ETV Bharat / international

ಭಾರತದಲ್ಲಿ ರಾಯಭಾರ ಕಚೇರಿ ಮುಚ್ಚಿದ ಅಫ್ಘಾನಿಸ್ತಾನ

Afghanistan closed Indian Embassy: ದೆಹಲಿಯಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಅಫ್ಘಾನಿಸ್ತಾನ ತಿಳಿಸಿದೆ.

Afghanistan announces permanent closure of Indian embassy
ದೆಹಲಿಯಲ್ಲಿನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಬಂದ್​ ಮಾಡುವುದಾಗಿ ಅಫ್ಘಾನಿಸ್ತಾನ ಘೋಷಣೆ
author img

By ANI

Published : Nov 24, 2023, 12:22 PM IST

ನವದೆಹಲಿ: ದೆಹಲಿಯಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿರುವುದಾಗಿ ಅಫ್ಘಾನಿಸ್ತಾನ ಪ್ರಕಟಣೆ ಹೊರಡಿಸಿದೆ. ಭಾರತ ಸರ್ಕಾರದ ನಿರಂತರ ಸವಾಲುಗಳಿಂದಾಗಿ ನವೆಂಬರ್ 23, 2023ರಿಂದ ಜಾರಿಗೆ ಬರುವಂತೆ ಕಚೇರಿಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಅಫ್ಘಾನಿಸ್ತಾನದ ರಾಯಭಾರ ಕಚೇರಿಯ ಕಡೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಅಫ್ಘಾನ್ ರಾಯಭಾರ ಕಚೇರಿಯು ತನ್ನ ಹೇಳಿಕೆಯಲ್ಲಿ, ಭಾರತದಲ್ಲಿನ ಆಫ್ಘನ್ ಪ್ರಜೆಗಳಿಗೆ, ಆಫ್ಘನ್ ಮಿಷನ್‌ಗೆ ನೀಡಿರುವ ಬೆಂಬಲಕ್ಕಾಗಿ ಭಾರತ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು. ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ಮತ್ತು ಕಾಬೂಲ್‌ನಲ್ಲಿ ಕಾನೂನುಬದ್ಧ ಸರ್ಕಾರದ ಅನುಪಸ್ಥಿತಿಯಲ್ಲಿ ನಾವು ಆಫ್ಘನ್ ಜನರ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ್ದೇವೆ ಎಂದು ಹೇಳಿದೆ.

ಆಫ್ಘನ್ ರಾಯಭಾರ ಕಚೇರಿಯ ಪ್ರಕಾರ, ಆಗಸ್ಟ್ 2021ರಿಂದ ಭಾರತದಲ್ಲಿ ಆಫ್ಘನ್ನರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಈ ಅವಧಿಯಲ್ಲಿ ಬಹಳ ಸೀಮಿತವಾದ ಹೊಸ ವೀಸಾಗಳನ್ನು ನೀಡಲಾಯಿತು. ಉಚ್ಛಾಟಿತ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರ ಹಿಂದಿನ ಸರ್ಕಾರವು ನೇಮಿಸಿದ ಸಿಬ್ಬಂದಿಯ ಸಹಾಯದಿಂದ ನವದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯು ಭಾರತೀಯ ಅಧಿಕಾರಿಗಳ ಅನುಮತಿಯೊಂದಿಗೆ ನಡೆಯುತ್ತಿತ್ತು. ಇದರ ನಂತರ ಭಾರತ ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ತಾಲಿಬಾನ್ ಸರ್ಕಾರವನ್ನು ಗುರುತಿಸಲಿಲ್ಲ.

ಭಾರತ ಎರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನದಿಂದ ತನ್ನ ಉದ್ಯೋಗಿಗಳನ್ನು ವಾಪಸ್​ ಕರೆಸಿಕೊಂಡಿತ್ತು. ಇದಾದ ನಂತರ ಅಫ್ಘಾನಿಸ್ತಾನದಲ್ಲಿ ಯಾವುದೇ ಭಾರತೀಯ ರಾಜತಾಂತ್ರಿಕರು ಇರಲಿಲ್ಲ.

ಇದನ್ನೂ ಓದಿ: ಬ್ರಿಕ್ಸ್‌ ಸದಸ್ಯತ್ವಕ್ಕೆ ಅರ್ಜಿ ಹಾಕಿದ ಪಾಕಿಸ್ತಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.