ETV Bharat / international

ಬೀಜಿಂಗ್‌ನಲ್ಲಿ ರೆಸ್ಟೋರೆಂಟ್‌ಗಳು​ ಬಂದ್​; ಕೋವಿಡ್ ನೆಗೆಟಿವ್​ ವರದಿ ಕಡ್ಡಾಯ - ಕೋವಿಡ್ ನೆಗೆಟಿವ್​ ವರದಿ ಕಡ್ಡಾಯ

ಚೀನಾದಲ್ಲಿ ದಿನದಿಂದ ದಿನಕ್ಕೆ ಓಮಿಕ್ರಾನ್ ವೇರಿಯಂಟ್ ಪ್ರಕರಣಗಳ​ ಸಂಖ್ಯೆ ಏರಿಕೆಯಾಗುತ್ತಿದೆ. ಪರಿಣಾಮ ಕೋವಿಡ್-19 ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಕೋವಿಡ್ ಪರೀಕ್ಷೆಯ ನೆಗೆಟಿವ್​ ವರದಿ ಕಡ್ಡಾಯಗೊಳಿಸಲಾಗಿದೆ.

ಬೀಜಿಂಗ್
ಬೀಜಿಂಗ್
author img

By

Published : May 2, 2022, 12:32 PM IST

ಬೀಜಿಂಗ್(ಚೀನಾ): ಕೊರೊನಾ​ ಹೊಸ ಅಲೆ ವೇಗವಾಗಿ ಹರಡುತ್ತಿದ್ದು ರಾಜಧಾನಿ ಬೀಜಿಂಗ್​ನಲ್ಲಿ ಮತ್ತೆ ಕೋವಿಡ್-19 ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಎಲ್ಲಾ ರೆಸ್ಟೋರೆಂಟ್​ನಲ್ಲಿ ಕುಳಿತು ಭೋಜನ ಮಾಡುವುದನ್ನು ನಿಷೇಧಿಸಲಾಗಿದೆ. ಯುನಿವರ್ಸಲ್ ಸ್ಟುಡಿಯೋಗಳನ್ನು ಮುಚ್ಚಿದ್ದು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಕೋವಿಡ್ ಪರೀಕ್ಷೆಯ ನೆಗೆಟಿವ್​ ವರದಿ ಕಡ್ಡಾಯಗೊಳಿಸಲಾಗಿದೆ.

ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಐದು ದಿನಗಳ ರಜೆ ಇದೆ. ಈ ವೇಳೆ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದ್ದು ನಿರ್ಬಂಧ ವಿಧಿಸಲಾಗಿದೆ. ಇನ್ನೊಂದೆಡೆ, ದಿನದಿಂದ ದಿನಕ್ಕೆ ನಗರದಲ್ಲಿ ಓಮಿಕ್ರಾನ್ ವೇರಿಯಂಟ್ ಪ್ರಕರಣಗಳ​ ಸಂಖ್ಯೆ ಏರಿಕೆಯಾಗುತ್ತಿದೆ. ಶಾಂಘೈ ನಗರದಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸರ್ಕಾರ ಇಲ್ಲಿ ಲಾಕ್‌ಡೌನ್ ವಿಧಿಸಬಹುದು ಎಂಬ ಭಯದಿಂದ ಸ್ಥಳೀಯ ನಿವಾಸಿಗಳು ಕಳೆದ ವಾರದಿಂದಲೇ ಆಹಾರ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಶಾಂಘೈನಲ್ಲಿ ಏಪ್ರಿಲ್ 13 ರಿಂದ ಭಾನುವಾರದವರೆಗೆ ಒಟ್ಟು 7,872 ಸ್ಥಳೀಯ ಪ್ರಕರಣಗಳು ವರದಿಯಾಗಿವೆ. ನಿನ್ನೆ ನಗರದಲ್ಲಿ 38 ಮಂದಿ ಸಾವನ್ನಪ್ಪಿದ್ದು, ಪ್ರಸ್ತುತ ಸಾವಿನ ಸಂಖ್ಯೆ 422 ಕ್ಕೆ ತಲುಪಿದೆ.

ಇದನ್ನೂ ಓದಿ: ದೇಶದಲ್ಲಿ 3,157 ಹೊಸ ಕೋವಿಡ್‌ ಪ್ರಕರಣ ಪತ್ತೆ, 26 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.