ದಾವೋಸ್: ಮೈಕ್ರೊಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಶನಿವಾರ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ (ಡಬ್ಲೂಇಎಫ್) ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ನಡೆದ ಸಭೆಯಲ್ಲಿ ಭಾರತದ 'ಕೋವಿಡ್ ಲಸಿಕಾ ಅಭಿಯಾನ'ವನ್ನು ಶ್ಲಾಘಿಸಿದ್ದಾರೆ.
ಡಾ.ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಲು ಮತ್ತು ಜಾಗತಿಕ ಆರೋಗ್ಯದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳಲು ಇದು ಅದ್ಭುತ ಸಮಯವಾಗಿದೆ. ವ್ಯಾಕ್ಸಿನೇಷನ್ ಡ್ರೈವ್ನಲ್ಲಿ ಭಾರತದ ಯಶಸ್ಸು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಪ್ರಪಂಚಕ್ಕೆ ಅನೇಕ ಪಾಠಗಳನ್ನು ನೀಡುತ್ತದೆ ಎಂದು ಬಿಲ್ ಗೇಟ್ಸ್ ಹೇಳಿದರು.
ಮೇ 25ರಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಬಿಲ್ ಗೇಟ್ಸ್ ಅವರೊಂದಿಗೆ ಫೋಟೋಗಳನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ. "#WEF22 ನಲ್ಲಿ @ಬಿಲ್ಗೇಟ್ಸ್ ಅವರೊಂದಿಗೆ ಸಂವಹನ ನಡೆಸಲು ಸಂತೋಷವಾಗಿದೆ. ಅವರು ಕೋವಿಡ್-19 ನಿರ್ವಹಣೆ ಮತ್ತು ಬೃಹತ್ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಭಾರತದ ಯಶಸ್ಸನ್ನು ಶ್ಲಾಘಿಸಿದರು ಎಂದು ಬರೆದುಕೊಂಡಿದ್ದಾರೆ.
-
A pleasure to interact with @BillGates at #WEF22.
— Dr Mansukh Mandaviya (@mansukhmandviya) May 25, 2022 " class="align-text-top noRightClick twitterSection" data="
He appreciated India's success in #COVID19 management & mammoth vaccination efforts. pic.twitter.com/ZO2mxrvbK1
">A pleasure to interact with @BillGates at #WEF22.
— Dr Mansukh Mandaviya (@mansukhmandviya) May 25, 2022
He appreciated India's success in #COVID19 management & mammoth vaccination efforts. pic.twitter.com/ZO2mxrvbK1A pleasure to interact with @BillGates at #WEF22.
— Dr Mansukh Mandaviya (@mansukhmandviya) May 25, 2022
He appreciated India's success in #COVID19 management & mammoth vaccination efforts. pic.twitter.com/ZO2mxrvbK1
"ಡಿಜಿಟಲ್ ಆರೋಗ್ಯ, ರೋಗ ನಿಯಂತ್ರಣ, ನಿರ್ವಹಣೆ, ಎಂಆರ್‌ಎನ್‌ಎ ಪ್ರಾದೇಶಿಕ ಕೇಂದ್ರಗಳ ರಚನೆ ಮತ್ತು ಕೈಗೆಟುಕುವ ಮತ್ತು ಗುಣಮಟ್ಟದ ರೋಗ ನಿರ್ಣಯ ಮತ್ತು ವೈದ್ಯಕೀಯ ಸಾಧನಗಳ ಅಭಿವೃದ್ಧಿ ಸೇರಿದಂತೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ವಿಷಯಗಳನ್ನು ನಾವು ಚರ್ಚಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮಿಷನ್ ಇಂದ್ರಧನುಷ್ 4.0 ಲಸಿಕಾ ಅಭಿಯಾನ: ಮನ್ಸುಖ್ ಮಾಂಡವಿಯಾ ಚಾಲನೆ