೆ ಬರುವುದು ಸಂಶಯಾಸ್ಪದವಾಗಿದೆ. ಕರಾಚಿಯ ಹಣಕಾಸು ಸಂಸ್ಥೆಯಾದ ಆರಿಫ್ ಹಬೀಬ್‌ನ ಸಂಶೋಧನಾ ನಿರ್ದೇಶಕರಾದ ತಾಹಿರ್ ಅಬ್ಬಾಸ್ ಅವರ ಪ್ರಕಾರ, ಸೆಂಟ್ರಲ್ ಬ್ಯಾಂಕ್‌ನಲ್ಲಿರುವ ಸುಮಾರು 4.4 ಶತಕೋಟಿ ಡಾಲರ್ ವಿದೇಶಿ ಮೀಸಲು ಒಂದು ತಿಂಗಳ ಆಮದುಗಳನ್ನು ಸರಿದೂಗಿಸಲು ಮಾತ್ರ ಸಾಕಾಗುತ್ತದೆ.

ಇದನ್ನೂ ಓದಿ : 2022-23ರಲ್ಲಿ 1.39 ಕೋಟಿ ಉದ್ಯೋಗಿಗಳು EPFO ಸೇರ್ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.