ETV Bharat / international

ಭ್ರಷ್ಟಾಚಾರ ಪ್ರಕರಣದಲ್ಲಿ ಆಂಗ್ ಸಾನ್ ಸೂಕಿಗೆ 6 ವರ್ಷ ಜೈಲು ಶಿಕ್ಷೆ - ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ

ಮಿಲಿಟರಿ ಆಡಳಿತವಿರುವ ಮ್ಯಾನ್ಮಾರ್‌ ನೊಬೆಲ್ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಅವರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಿದೆ.

Aung San Suu Kyi Gets 6 Years In Jail In Corruption Cases
ಆಂಗ್ ಸಾನ್ ಸೂಕಿಗೆ ಆರು ವರ್ಷ ಜೈಲು ಶಿಕ್ಷೆ ಪ್ರಕಟ
author img

By

Published : Aug 15, 2022, 6:09 PM IST

ನೈಪಿಟಾವ್ (ಮ್ಯಾನ್ಮಾರ್‌): ದೇಶದ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಇಲ್ಲಿನ ಮಿಲಿಟರಿ ಕೋರ್ಟ್‌ ಮತ್ತೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ಸೂಕಿ ಅವರಿಗೆ 11 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಲಾಗಿದ್ದು ಅವರು ಜೈಲಿನಲ್ಲಿದ್ದಾರೆ.

77 ವರ್ಷ ವಯಸ್ಸಿನ ನೊಬೆಲ್ ಪ್ರಶಸ್ತಿ ವಿಜೇತೆ ಮತ್ತು ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ವಿರೋಧಿಯಾದ ಸೂಕಿ ವಿರುದ್ಧ ಚುನಾವಣಾ ನಿಮಯಗಳ ಉಲ್ಲಂಘನೆ ಸೇರಿದಂತೆ 19 ವಿವಿಧ ರೀತಿಯ ಆರೋಪಗಳನ್ನು ಹೊರಿಸಲಾಗಿದೆ. ಈ ಆರೋಪಗಳು ಸುಮಾರು 190 ವರ್ಷಗಳ ಗರಿಷ್ಠ ಜೈಲು ಶಿಕ್ಷೆ ಒಳಗೊಂಡಿವೆ. ಆದರೆ, ತಮ್ಮ ವಿರುದ್ಧ ಮಾಡಲಾದ ಎಲ್ಲ ಆರೋಪಗಳನ್ನು ಅಸಂಬದ್ಧ ಎಂದು ಸೂಕಿ ಈಗಾಗಲೇ ಅಲ್ಲಗಳೆದಿದ್ದಾರೆ.

ನೈಪಿಟಾವ್‌ನ ಜೈಲಿನಲ್ಲಿರುವ ಸೂಕಿ ವಿರುದ್ಧ ಹಣ ದುರುಪಯೋಗ ಸೇರಿ ನಾಲ್ಕು ಹೊಸ ಆರೋಪಗಳನ್ನು ಮಾಡಲಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅವರು ಸ್ಥಾಪಿಸಿದ ಸಂಸ್ಥೆಯಾದ ದಾವ್ ಖಿನ್ ಕಿ ಫೌಂಡೇಶನ್‌ನಿಂದ ಅವ್ಯವಹಾರ ನಡೆದಿದೆ. ಮನೆ ನಿರ್ಮಿಸಲು ಮತ್ತು ಸರ್ಕಾರಿ ಸ್ವಾಮ್ಯದ ಭೂಮಿಯನ್ನು ರಿಯಾಯಿತಿ ದರದಲ್ಲಿ ಪಡೆದಿರುವ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ಇದೀಗ ಘೋಷಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಪಶ್ಚಿಮ ಸಿರಿಯಾದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.