ETV Bharat / international

ಸೊಮಾಲಿಯಾ: 40 ಅಲ್ ಶಬಾಬ್ ಉಗ್ರರ ಹತ್ಯೆಗೈದ ಸೇನೆ

ಸೊಮಾಲಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ರಾಷ್ಟ್ರೀಯ ಸೇನೆ ವಿಶೇಷ ಕಾರ್ಯಾಚರಣೆ ನಡೆಸಿ ಅಲ್ ಶಬಾಬ್ ಉಗ್ರ ಸಂಘಟನೆಯ ಹಲವು ಭಯೋತ್ಪಾದರನ್ನು ಹೊಡೆದುರುಳಿಸಿದೆ.

Somalia
ಸೊಮಾಲಿಯಾ
author img

By

Published : Jul 10, 2023, 9:03 AM IST

ಮೊಗಾದಿಶು : ಸೊಮಾಲಿಯಾ ರಾಷ್ಟ್ರೀಯ ಸೇನಾ ಪಡೆಯು (ಎಸ್‌ಎನ್‌ಎ) ದನಾಬ್‌ ಎಂಬಲ್ಲಿ 40 ಅಲ್-ಶಬಾಬ್ ಉಗ್ರಗಾಮಿಗಳನ್ನು ಹತ್ಯೆಗೈದಿದೆ ಎಂದು ಅಧಿಕಾರಿಗಳು ಭಾನುವಾರ ಖಚಿತಪಡಿಸಿದ್ದಾರೆ. ದಕ್ಷಿಣ ಸೊಮಾಲಿಯಾದ ಕೆಳ ಜುಬಾ ಪ್ರದೇಶದಲ್ಲಿ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಭಯೋತ್ಪಾದರನ್ನು ಹೊಡೆದುರುಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸೊಮಾಲಿಯಾ ರಕ್ಷಣಾ ಸಚಿವ ಅಬ್ದುಲ್ಕದಿರ್ ಮೊಹಮ್ಮದ್ ನೂರ್, "ಮಧ್ಯ ಮತ್ತು ದಕ್ಷಿಣ ಸೊಮಾಲಿಯಾದಲ್ಲಿ ಅಲ್-ಖೈದಾ-ಸಂಬಂಧಿತ ಉಗ್ರಗಾಮಿಗಳ ವಿರುದ್ಧ ವೈಮಾನಿಕ ದಾಳಿ ಮತ್ತು ಜಂಟಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಅಲ್-ಶಬಾಬ್ ಉಗ್ರಗಾಮಿಗಳನ್ನು ತಟಸ್ಥಗೊಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ. ನಲ್ವತ್ತು ಉಗ್ರಗಾಮಿಗಳನ್ನು ಹತ್ಯೆಗೈಯ್ಯಲಾಗಿದೆ" ಎಂದಿದ್ದಾರೆ. ಆದ್ರೆ, ಸೇನೆಯ ಕಡೆಯಿಂದ ಸಾವು-ನೋವುಗಳು ಸಂಭವಿಸಿವೆಯೇ ಎಂಬುದರ ಕುರಿತು ಅವರು ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ : ಸೊಮಾಲಿಯಾದಲ್ಲಿ ಕಾರ್​ ಬಾಂಬ್​ ಸ್ಫೋಟಿಸಿ 8 ಜನರ ಕೊಂದ ಅಲ್​ ಖೈದಾ ಬೆಂಬಲಿತ ಉಗ್ರರು

ಸೇನಾ ತರಬೇತಿ ಪೂರ್ಣಗೊಳಿಸಿದ ಮತ್ತು ಸಶಸ್ತ್ರ ಗುಂಪುಗಳ ವಿರುದ್ಧ ಕಾರ್ಯಾಚರಣೆಗೆ ಸೇರಲು ಸಿದ್ಧರಾಗಿದ್ದ ಸಾವಿರಾರು ಸೈನಿಕರಿಗೆ ರಕ್ಷಣಾ ಸಚಿವರು ಬೀಳ್ಕೊಡುಗೆ ಕಾರ್ಯಕ್ರಮ ನೀಡಿದ ಒಂದು ದಿನದ ಬಳಿಕ ಅಲ್ ಶಬಾಬ್ ವಿರುದ್ಧ ಸೇನಾ ದಾಳಿ ನಡೆಸಲಾಗಿದೆ.

ಇದನ್ನೂ ಓದಿ : ಸೊಮಾಲಿಯಾ ಕಾರು ಬಾಂಬ್​ ಸ್ಫೋಟದಲ್ಲಿ ಮೃತರ ಸಂಖ್ಯೆ 100 ಕ್ಕೇರಿಕೆ ; 300 ಜನರಿಗೆ ಗಾಯ

ಈ ಹಿಂದೆ, ಅಂದರೆ 2022ರ ನವೆಂಬರ್​ ತಿಂಗಳಲ್ಲಿ ಸಹ ಅಲ್ ಶಬಾಬ್ ಸಂಘಟನೆಗೆ ಸೇರಿದ 100ಕ್ಕೂ ಉಗ್ರರನ್ನು ಸೊಮಾಲಿಯಾ ರಾಷ್ಟ್ರೀಯ ಸೇನೆಯು ಕೊಂದು ಹಾಕಿತ್ತು. ದೇಶದ ಮಧ್ಯ ಭಾಗದಲ್ಲಿರುವ ಶಾಬೆಲ್ಲೆ ಮತ್ತು ಹಿರಾನ್ ಪ್ರದೇಶದ ಗಡಿಯಲ್ಲಿ ನಡೆಸಿದ ಯೋಜಿತ ಕಾರ್ಯಾಚರಣೆಯಲ್ಲಿ ಉಗ್ರರನ್ನು ಮಟ್ಟಹಾಕಲಾಗಿತ್ತು. ಸತ್ತವರಲ್ಲಿ 10 ಮಂದಿ ಸಂಘಟನೆಯ ಪ್ರಮುಖರು ಎಂದು ಮಾಹಿತಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪ ಸಚಿವ ಅಬ್ದಿರಹ್ಮಾನ್ ಯೂಸೂಫ್ ಅಲ್-ಅದಾಲಾ ತಿಳಿಸಿದ್ದರು.

ಇದನ್ನೂ ಓದಿ : ಸೊಮಾಲಿಯಾ ಸೇನೆಯಿಂದ 100ಕ್ಕೂ ಹೆಚ್ಚು ಅಲ್ ಶಬಾಬ್ ಉಗ್ರರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.