ETV Bharat / international

ಬೈಡನ್​ ಪ್ರವಾಸ ಮುಂದೂಡಿಕೆ: ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ಶೃಂಗಸಭೆ ರದ್ದು

ಸಿಡ್ನಿಯಲ್ಲಿ ನಿಗದಿತ ಕ್ವಾಡ್ ನಾಯಕರ ಸಭೆ ನಡೆಯುವುದಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಘೋಷಿಸಿದ್ದಾರೆ.

Australia PM
ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್
author img

By

Published : May 17, 2023, 11:06 AM IST

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮುಂದಿನ ವಾರ ಸಿಡ್ನಿಯಲ್ಲಿ ನಡೆಯಬೇಕಿದ್ದ ಕ್ವಾಡ್ ನಾಯಕರ ಸಭೆ ರದ್ದುಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಬುಧವಾರ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಆಸ್ಟ್ರೇಲಿಯಾ ಪ್ರವಾಸವನ್ನು ಮುಂದೂಡಿದ ನಂತರ ಈ ಘೋಷಣೆ ಮಾಡಲಾಗಿದೆ. ಈ ವಾರಾಂತ್ಯದಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್, ಭಾರತ ಮತ್ತು ಜಪಾನ್ ನಾಯಕರು ಸಭೆ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಬೈಡನ್ ಆಸ್ಟ್ರೇಲಿಯಾ ಪ್ರವಾಸವನ್ನು ಮುಂದೂಡುವುದಾಗಿ ಮಂಗಳವಾರ ಘೋಷಿಸಿದರು. ಪಪುವಾ ನ್ಯೂಗಿನಿಯಾ ಪ್ರವಾಸವನ್ನೂ ಮುಂದೂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಸಾಲದ ಮೇಲಿನ ಸಂಭಾವ್ಯ ಡೀಫಾಲ್ಟ್ ಅನ್ನು ತಡೆಗಟ್ಟಲು ರಿಪಬ್ಲಿಕನ್ ಪಕ್ಷದೊಂದಿಗೆ ನಡೆಯುತ್ತಿರುವ ಅನಿಶ್ಚಿತತೆಗಳು ಮತ್ತು ತೀವ್ರವಾದ ಮಾತುಕತೆಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜೂನ್ 1ರ ಮೊದಲು ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಇಲ್ಲದಿದ್ದರೆ ಯುಎಸ್ ಆರ್ಥಿಕತೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ.

ಇದನ್ನೂ ಓದಿ: ಮುಂದಿನ ತಿಂಗಳು ಕ್ವಾಡ್ ಶೃಂಗಸಭೆಯಲ್ಲಿ ಮೋದಿ - ಬೈಡನ್ ಭೇಟಿ: ಶ್ವೇತಭವನ

ಬೈಡನ್ ಅವರು ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗದ ಕಾರಣ ನಿರಾಶೆಗೊಂಡಿದ್ದಾರೆ. ಆದರೆ ಕ್ವಾಡ್ ನಾಯಕರು ಈ ವಾರಾಂತ್ಯದಲ್ಲಿ ಹಿರೋಷಿಮಾದಲ್ಲಿ G7 ನಾಯಕರ ಸಭೆಯಲ್ಲಿ ಸೇರಲಿದ್ದೇವೆ ಎಂದು ಪ್ರಧಾನಿ ಹೇಳಿದರು. ಅವರ ಪ್ರಕಾರ ಪ್ರಧಾನಿ ಮೋದಿ ಮತ್ತು ಪಿಎಂ ಕಿಶಿದಾ ಮುಂದಿನ ವಾರ ಸಿಡ್ನಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಆದರೆ ಎಲ್ಲಾ ಮೂರು ದೇಶಗಳ ನಾಯಕರು ಇನ್ನೂ ತಮ್ಮ ಯೋಜನೆಗಳನ್ನು ಖಚಿತಪಡಿಡಿಸಿಲ್ಲ. "ನಾವು ಇಂದು ಕ್ವಾಡ್ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದೇವೆ. ಅದರ ಬಗ್ಗೆ ಹೆಚ್ಚಿನ ಘೋಷಣೆಗಳನ್ನು ಮಾಡುತ್ತೇವೆ, ಆದರೆ ಪ್ರಧಾನಿ ಮೋದಿ ಖಂಡಿತವಾಗಿಯೂ ಮುಂದಿನ ವಾರ ಇಲ್ಲಿ ಸ್ವಾಗತಾರ್ಹ ಅತಿಥಿಯಾಗುತ್ತಾರೆ" ಎಂದು ಅಲ್ಬನೀಸ್ ಹೇಳಿದರು.

ಇದನ್ನೂ ಓದಿ: ಬೈಡನ್ ಜೊತೆ ದ್ವಿಪಕ್ಷೀಯ ಮಾತುಕತೆ: ಜಾಗತಿಕ ಶಾಂತಿ, ಸ್ಥಿರತೆಗೆ ಭಾರತ-ಅಮೆರಿಕ ಸ್ನೇಹ ಉತ್ತಮ ಶಕ್ತಿ- ಮೋದಿ

ನವೆಂಬರ್ 2017ರಲ್ಲಿ, ಭಾರತ, ಜಪಾನ್, ಯುಎಸ್ ಮತ್ತು ಆಸ್ಟ್ರೇಲಿಯಾಗಳು ಚೀನಾದ ಆಕ್ರಮಣಕಾರಿ ಮಧ್ಯೆ ಇಂಡೋ-ಪೆಸಿಫಿಕ್‌ನಲ್ಲಿನ ನಿರ್ಣಾಯಕ ಸಮುದ್ರ ಮಾರ್ಗಗಳನ್ನು ಯಾವುದೇ ಪ್ರಭಾವದಿಂದ ಮುಕ್ತವಾಗಿಡಲು ಹೊಸ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು "ಕ್ವಾಡ್" ಅನ್ನು ಸ್ಥಾಪಿಸುವ ದೀರ್ಘಾವಧಿಯ ಪ್ರಸ್ತಾಪಕ್ಕೆ ರೂಪು ನೀಡಿದವು.

ಏನಿದು 'ಕ್ವಾಡ್‌' ಶೃಂಗಸಭೆ?: ಸರಳವಾಗಿ ಕ್ವಾಡ್ ಎಂದು ಕರೆಯಲಾಗುವ ಈ ಶೃಂಗಸಭೆಯ ಪೂರ್ಣ ಹೆಸರು ಕ್ವಾಡ್ರಿಲ್ಯಾಟರಲ್ ಸೆಕ್ಯುರಿಟಿ ಡೈಲಾಗ್. ಆಸ್ಟ್ರೇಲಿಯಾ, ಭಾರತ, ಜಪಾನ್ ಮತ್ತು ಅಮೆರಿಕ ಇದರ ನಾಲ್ಕು ಸದಸ್ಯ ರಾಷ್ಟ್ರಗಳು. ದೇಶಗಳ ನಡುವಣ ಕಾರ್ಯತಂತ್ರದ ಭದ್ರತಾ ಸಂವಾದಕ್ಕಾಗಿ ಜಾಗತಿಕ ವೇದಿಕೆಯಾಗಿ ಕ್ವಾಡ್‌ ಶೃಂಗಸಭೆ ಸೇರಲಾಗುತ್ತದೆ.

ಇದನ್ನೂ ಓದಿ: ಮೇ ತಿಂಗಳಲ್ಲಿ ಜಿ-7 ಶೃಂಗಸಭೆ: ಅಮೆರಿಕ ಅಧ್ಯಕ್ಷ ಜೋ ಬೈಡನ್​ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.