ETV Bharat / international

ಉದ್ಘಾಟನೆ ಹೊಸ್ತಿಲಲ್ಲಿರುವ ಅಮೆರಿಕದ ಅಕ್ಷರಧಾಮ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಿಷಿ ಸುನಕ್​ - ಅಮೆರಿಕದ ಅಕ್ಷರಧಾಮ

ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆ ನಗರದಲ್ಲಿ ನಿರ್ಮಾಣವಾಗಿರುವ ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮ ಅಕ್ಟೋಬರ್​ 8 ರಂದು ಉದ್ಘಾಟನೆಯಾಗಲಿದೆ.

PM Modi, PM Rishi Sunak greetings
ಉದ್ಘಾಟನೆ ಹೊಸ್ತಿಲಲ್ಲಿರುವ ಅಮೆರಿಕದ ಅಕ್ಷರಧಾಮ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ, ರಿಷಿ ಸುನಕ್​
author img

By PTI

Published : Oct 3, 2023, 7:27 AM IST

ವಾಷಿಂಗ್ಟನ್​: ಅಮೆರಿಕದ ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆ ನಗರದಲ್ಲಿ ನಿರ್ಮಾಣವಾಗಿರುವ ವಿಶ್ವದ ಎರಡನೇ ಅತೀ ದೊಡ್ಡ ದೇವಾಲಯ ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮ ಉದ್ಘಾಟನೆಗೆ ತಯಾರಾಗಿದೆ. ದೇವಾಲಯದ ಉದ್ಘಾಟನೆಗೂ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಶುಭಾಶಯಗಳನ್ನು ಕೋರಿದ್ದಾರೆ.

ಭಾರತದಿಂದ ಸಾವಿರಾರು ಕಿಲೋ ಮೀಟರ್​ ದೂರ ನ್ಯೂಜೆರ್ಸಿಯ ರಾಬಿನ್ಸ್​ವಿಲ್ಲೆ ನಗರದಲ್ಲಿರುವ ಅಮೆರಿಕದ ಅತೀ ದೊಡ್ಡ ಹಿಂದೂ ದೇವಾಲಯ ಸೆಪ್ಟೆಂಬರ್​ 30ರಿಂದ ಮಹಂತ್​ ಸ್ವಾಮಿ ಮಹಾರಾಜ್​ ಅವರ ಸಮ್ಮುಖದಲ್ಲಿ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭವಾಗಿದ್ದು, ದೇವಾಲಯ ಅಕ್ಟೋಬರ್​ 8 ರಂದು ಉದ್ಘಾಟನೆಯಾಗಲಿದೆ.

ಬಿಎಪಿಎಸ್​ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಪತ್ರ ಬರೆದಿರುವ ಪ್ರಧಾನಿ ಮೋದಿ ಅಕ್ಷರಧಾಮದಲ್ಲಿರುವ ಎಲ್ಲರಿಗೂ ಹಾಗೂ ಅದರಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಶುಭಾಶಯಗಳನ್ನು ಕಳುಹಿಸಿದ್ದಾರೆ. ಪತ್ರದಲ್ಲಿ ಪ್ರಪಂಚದಾದ್ಯಂತ ಇರುವ ಇರುವ ಅಪಾರ ಸಂಖ್ಯೆಯ ಭಕ್ತರಿಗೆ ಇದು ಆಳವಾದ ಆಧ್ಯಾತ್ಮಿಕ ಸುಸಂದರ್ಭವಾಗಿದೆ. ಅಕ್ಷರಧಾಮ ಮಹಾಮಂದಿರದ ಉದ್ಘಾಟನಾ ಕಾರ್ಯಕ್ರಮ, ಆಚರಣೆಗಳು ಭಾರತೀಯ ವಾಸ್ತುಶಿಲ್ಪದ ಶ್ರೇಷ್ಠತೆ ಮತ್ತು ಅದರ ವೈಭವದ ಪ್ರಾಚೀನ ಸಂಸ್ಕೃತಿ ಮತ್ತು ನೀತಿಗಳನ್ನು ಪ್ರದರ್ಶಿಸುತ್ತದೆ ಎಂದು ಬರೆದಿದ್ದಾರೆ.

ಇದು ಭಾರತದಿಂದ ದೂರವಿರುವ ಭಾರತೀಯರಿಗೆ ಅವರ ಸಂಸ್ಕೃತಿ, ಆಚರಣೆಗಳನ್ನು ಹತ್ತಿರವಾಗಿಸುತ್ತದೆ. ಅದರಲ್ಲೂ ವಿಶೇಷವಾಗಿ ತಾಯಿ ಭಾರತದ ಜೊತೆಗಿರುವ ಭಾವನೆ, ಹಾಗೂ ಹೆಮ್ಮೆಪಡಲು ಸಾಧ್ಯವಾಗುತ್ತದೆ. ಭಾರತ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನ ಸಂಬಂಧವನ್ನು ಹಂಚಿಕೊಂಡಿದ್ದು, ಎರಡೂ ರಾಷ್ಟ್ರಗಳು ಈ ಸಂಬಂಧಗಳನ್ನು ದೃಢವಾದ, ಬಹುಮುಖಿ ಸಂಬಂಧವಾಗಿ ಪೋಷಿಸಿ, ವಿಸ್ತರಿಸಿವೆ. ಇದು ಎರಡೂ ದೇಶಗಳ ಜನರ ನಡುವೆ ವ್ಯಾಪಕವಾದ ಸಂವಹನವನ್ನು ಬೆಳೆಸುತ್ತಿವೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ವ್ಯಕ್ತಿಯ ಜೀವನದ ಅಂತಿಮ ಗುರಿಯು 'ಸೇವೆ' ಅಥವಾ ನಿಸ್ವಾರ್ಥ ಸೇವೆಯ ಸುತ್ತ ಸುತ್ತುತ್ತದೆ ಎಂದು ನಮ್ಮ ತತ್ವಶಾಸ್ತ್ರ ಮತ್ತು ಸಂಪ್ರದಾಯಗಳು ಒತ್ತಿಹೇಳುತ್ತವೆ. ಶತಮಾನಗಳಿಂದ ದೇವಾಲಯಗಳು ಸೇವೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಭಕ್ತಿಯ ಕೇಂದ್ರಗಳು ಮಾತ್ರವಲ್ಲದೇ ಕಲೆ, ವಾಸ್ತುಶಿಲ್ಪದ ಶ್ರೇಷ್ಠತೆ, ಸಾಹಿತ್ಯ ಮತ್ತು ಜ್ಞಾನವನ್ನು ವ್ಯಕ್ತಪಡಿಸುವ ವೇದಿಕೆಗಳಾಗಿವೆ. ಇಂತಹ ಆಳವಾದ ಸಾಂಸ್ಕೃತಿಕ ತತ್ವಗಳು ತಲೆಮಾರುಗಳಿಂದ ಮಾನವೀಯತೆಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಅವರು ಬರೆದಿದ್ದಾರೆ.

ಬ್ರಿಟನ್​ ಪ್ರಧಾನಿ ರಿಷಿ ಸುನಕ್​, "ಈ ದೇವಾಲಯದ ಸೌಂದರ್ಯ ಮತ್ತು ಶಾಂತಿ, ಸೌಹಾರ್ದತೆ ಮತ್ತು ಉತ್ತಮ ಮಾನವನಾಗುವ ಸಾರ್ವತ್ರಿಕ ಸಂದೇಶ ನಮ್ಮನ್ನು ಆಶ್ಚರ್ಯಚಕಿತರಾಗಿಸಿದೆ. ಇದು ಕೇವಲ ಆರಾಧನೆಯ ಸ್ಥಳವಲ್ಲ, ಜೊತೆಗೆ ಭಾರತದ ಮೌಲ್ಯಗಳು, ಸಂಸ್ಕೃತಿ ಮತ್ತು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಬಿಂಬಿಸುವ ಹೆಗ್ಗುರುತಾಗಿದೆ" ಎಂದು ಉದ್ಘಾಟನೆ ಹೊಸ್ತಿಲಲ್ಲಿರುವ ಅಕ್ಷರಧಾಮಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಅಮೆರಿಕದ ನ್ಯೂಜೆರ್ಸಿಯಲ್ಲಿ ಅ.8 ರಂದು ಲೋಕಾರ್ಪಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.