ETV Bharat / international

ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಫೋಟ: 11 ಕಾರ್ಮಿಕರು ಸಾವು

author img

By

Published : Aug 20, 2023, 10:07 AM IST

Bomb blast in Pakistan: ಬಾಂಬ್ ಸ್ಫೋಟಕ್ಕೆ ಪಾಕಿಸ್ತಾನ ಮತ್ತೆ ನಲುಗಿದೆ. ಉತ್ತರ ವಜೀರಿಸ್ತಾನದಲ್ಲಿ ನಡೆದ ಅಪಾರ ಸಾವು, ನೋವು ಸಂಭವಿಸಿದೆ.

Representative image
ಪ್ರಾತಿನಿಧಿಕ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಉತ್ತರ ವಜೀರಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 11 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಪಾಕ್​ ಮಾಧ್ಯಮಗಳ ಪ್ರಕಾರ, ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನವನ್ನು ಭಯೋತ್ಪಾದಕರು ಸ್ಫೋಟಿಸಿದ್ದಾರೆ ಎಂದು ಡೆಪ್ಯುಟಿ ಕಮಿಷನರ್ ರೆಹಾನ್ ಗುಲ್ ಖಟ್ಟಕ್ ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡಗಳು ಮತ್ತು ಪೊಲೀಸ್ ತುಕಡಿಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Blast in Balochistan: ಯೂನಿಯನ್​ ಕೌನ್ಸಿಲ್​ ಅಧ್ಯಕ್ಷ ಸೇರಿ 7 ಮಂದಿ ಸಾವು!

ರಾಜಕೀಯ ಪಕ್ಷದ ಸಮಾವೇಶದಲ್ಲಿ ಸ್ಫೋಟ: ಇತ್ತೀಚೆಗೆ ಪಾಕಿಸ್ತಾನದ ಬಜೌರ್‌ ಎಂಬಲ್ಲಿ ಆತ್ಮಹತ್ಯಾ ಬಾಂಬ್​ ಸ್ಫೋಟ ಉಂಟಾಗಿತ್ತು. 23 ಮಕ್ಕಳು ಸೇರಿದಂತೆ ಕನಿಷ್ಠ 63 ಜನರು ಸಾವನ್ನಪ್ಪಿದ್ದರು. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿತ್ತು. ಗಡಿ ಜಿಲ್ಲೆ ಬಜೌರ್‌ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶದಲ್ಲಿ ಘಟನೆ ನಡೆದಿತ್ತು.

ಖೈಬರ್ ಪಖ್ತುಂಖ್ವಾದಲ್ಲಿ ಜೆಯುಐ-ಎಫ್‌ನ ವಕ್ತಾರ ಅಬ್ದುಲ್ ಜಲೀಲ್ ಖಾನ್ ಹೇಳುವ ಪ್ರಕಾರ, ಕಳೆದ ಜು.29ರ ಸಂಜೆ 4 ಗಂಟೆಗೆ ಪ್ರಬಲ ಬಾಂಬ್ ಸ್ಫೋಟಗೊಂಡಿತ್ತು. ಮೌಲಾನಾ ಲಯೀಕ್ ಅವರು ಸಮಾವೇಶ ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಸ್ಫೋಟಿಸಲಾಗಿತ್ತು. ಜೆಯುಐ-ಎಫ್ ಕೇಂದ್ರ ಸಮಿತಿ ಸದಸ್ಯ ಖೈಬರ್ ಪಖ್ತುಂಖ್ವಾ ಗವರ್ನರ್ ಹಾಜಿ ಗುಲಾಂ ಅಲಿ ಬಾಂಬ್ ಸ್ಫೋಟದಿಂದ ಉಂಟಾದ ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದರು. ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪ್ರಾಂತ್ಯದ ಉಸ್ತುವಾರಿ ಮುಖ್ಯಮಂತ್ರಿ ಅಜಮ್ ಖಾನ್ ಅವರಿಗೆ ಒತ್ತಾಯಿಸಿದ್ದರು.

ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಟಿಟಿಪಿ) ನಡುವಿನ ಕದನ ವಿರಾಮದ ನಂತರ ಖೈಬರ್ ಪಂಖ್ತುಂಕ್ವಾ ಮತ್ತು ಬಲೂಚಿಸ್ತಾನ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿವೆ. ಜುಲೈನಲ್ಲಿ ಬಿಡುಗಡೆಯಾದ ವರದಿಯಂತೆ, ದೇಶದಲ್ಲಿ ಆತ್ಮಹತ್ಯಾ ದಾಳಿ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ.

2023ರ ಮೊದಲ ಏಳು ತಿಂಗಳಲ್ಲಿ ಪಾಕಿಸ್ತಾನ 18 ಆತ್ಮಾಹುತಿ ದಾಳಿಗೆ ತುತ್ತಾಗಿತ್ತು. ಘಟನೆಯಲ್ಲಿ 200 ಜನರು ಬಲಿಯಾಗಿದ್ದು, 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು ಎಂದು ಪಾಕಿಸ್ತಾನ ಮೂಲದ ಪತ್ರಿಕೆ ವರದಿ ಮಾಡಿತ್ತು. ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಇತ್ತೀಚೆಗೆ ಭಯೋತ್ಪಾದನೆ ಉಲ್ಬಣವಾಗಿರುವ ಬಗ್ಗೆ ಮಾತುಕತೆ ಪುನರಾರಂಭಿಸಲು ಭಯೋತ್ಪಾದಕರ 'ನಿಷ್ಫಲ ಪ್ರಯತ್ನ' ಎಂದು ಹೇಳಿದ್ದರು.

ಇದನ್ನೂ ಓದಿ: Blast in Pakistan: ರಾಜಕೀಯ ಪಕ್ಷದ ಸಮಾವೇಶದಲ್ಲಿ ಪ್ರಬಲ ಬಾಂಬ್​ ಸ್ಫೋಟ.. 40 ಜನ ಬಲಿ, 200 ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.