ETV Bharat / international

SCO ಶೃಂಗಸಭೆಯಲ್ಲಿ ಭಾಗವಹಿಸಲು ಪಾಕ್ ಸಿದ್ಧವಿದೆ.. ಆದರೆ ಭಾರತ ವರ್ಚುಯಲ್ ಸಭೆ ಆಯೋಜಿಸಿದೆ: ಬಿಲಾವಲ್ ಭುಟ್ಟೋ

ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಭಾಗವಹಿಸುತ್ತಾರೆ ಎಂದು ಪರಿಗಣಿಸಲಾಗಿತ್ತು. ಆದರೆ, ಭಾರತವು ಜುಲೈ 4 ರಂದು ವರ್ಚುಯಲ್ ರೂಪದಲ್ಲಿ SCO ವಾರ್ಷಿಕ ಶೃಂಗಸಭೆಯನ್ನು ಆಯೋಜಿಸಿದೆ ಎಂದು ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.

bilawal bhutto zardari
ಬಿಲಾವಲ್ ಭುಟ್ಟೋ
author img

By

Published : Jun 17, 2023, 7:03 AM IST

ಇಸ್ಲಾಮಾಬಾದ್: SCO (ಶಾಂಘೈ ಸಹಕಾರ ಸಂಘಟನೆ) ಶೃಂಗಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾಗವಹಿಸುತ್ತಾರೆಂದು ಪರಿಗಣಿಸಲಾಗಿತ್ತು. ಆದರೆ, ಭಾರತ ದೇಶವು ವರ್ಚುಯಲ್ ರೂಪದ ಸಭೆಯನ್ನು ಘೋಷಿಸಿದೆ ಎಂದು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದರು.

ಇಸ್ಲಾಮಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ರಾಟೆಜಿಕ್ ಸ್ಟಡೀಸ್ (ISSI) 50 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು. "SCO-CFM ನಲ್ಲಿ ಭಾಗವಹಿಸಲು ನನಗೆ ಈ ವರ್ಷ ಗೋವಾಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು. SCO ರಾಷ್ಟ್ರಗಳ ಮುಖ್ಯಸ್ಥರ (HOS) ಸಭೆಯು ಭಾರತದಲ್ಲಿ ಶೀಘ್ರದಲ್ಲೇ ನಡೆಯಲಿದೆ. SCO ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸುವ ವಿಧಾನವನ್ನು ಪಾಕಿಸ್ತಾನ ಪರಿಗಣಿಸುತ್ತಿದ್ದಂತೆ, ಭಾರತವು ಶೃಂಗಸಭೆಯನ್ನು ವರ್ಚುಯಲ್ ರೂಪದಲ್ಲಿ ನಡೆಸುವುದಾಗಿ ಘೋಷಿಸಿತು" ಎಂದು ಹೇಳಿದರು.

"ಎಸ್​ಸಿಒ, ಯುನ್​ ಸೇರಿದಂತೆ ಇತರ ಬಹುಪಕ್ಷೀಯ ಸಂಸ್ಥೆಗಳ ಮೂಲಕ ಭಾರತದೊಂದಿಗೆ ತೊಡಗಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಪರಸ್ಪರ ಗೌರವ, ಸಾರ್ವಭೌಮತೆ ಮತ್ತು ಸಮಾನತೆಯ ಆಧಾರದ ಮೇಲೆ ಭಾರತದೊಂದಿಗೆ ಸಹಕಾರ ಮತ್ತು ಉತ್ತಮ ನೆರೆಹೊರೆಯ ಸಂಬಂಧಗಳನ್ನು ಹೊಂದಲು ಪಾಕ್​ ಬದ್ಧವಾಗಿದೆ" ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.

SCO ದ ಪ್ರಸ್ತುತ ಅಧ್ಯಕ್ಷರಾಗಿರುವ ಭಾರತವು ತನ್ನ ಸಾಮರ್ಥ್ಯದಲ್ಲಿ ಶೃಂಗಸಭೆ ಆಯೋಜಿಸುತ್ತಿದೆ. ಜುಲೈ 4 ರಂದು ವರ್ಚುಯಲ್ ಮೂಲಕ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯನ್ನು ನಡೆಸುವ ನಿರ್ಧಾರವನ್ನು ಭಾರತವು ಈ ತಿಂಗಳ ಆರಂಭದಲ್ಲಿ ಪ್ರಕಟಿಸಿತ್ತು. ಈ ವರ್ಷದ ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ ಎರಡು ದಿನಗಳ ಸಮಾವೇಶ ನಡೆದಿದ್ದು, ವಿದೇಶಾಂಗ ಮಂತ್ರಿಗಳಿಗೆ ಆತಿಥ್ಯ ವಹಿಸಿತ್ತು. ಜೊತೆಗೆ, ಶಾಂಘೈ ಸಹಕಾರ ಸಂಸ್ಥೆ ಸದಸ್ಯ ರಾಷ್ಟ್ರಗಳಾದ ಚೀನಾ, ರಷ್ಯಾ, ಕಿರ್ಗಿಸ್ತಾನ್, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು.

ಇದನ್ನೂ ಓದಿ : ಭಯೋತ್ಪಾದನೆಯ ಬೆದರಿಕೆ ತೊಡೆದುಹಾಕಿ ಶಾಂತಿ ಸ್ಥಾಪಿಸಲು ಪಾಕಿಸ್ತಾನ ಪ್ರತಿಜ್ಞೆ!

ಭಾರತ ಮತ್ತು ಪಾಕಿಸ್ತಾನ 2017 ರಲ್ಲಿ ಖಾಯಂ ಸದಸ್ಯತ್ವ ಪಡೆದವು. ಭಾರತವನ್ನು 2005 ರಲ್ಲಿ SCO ನ ವೀಕ್ಷಕರನ್ನಾಗಿ ಮಾಡಲಾಯಿತು. ಈ ವೇಳೆ ಸಾಮಾನ್ಯವಾಗಿ ಯುರೇಷಿಯನ್ ಪ್ರದೇಶದಲ್ಲಿ ಭದ್ರತೆ ಮತ್ತು ಆರ್ಥಿಕ ಸಹಕಾರದ ಕುರಿತು ಗಮನ ಕೇಂದ್ರೀಕರಿಸುವ ಸಲುವಾಗಿ ಮಂತ್ರಿಗಳ ಮಟ್ಟದ ಸಭೆಗಳನ್ನು ನಡೆಸಲಾಗಿದೆ.

ಇದನ್ನೂ ಓದಿ : ಎಸ್​ಸಿಒ ವಿದೇಶಾಂಗ ಸಚಿವರ ಸಭೆ: ಶೇಕ್​ ಹ್ಯಾಂಡ್​ ಇಲ್ಲ.. 'ನಮಸ್ತೆ' ಎಂದು ಸ್ವಾಗತಿಸಿದ ಭಾರತ

ಭಾರತವು ಎಸ್​ಸಿಒ ಮತ್ತು ಅದರ ಪ್ರಾದೇಶಿಕ ಭಯೋತ್ಪಾದನೆ-ವಿರೋಧಿ ರಚನೆ (RATS) ಯೊಂದಿಗೆ ತನ್ನ ಭದ್ರತೆಗೆ ಸಂಬಂಧಿಸಿದ ಸಹಕಾರವನ್ನು ಗಾಢವಾಗಿಸುವಲ್ಲಿ ತೀವ್ರ ಆಸಕ್ತಿ ತೋರಿದೆ, RATS ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಕುರಿತು ವ್ಯವಹರಿಸುತ್ತದೆ.

ಇದನ್ನೂ ಓದಿ : 172 ಮತ ತೋರಿಸಿ ಇಲ್ಲವೇ ಮನೆಗೆ ನಡೆಯಿರಿ : ಇಮ್ರಾನ್​ ಖಾನ್​ಗೆ ಜರ್ದಾರಿ ಸವಾಲು​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.