ಪೋರ್ಚುಗಲ್: ಹೆಚ್ಚಿನ ಜನರು ಹೂಸು ಬಿಡುವ ಸಮಸ್ಯೆ ಹೊಂದಿರುತ್ತಾರೆ. ಕೆಲವೊಮ್ಮೆ ಅದರಿಂದ ಅವಮಾನವನ್ನೂ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆ ಪ್ರಾಣಕ್ಕೂ ಮಾರಕವಾಗಬಹುದು. ವಿಹ್ ಟ್ಯೂಬ್ ಎಂಬ ಬ್ರೆಜಿಲಿಯನ್ ಪ್ರಭಾವಿ ಮಹಿಳೆಯೊಬ್ಬಳು ಹೂಸು ಹೊರಬಿಡದೇ ಹಿಡಿದಿಟ್ಟುಕೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಳಕಿಗೆ ಬಂದಿದೆ.
21 ವರ್ಷದ ವಿಹ್ ಟ್ಯೂಬ್ ಎಂಬವರ ಪೂರ್ಣ ಹೆಸರು ವಿಟ್ಟೋರಿಯಾ ಡಿ ಫೆಲಿಸ್ ಮೊರೇಸ್. ಇವರು ಪೋರ್ಚುಗಲ್‌ನಲ್ಲಿ ನಡೆದ ರಿಯೊ ಲಿಸ್ಬೋವಾ 2022 ಸಂಗೀತ ಉತ್ಸವದ ಸಮಯದಲ್ಲಿ ತೀವ್ರವಾದ ಹೊಟ್ಟೆ ನೋವು ಅನುಭವಿಸಿದ್ದರು. ಇದಕ್ಕೆ ಕಾರಣವನ್ನೂ ಅವರು ತಿಳಿಸಿದ್ದಾರೆ. ವಿಹ್ ಟ್ಯೂಬ್ ತನ್ನ ಗೆಳೆಯ ಎಲಿಯೆಜರ್ ಜೊತೆಗೆ ಕಾರ್ಯಕ್ರಮಕ್ಕೆ ವಿಮಾನದಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ಹೂಸು ಬಂದಿದೆ. ಆದರೆ ಆತನ ಎದುರು ಹೂಸು ಬಿಡಲು ತುಂಬಾ ನಾಚಿಕೆ ಮತ್ತು ಮುಜುಗರಕ್ಕೊಳಗಾಗಿದ್ದರು. ಹೀಗಾಗಿ ಆಕೆ ಅದನ್ನು ಕಂಟ್ರೋಲ್ ಮಾಡಲು ಯತ್ನಿಸಿದ್ದಾರೆ.
ಇದನ್ನೂ ಓದಿ: ತನ್ನದೇ ವಾಯು ಮಾರುವ ಚಿತ್ರ - ವಿಚಿತ್ರ ಉದ್ಯಮಕ್ಕೆ ಬ್ರೇಕ್ ಹೇಳಿದ ಸೆಲೆಬ್ರಿಟಿ! ಕಾರಣ?
ಫಾರ್ಟಿಂಗ್(ಹೂಸು) ಕಂಟ್ರೋಲ್ ಮಾಡಿದ್ದರಿಂದ ವಿಹ್ಗೆ ವಿಪರೀತ ಹೊಟ್ಟೆ ನೋವಿನ ಸಮಸ್ಯೆ ಎದುರಾಯಿತು. ಕೂಡಲೇ ಆಕೆಯನ್ನು ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಅವರು ಚೇತರಿಸಿಕೊಂಡರು. ಈ ಎಲ್ಲ ಪ್ರಸಂಗವನ್ನು ವಿಹ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಸಂಗತಿ ವೈರಲ್ ಆಗಿದ್ದು, ಜನರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.