ಇಸ್ತಾಂಬುಲ್(ಟರ್ಕಿ): ಇಲ್ಲಿನ ಪಾದಚಾರಿ ಪ್ರವಾಸಿ ಮಾರ್ಗವಾದ ಇಸ್ತಿಕ್‌ಲಾಲ್ ಬಳಿ ಭಾನುವಾರ ಮಧ್ಯಾಹ್ನ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್, 'ನಾವು ಇದನ್ನು ಭಯೋತ್ಪಾದನೆಯ ಕೃತ್ಯವೆಂದು ಪರಿಗಣಿಸುತ್ತೇವೆ. ಮಹಿಳೆಯೊಬ್ಬರು ಈ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯ ಮೂಲಕ ತಿಳಿದು ಬಂದಿದೆ' ಎಂದು ತಿಳಿಸಿದ್ದಾರೆ.
-
❗The number of victims of the explosion in #Istanbul has increased to six, said #Turkish President Recep Tayyip #Erdogan. According to him, 53 people were injured. pic.twitter.com/75BLaG1RUf
— NonMua (@NonMyaan) November 13, 2022 " class="align-text-top noRightClick twitterSection" data="
">❗The number of victims of the explosion in #Istanbul has increased to six, said #Turkish President Recep Tayyip #Erdogan. According to him, 53 people were injured. pic.twitter.com/75BLaG1RUf
— NonMua (@NonMyaan) November 13, 2022❗The number of victims of the explosion in #Istanbul has increased to six, said #Turkish President Recep Tayyip #Erdogan. According to him, 53 people were injured. pic.twitter.com/75BLaG1RUf
— NonMua (@NonMyaan) November 13, 2022
ಈ ದಾಳಿಯ ಕುರಿತು ಈಗಾಗಲೇ ಟರ್ಕಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇದರ ಹಿಂದೆ ಯಾರೇ ಇದ್ರೂ ಬಿಡುವುದಿಲ್ಲ ಎಂದು ಸರ್ಕಾರ ವಾಗ್ದಾನ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್: ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟದ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಸ್ಫೋಟದ ದೃಶ್ಯ ಮತ್ತು ಸದ್ದು ಕೇಳಬಹುದು. ಅಷ್ಟೇ ಅಲ್ಲ, ದಾರಿಹೋಕರು ಆತಂಕದಿಂದ ಓಡುತ್ತಿರುವುದನ್ನು ನೋಡಬಹುದು.
-
On Sunday morning, a bomb was detonated in the heart of Istanbul, Turkey. At least 6 people have been pronounced dead. Take a look at the security footage:pic.twitter.com/WKbAi9vhKY
— Steve Hanke (@steve_hanke) November 13, 2022 " class="align-text-top noRightClick twitterSection" data="
">On Sunday morning, a bomb was detonated in the heart of Istanbul, Turkey. At least 6 people have been pronounced dead. Take a look at the security footage:pic.twitter.com/WKbAi9vhKY
— Steve Hanke (@steve_hanke) November 13, 2022On Sunday morning, a bomb was detonated in the heart of Istanbul, Turkey. At least 6 people have been pronounced dead. Take a look at the security footage:pic.twitter.com/WKbAi9vhKY
— Steve Hanke (@steve_hanke) November 13, 2022
ಜನನಿಬಿಡ ರಸ್ತೆಯಲ್ಲಿ ಸ್ಫೋಟ: ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಅನೇಕ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಿವೆ. ಈ ಹಿಂದೆಯೂ 2015 ಮತ್ತು 2017ರಲ್ಲಿ ಇಲ್ಲಿ ಬಾಂಬ್ ಸ್ಫೋಟಗಳು ನಡೆದಿದ್ದವು. ಆಗ ದುಷ್ಕೃತ್ಯದ ಹೊಣೆಗಾರಿಕೆಯನ್ನು ಇಸ್ಲಾಮಿಕ್ ಸ್ಟೇಟ್ ಮತ್ತು ಕೆಲವು ಕುರ್ದಿಶ್ ಗುಂಪುಗಳು ಹೊತ್ತುಕೊಂಡಿದ್ದವು.
-
India conveys its deepest condolences to the Government and people of Türkiye on the tragic loss of lives in the blast that took place in Istanbul today. Our sympathies are also with those who sustained injuries. We wish them a speedy recovery.
— Arindam Bagchi (@MEAIndia) November 13, 2022 " class="align-text-top noRightClick twitterSection" data="
">India conveys its deepest condolences to the Government and people of Türkiye on the tragic loss of lives in the blast that took place in Istanbul today. Our sympathies are also with those who sustained injuries. We wish them a speedy recovery.
— Arindam Bagchi (@MEAIndia) November 13, 2022India conveys its deepest condolences to the Government and people of Türkiye on the tragic loss of lives in the blast that took place in Istanbul today. Our sympathies are also with those who sustained injuries. We wish them a speedy recovery.
— Arindam Bagchi (@MEAIndia) November 13, 2022
ಸಂತಾಪ ವ್ಯಕ್ತಪಡಿಸಿದ ಭಾರತ: ಇಸ್ತಾಂಬುಲ್‌ನಲ್ಲಿ ಬಾಂಬ್ ಸ್ಫೋಟಗೊಂಡು ಸಂಭವಿಸಿದ ಸಾವುಗಳ ಬಗ್ಗೆ ಭಾರತವು ಟರ್ಕಿ ಸರ್ಕಾರ ಮತ್ತು ಜನರಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ. ಸಾವಿಗೀಡಾದ ಕುಟುಂಬದ ಜತೆ ನಮ್ಮ ಸಹಾನುಭೂತಿ ಇದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಇನ್ನು, ಈ ದಾಳಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಯುಎಸ್ ಏರ್‌ಶೋದಲ್ಲಿ 2 ವಿಮಾನಗಳ ಮಧ್ಯೆ ಡಿಕ್ಕಿ; 6 ಸಾವು ಶಂಕೆ- ವಿಡಿಯೋ