ಕೆನಡಾ: ದೇಶದ ಐತಿಹಾಸಿಕ ಮಹತ್ವದ ಪ್ರಧಾನ ಭಾಷೆಗಳಲ್ಲಿ ಕನ್ನಡವೂ ಒಂದಾಗಿದ್ದು, ಕರ್ನಾಟಕದ ಬಹುತೇಕ ಜನರ ಮಾತೃಭಾಷೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ದಮನ್ ಹಾಗೂ ದಿಯುಗಳಲ್ಲೂ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ. ಇದೀಗ ಸಪ್ತ ಸಾಗರದಾಚೆಗಿನ ಕೆನಡಾ ಸಂಸತ್ತಿನಲ್ಲಿ ಕೂಡ ಕನ್ನಡದ ಕಂಪು ಪಸರಿಸಿದೆ.
ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ಅಲ್ಲಿನ ಸಂಸತ್ನಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡುತ್ತೇನೆ ಎಂದು ಕೆನಡಾ ಪಾರ್ಲಿಮೆಂಟ್ನಲ್ಲಿ ಭಾಷಣ ಮಾಡಿದರು. ಬೇರೆ ದೇಶದ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
-
I spoke in my mother tongue (first language) Kannada in Canadian parliament.
— Chandra Arya (@AryaCanada) May 19, 2022 " class="align-text-top noRightClick twitterSection" data="
This beautiful language has long history and is spoken by about 50 million people.
This is the first time Kannada is spoken in any parliament in the world outside of India. pic.twitter.com/AUanNlkETT
">I spoke in my mother tongue (first language) Kannada in Canadian parliament.
— Chandra Arya (@AryaCanada) May 19, 2022
This beautiful language has long history and is spoken by about 50 million people.
This is the first time Kannada is spoken in any parliament in the world outside of India. pic.twitter.com/AUanNlkETTI spoke in my mother tongue (first language) Kannada in Canadian parliament.
— Chandra Arya (@AryaCanada) May 19, 2022
This beautiful language has long history and is spoken by about 50 million people.
This is the first time Kannada is spoken in any parliament in the world outside of India. pic.twitter.com/AUanNlkETT
'ಈ ಸುಂದರ ಭಾಷೆ ಸುದೀರ್ಘ ಇತಿಹಾಸ ಹೊಂದಿದೆ. ಕನ್ನಡ ಭಾಷೆಯನ್ನು 5 ಕೋಟಿ ಜನರು ಮಾತನಾಡುತ್ತಾರೆ' ಎಂದು ಹೇಳುವ ಮೂಲಕ ಅವರು ಭಾಷಾಭಿಮಾನ ಮೆರೆದರು. ನಂತರ ಕುವೆಂಪು ರಚನೆಯ ಮತ್ತು ಡಾ.ರಾಜಕುಮಾರ್ ಹಾಡಿರುವ ಭಾವಗೀತೆಯಾದ 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು' ಎಂದು ಹೇಳುವ ಮೂಲಕ ತಮ್ಮ ಭಾಷಣ ಮುಗಿಸಿದರು.
ಚಂದ್ರ ಆರ್ಯ ಅವರ ಮಾತೃ ಭಾಷಾಭಿಮಾನಕ್ಕೆ ಇಡೀ ಕರ್ನಾಟವೇ ಪ್ರಶಂಸೆ ವ್ಯಕ್ತಪಡಿಸಿದೆ. ಸಚಿವೆ ಶಶಿಕಲಾ ಜೊಲ್ಲೆ ಟ್ವೀಟ್ ಮಾಡಿ, 'ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕನ್ನಡಿಗರಾದ ಶ್ರೀ ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ನಮ್ಮ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
-
ಕೆನಡಾ ದೇಶದ ಸಂಸತ್ತಿನಲ್ಲಿ ನಮ್ಮ ಮಾತೃಭಾಷೆ ಹೆಮ್ಮೆಯ ಕನ್ನಡದ ಕಂಪು
— Shashikala Jolle (@ShashikalaJolle) May 20, 2022 " class="align-text-top noRightClick twitterSection" data="
ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕನ್ನಡಿಗರಾದ ಶ್ರೀ ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ತಮ್ಮ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ಕನ್ನಡ ಬಳಸಿ, ಬೆಳೆಸಿ, ಉಳಿಸೋಣ.@AryaCanada pic.twitter.com/GAeMLEF5sH
">ಕೆನಡಾ ದೇಶದ ಸಂಸತ್ತಿನಲ್ಲಿ ನಮ್ಮ ಮಾತೃಭಾಷೆ ಹೆಮ್ಮೆಯ ಕನ್ನಡದ ಕಂಪು
— Shashikala Jolle (@ShashikalaJolle) May 20, 2022
ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕನ್ನಡಿಗರಾದ ಶ್ರೀ ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ತಮ್ಮ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ಕನ್ನಡ ಬಳಸಿ, ಬೆಳೆಸಿ, ಉಳಿಸೋಣ.@AryaCanada pic.twitter.com/GAeMLEF5sHಕೆನಡಾ ದೇಶದ ಸಂಸತ್ತಿನಲ್ಲಿ ನಮ್ಮ ಮಾತೃಭಾಷೆ ಹೆಮ್ಮೆಯ ಕನ್ನಡದ ಕಂಪು
— Shashikala Jolle (@ShashikalaJolle) May 20, 2022
ಕೆನಡಾ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಕನ್ನಡಿಗರಾದ ಶ್ರೀ ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ತಮ್ಮ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ಕನ್ನಡ ಬಳಸಿ, ಬೆಳೆಸಿ, ಉಳಿಸೋಣ.@AryaCanada pic.twitter.com/GAeMLEF5sH
ಇದನ್ನೂ ಓದಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ