ನ್ಯೂಯಾರ್ಕ್: ಟೈಮ್ ನಿಯತಕಾಲಿಕೆ ಭಾರತದ ಅಹಮದಾಬಾದ್ ಮತ್ತು ಕೇರಳವನ್ನು 2022 ರ 'ವಿಶ್ವದ ಅತ್ಯುತ್ತಮ ಸ್ಥಳಗಳ' ಪಟ್ಟಿಯಲ್ಲಿ ಸೇರಿಸಿದೆ. ಸಂದರ್ಶಿಸಲು ಯೋಗ್ಯವಾದ 50 ಸ್ಥಳಗಳ ಪಟ್ಟಿಯಲ್ಲಿ ಭಾರತದ ಈ ಎರಡು ನಗರಗಳಿವೆ.
ಭಾರತದ ಮೊದಲ ಯುನೆಸ್ಕೋ(UNESCO)ವಿಶ್ವ ಪರಂಪರೆಯ ನಗರವಾಗಿರುವ 'ಅಹಮದಾಬಾದ್' ಪ್ರಾಚೀನ ಮತ್ತು ಆಧುನಿಕ ಆವಿಷ್ಕಾರಗಳನ್ನು ಹೊಂದಿದೆ. ಇದು ಸಾಂಸ್ಕೃತಿಕ ಪ್ರವಾಸೋದ್ಯಮದ ಕೇಂದ್ರ ಎಂದು ನಿಯತಕಾಲಿಕೆ ಬಣ್ಣಿಸಿದೆ.
ಹೆಚ್ಚು ದಿನಗಳ ಕಾಲ ನಡೆಯುವ ನೃತ್ಯೋತ್ಸವ: ಟೈಮ್ ಪ್ರಕಾರ, ನಗರವು ಸಾಬರಮತಿ ನದಿಯ ದಡದಲ್ಲಿದೆ. 36 ಎಕರೆಗಳಲ್ಲಿ ನೆಲೆಗೊಂಡಿರುವ ಶಾಂತಿಯುತ ಆಶ್ರಮದಲ್ಲಿ ನವರಾತ್ರಿಯನ್ನು ಪ್ರತಿವರ್ಷ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಶ್ವದಲ್ಲಿಯೇ ಹೆಚ್ಚು ದಿನಗಳ (9) ಕಾಲ ನೃತ್ಯೋತ್ಸವವನ್ನು ಈ ನಗರದಲ್ಲಿ ಆಚರಿಸಲಾಗುತ್ತದೆ.
ಟೈಮ್ ಪಟ್ಟಿಯಲ್ಲಿ ಭಾರತದ ನೈಋತ್ಯ ಕರಾವಳಿಯಲ್ಲಿರುವ ಕೇರಳವೂ ಸೇರಿದೆ. ಇದು ದೇಶದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದು. ಮನಮೋಹಕ ಕಡಲತೀರಗಳು ಮತ್ತು ಹಚ್ಚಹಸಿರಿನಿಂದ ಕೂಡಿದ ಹಿನ್ನೀರ ಪ್ರದೇಶಗಳು, ಭವ್ಯ ದೇವಾಲಯಗಳು ಮತ್ತು ಅರಮನೆಗಳು ಇರುವ ಕಾರಣಗಳಿಗಾಗಿ ಇದನ್ನು 'ದೇವರ ಸ್ವಂತ ನಾಡು' ಎಂದು ಕರೆಯಲಾಗುತ್ತದೆ.
ಪಟ್ಟಿಯಲ್ಲಿರುವ ವಿಶ್ವದ ಇತರೆ ತಾಣಗಳನ್ನು ನೋಡುವುದಾದರೆ, ಅತ್ಯುತ್ತಮ 50 ಸ್ಥಳಗಳ ಪಟ್ಟಿಯಲ್ಲಿ ರಾಸ್ ಅಲ್ ಖೈಮಾ, ಯುಎಇ-ಪಾರ್ಕ್ ಸಿಟಿ, ಉತಾಹ್-ಸಿಯೋಲ್, ಗ್ರೇಟ್ ಬ್ಯಾರಿಯರ್ ರೀಫ್, ಆಸ್ಟ್ರೇಲಿಯಾ, ಆರ್ಕ್ಟಿಕ್, ವೇಲೆನ್ಸಿಯಾ, ಸ್ಪೇನ್, ಟ್ರಾನ್ಸ್ ಭೂತಾನ್ ಟ್ರಯಲ್- ಭೂತಾನ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಬೊಗೋಟಾ, ಲೋವರ್ ಜಾಂಬೆಜಿ ರಾಷ್ಟ್ರೀಯ ಉದ್ಯಾನ, ಜಾಂಬಿಯಾ, ಇಸ್ತಾಂಬುಲ್ ಮತ್ತು ಕಿಗಾಲಿ, ರುವಾಂಡಾ ಇವೆ.
ಇದನ್ನೂ ಓದಿ: ಗೂಗಲ್ ಡೂಡಲ್: ಬ್ರಹ್ಮಾಂಡದ ಫೋಟೋಗಳನ್ನು ಪೋಸ್ಟ್ ಮಾಡಿ ಸಂಭ್ರಮಿಸಿದ ಗೂಗಲ್