ಲಂಡನ್ (ಇಂಗ್ಲೆಂಡ್) : ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ಪ್ರಿನ್ಸ್ ವಿಲಿಯಂ ಅವರ ಮುಂದೆ ನಡೆಯುತ್ತಿದ್ದ ಟ್ರೂಪಿಂಗ್ ದಿ ಕಲರ್ ರಿಹರ್ಸಲ್ (Trooping the Colour rehearsal)ನಲ್ಲಿ ಭಾಗಿಯಾಗಿದ್ದ ಮೂವರು ಯೋಧರು ತಲೆ ತಿರುಗಿ ಬಿದ್ದಿರುವ ಘಟನೆ ಶನಿವಾರ ವರದಿಯಾಗಿದೆ. ಇಂಗ್ಲೆಂಡ್ನಲ್ಲಿ ಸುಮಾರು 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ವರ್ಷ ಇಲ್ಲಿ ದಾಖಲಾದ ಅತಿ ಹೆಚ್ಚಿನ ತಾಪಮಾನ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ರಿಹರ್ಸಲ್ ವೇಳೆ ಉಣ್ಣೆಯ ದಿರಿಸು ಮತ್ತು ಕರಡಿ ಚರ್ಮದ ಟೋಪಿಯನ್ನು ಯೋಧರು ಧರಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿನ್ಸ್ ವಿಲಿಯಂ, ಇಂದಿನ ಅತಿ ಹೆಚ್ಚು ತಾಪಮಾನದಲ್ಲೂ ಬೆಳಗ್ಗಿನ ರಿಹರ್ಸಲ್ನಲ್ಲಿ ಭಾಗವಹಿಸಿದ ಎಲ್ಲ ಯೋಧರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಚೆನ್ನಾಗಿ ನಿಭಾಯಿಸಿದ್ದೀರಿ. ಧನ್ಯವಾದ ಎಂದು ಹೇಳಿದ್ದಾರೆ. ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಡಿದ ಕಠಿಣ ಪರಿಶ್ರಮ ಮತ್ತು ಪರೇಡ್ನಲ್ಲಿ ಭಾಗವಹಿಸಿದವರಿಗೆ, ಅದರಲ್ಲೂ ಕಠಿಣ ವಾತಾವರಣದಲ್ಲಿ ಭಾಗವಹಿಸಿದರಿಗೆ ಇದರ ಯಶಸ್ಸು ಸಲ್ಲಿಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
-
Conducting the Colonel's Review of the King's Birthday Parade today. The hard work and preparation that goes into an event like this is a credit to all involved, especially in today’s conditions. pic.twitter.com/IRuFjqyoeD
— The Prince and Princess of Wales (@KensingtonRoyal) June 10, 2023 " class="align-text-top noRightClick twitterSection" data="
">Conducting the Colonel's Review of the King's Birthday Parade today. The hard work and preparation that goes into an event like this is a credit to all involved, especially in today’s conditions. pic.twitter.com/IRuFjqyoeD
— The Prince and Princess of Wales (@KensingtonRoyal) June 10, 2023Conducting the Colonel's Review of the King's Birthday Parade today. The hard work and preparation that goes into an event like this is a credit to all involved, especially in today’s conditions. pic.twitter.com/IRuFjqyoeD
— The Prince and Princess of Wales (@KensingtonRoyal) June 10, 2023
ಪರೇಡ್‌ನ ಟ್ರೂಪಿಂಗ್ ದಿ ಕಲರ್ ರಿಹರ್ಸಲ್ನ ಆಕರ್ಷಕ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸೇಂಟ್ ಜೇಮ್ಸ್ ಪಾರ್ಕ್‌ನಲ್ಲಿ ಸೇರಿದ್ದರು. ಈ ವರ್ಣರಂಜಿತ ಮೆರವಣಿಗೆಯಲ್ಲಿ ನೂರಾರು ಕುದುರೆಗಳು ಮತ್ತು ಸೈನಿಕರು ಸಂಗೀತಕ್ಕೆ ತಕ್ಕಂತೆ ತಮ್ಮ ಯುದ್ಧ ಕೌಶಲ್ಯಗಳನ್ನು ಪ್ರದರ್ಶಿಸುತ್ತಿದ್ದರು. ಈ ವೇಳೆ ತಾಲೀಮಿನಲ್ಲಿ ಭಾಗಿಯಾಗಿದ್ದ ಮೂವರು ಸೈನಿಕರು ತಲೆ ತಿರುಗಿ ಬಿದ್ದಿದ್ದು, ತಕ್ಷಣ ಅವರನ್ನು ಮೈದಾನದಿಂದ ಹೊರಗೆ ಸಾಗಿಸಲಾಯಿತು.
ಈ ತಾಲೀಮಿನಲ್ಲಿ ಭಾಗಿಯಾಗಿದ್ದ ಕಾರ್ಡಿಫ್‌ನ ಅತ್ಯಂತ ಕಿರಿಯ ಯೋಧ ಜೇಮ್ಸ್ ಕ್ಯಾಲ್ಫೋರ್ಡ್,ಈ ಪರೇಡ್ 'ನಮ್ಮ ಎಡಗೈಯಲ್ಲಿ 200 ಕೆಜಿ ಡಂಬ್‌ಬೆಲ್‌ನೊಂದಿಗೆ ಕಡು ಬಿಸಿಲಿನ ಕೋಣೆಯಲ್ಲಿ ನಿಂತಿರುವಂತೆ ಭಾಸವಾಗಿತ್ತು ಎಂದು ವಿವರಿಸಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಈ ತರಹದ ಉಣ್ಣೆಯ ದಿರಿಸು ಮತ್ತು ಕರಡಿ ಚರ್ಮದ ಟೋಪಿಗಳನ್ನು ಧರಿಸುವ ರೀತಿ ರಿವಾಜುಗಳು ಸೈನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬ್ರಿಟನ್ನರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಿಂಗ್ ಚಾರ್ಲ್ಸ್ III ಪಟ್ಟಾಭಿಷೇಕ : ದಶಕದ ವೈಭವಕ್ಕೆ ಸಾಕ್ಷಿಯಾದ ಲಂಡನ್