ನೂರ್-ಸುಲ್ತಾನ್(ಕಜಾಕಿಸ್ತಾನ) : ಇಲ್ಲಿನ ಕಟ್ಟಡದ 8ನೇ ಮಹಡಿಯಿಂದ ನೇತಾಡುತ್ತಿದ್ದ ಮೂರು ವರ್ಷದ ಮಗುವಿನ ಪ್ರಾಣ ಕಾಪಾಡಲು ವ್ಯಕ್ತಿಯೊಬ್ಬ ತನ್ನ ಪ್ರಾಣ ಪಣಕ್ಕಿಟ್ಟಿರುವ ಘಟನೆ ಇದು. ಮಗುವಿನ ತಾಯಿ ಶಾಪಿಂಗ್‌ಗೆ ಹೋಗಿದ್ದಾಗ ಆಟವಾಡುತ್ತಾ ಹೆಣ್ಣು ಮಗು ಕಿಟಕಿಯಿಂದ ಹೊರಬರಲು ಪ್ರಯತ್ನಿಸಿದೆ. ಮಗು ಕಿಟಕಿಯ ತುದಿ ಹಿಡಿದು ನೇತಾಡುತ್ತಿದ್ದಳು.
-
Day 588: Let’s have more nice things...
— Brad Ferguson (@BradFergus0n) May 12, 2022 " class="align-text-top noRightClick twitterSection" data="
...Like incredibly brave & quick-thinking hero, Sabit Shontakbaev jumping into action when he spotted a girl hanging from an 8th story window, 80ft up.#MoreNiceThings pic.twitter.com/4SHfRCgnaq
">Day 588: Let’s have more nice things...
— Brad Ferguson (@BradFergus0n) May 12, 2022
...Like incredibly brave & quick-thinking hero, Sabit Shontakbaev jumping into action when he spotted a girl hanging from an 8th story window, 80ft up.#MoreNiceThings pic.twitter.com/4SHfRCgnaqDay 588: Let’s have more nice things...
— Brad Ferguson (@BradFergus0n) May 12, 2022
...Like incredibly brave & quick-thinking hero, Sabit Shontakbaev jumping into action when he spotted a girl hanging from an 8th story window, 80ft up.#MoreNiceThings pic.twitter.com/4SHfRCgnaq
ಈ ಮಗುವಿನ ಮನೆಯ ಕೆಳ ಮಹಡಿಯಲ್ಲಿ ಶೋಂಟಾಕ್‌ಬೇವ್ ಸಾಬಿತ್ ಎಂಬ ವ್ಯಕ್ತಿ ವಾಸಿಸುತ್ತಿದ್ದಾರೆ. ಸಾಬಿತ್ ಕಚೇರಿಗೆ ತೆರಳಲು ಅಣಿಯಾಗುತ್ತಿದ್ದರು. ಇದೇ ಸಮಯದಲ್ಲಿ ಮನೆಯಿಂದ ಹೊರಗಡೆ ಬಂದಿದ್ದ ಸುತ್ತಮುತ್ತಲಿನ ಜನರು ಕೂಗಾಡುವುದನ್ನು ಗಮನಿಸಿ ಅಲ್ಲಿಂದಲೇ ವಿಚಾರಿಸಿದ್ದಾರೆ. ಆಗ ಅವರು ಮೇಲಿನ ಮನೆಯ ಕಿಟಕಿಯಿಂದ ಪುಟ್ಟ ಮಗುವೊಂದು ಕಿಟಕಿಯಿಂದ ಜೋತು ಬೀಳುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ತಮ್ಮ ಮನೆಯ ಕಿಟಕಿಯಿಂದ ಹೊರಬಂದು ಹರಸಾಹಸಪಟ್ಟು ಮಗುವಿನ ಪ್ರಾಣ ಉಳಿಸಿದರು.
ಇದನ್ನೂ ಓದಿ: 300 ಅಡಿ ಆಳದ ಕ್ವಾರಿಯಲ್ಲಿ ಸಿಲುಕಿದ 6 ಮಂದಿ ಕಾರ್ಮಿಕರು, ಇಬ್ಬರ ರಕ್ಷಣೆ
ಮಗುವನ್ನು ರಕ್ಷಿಸುತ್ತಿರುವ ಸಂಪೂರ್ಣ ದೃಶ್ಯಾವಳಿಯನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯ ನಂತರ ಕಜಾಕಿಸ್ತಾನದ ತುರ್ತು ಪರಿಸ್ಥಿತಿಗಳ ಸಚಿವಾಲಯ ಆಪತ್ಭಾಂಧವ ವ್ಯಕ್ತಿಯನ್ನು 'ಹೀರೋ' ಎಂದು ಮುಕ್ತಕಂಠದಿಂದ ಶ್ಲಾಘಿಸಿ ವಿಶೇಷ ಬ್ಯಾಡ್ಜ್ ನೀಡಿ ಗೌರವಿಸಿದೆ.