ETV Bharat / international

ಬ್ರಿಟನ್ ಪ್ರಧಾನಿ ಲಿಜ್​ ಟ್ರಸ್​​ಗೆ ಮತ್ತೆ ಶಾಕ್​..ಗೃಹ ಸಚಿವೆ ಬಳಿಕ ಮುಖ್ಯ ಸಚೇತಕರ ರಾಜೀನಾಮೆ - ief Whip Wendy Morton resigns

ಬ್ರಿಟನ್​ ಪ್ರಧಾನಿ ಲಿಜ್​ ಟ್ರಸ್​ ವಿರುದ್ಧ ಅಸಮಾಧಾನ ಹೆಚ್ಚಾಗಿದೆ. ಗೃಹ ಸಚಿವ ಸ್ಥಾನಕ್ಕೆ ನಿನ್ನೆಯಷ್ಟೇ ಸುಯೆಲ್ಲಾ ರಾಜೀನಾಮೆ ನೀಡಿದ ಬಳಿಕ ಸರ್ಕಾರದ ಮುಖ್ಯ ಸಚೇತಕ ಹುದ್ದೆಯಿಂದ ಇನ್ನೊಬ್ಬರು ಹಿಂದೆ ಸರಿದಿದ್ದಾರೆ.

chief-whip-wendy-morton-resigns
ಗೃಹ ಸಚಿವೆ ಬಳಿಕ ಮುಖ್ಯ ಸಚೇತಕರ ರಾಜೀನಾಮೆ
author img

By

Published : Oct 20, 2022, 8:53 AM IST

ಲಂಡನ್: ಬ್ರಿಟನ್ ಗೃಹ ಸಚಿವೆ, ಭಾರತೀಯ ಮೂಲದ ಸುಯೆಲ್ಲಾ ರಾಜೀನಾಮೆ ನೀಡಿದ ನಂತರ ಪ್ರಧಾನಿ ಲಿಜ್​ ಟ್ರಸ್​​ಗೆ ಮತ್ತೊಂದು ಹೊಡೆತ ಬಿದ್ದಿದೆ. ಮುಖ್ಯ ಸಚೇತಕ ವೆಂಡಿ ಮಾರ್ಟನ್ ಅವರು ತಮ್ಮ ಸ್ಥಾನಕ್ಕೆ ರಿಸೈನ್​ ಮಾಡಿದ್ದಾರೆ.

ಸರ್ಕಾರದ ಮುಖ್ಯ ಸಚೇತಕರಾಗಿರುವ ವೆಂಡಿ ಮಾರ್ಟನ್ ಅವರು, ಉಪ ಸಚೇತಕ ಕ್ರೇಗ್ ವಿಟ್ಟೇಕರ್ ಅವರೊಂದಿಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಸಂಸದೆ ವೆಂಡಿ ಮಾರ್ಟನ್​ರನ್ನು ಪ್ರಧಾನಿ ಲಿಜ್​ ಟ್ರಸ್​ ಅವರು ಕೆಲ ದಿನಗಳ ಹಿಂದಷ್ಟೇ ಸರ್ಕಾರದ ಸಚೇತಕರಾಗಿ ನೇಮಕ ಮಾಡಿದ್ದರು.

ಅಧಿಕೃತ ಇ-ಮೇಲ್ ಅನ್ನು ವೈಯಕ್ತಿಕವಾಗಿ ಕಳುಹಿಸಿದ್ದಕ್ಕೆ ಗೃಹ ಸಚಿವೆಯಾಗಿದ್ದ ಸುಯೆಲ್ಲಾ ಅವರು ರಾಜೀನಾಮೆ ನೀಡಿದ್ದರು. ಪ್ರಧಾನಿ ಲಿಜ್​ ಟ್ರಸ್​ರ ಮೇಲಿರುವ ಅಸಮಾಧಾನಕ್ಕೆ ಸುಯೆಲ್ಲಾ ಅವರು ಸ್ಥಾನ ತೊರೆದಿದ್ದಾರೆ ಎಂದು ಹೇಳಲಾಗಿದೆ.

ಸುಯೆಲ್ಲಾ ಅವರಿಂದ ತೆರವಾದ ಗೃಹ ಮಂತ್ರಿ ಸ್ಥಾನಕ್ಕೆ ಗ್ರಾಂಟ್ ಶಾಪ್ಸ್ ಅವರನ್ನು ಹೊಸ ನೇಮಿಸಲಾಗಿದೆ. ಲಿಜ್​ ಟ್ರಸ್​ ಅವರು ಸಿರಿವಂತರ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಾಗಿ ಚುನಾವಣೆಗೂ ಮೊದಲು ಘೋಷಿಸಿದ್ದರು. ಬಳಿಕ ಇದನ್ನು ಪಾಲಿಸದೇ ಇರುವ ಕಾರಣ ಆಡಳಿತ ವಿರೋಧಿ ಅಲೆ ಉಂಟಾಗಿದೆ. ಲಿಜ್​ ಟ್ರಸ್​ ಅವರು ಭಾರತ ಮೂಲದ ರಿಷಿ ಸುನಕ್​ ಅವರನ್ನು ಸೋಲಿಸಿ ಪ್ರಧಾನಿಯಾಗಿದ್ದರು.

ಓದಿ: ವಾರಾಣಸಿ ದೆಹಲಿಯಲ್ಲಿ ಎನ್​ಐಎ ದಾಳಿ.. ಐಸಿಸ್​ ಮಾಡ್ಯೂಲ್ ಶಂಕಿತನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.