ETV Bharat / international

ಪೂರ್ವಜರ ಮನೆ ನೋಡಲು 90ರ ಭಾರತೀಯ ವೃದ್ಧೆಗೆ ಅನುಮತಿ.. 75 ವರ್ಷಗಳ ನಂತ್ರ ಅಜ್ಜಿ ಪಾಕ್‌ಗೆ ಭೇಟಿ - ರಾವಲ್ಪಿಂಡಿಯಲ್ಲಿರುವ ತನ್ನ ಪೂರ್ವಜರ ಮನೆಗೆ ಭೇಟಿ ನೀಡುವ ಭಾರತೀಯ ಮಹಿಳೆ

1947 ರಲ್ಲಿ ವಿಭಜನೆಯ ಸಮಯದಲ್ಲಿ ಭಾರತಕ್ಕೆ ಸ್ಥಳಾಂತರಗೊಂಡಿದ್ದ ಕುಟುಂಬ- ಭಾರತೀಯ ವೃದ್ಧೆಗೆ ಪಾಕ್​ಗೆ ತೆರಳಲು ಸಿಕ್ತು ಅನುಮತಿ- 91ರ ವೃದ್ಧೆ ಪಾಕಿಸ್ತಾನಕ್ಕೆ ಭೇಟಿ

ಪೂರ್ವಜರ ಮನೆ ನೋಡಲು 90ರ ಭಾರತೀಯ ವೃದ್ಧೆಗೆ ಅನುಮತಿ

author img

By

Published : Jul 17, 2022, 3:12 PM IST

ಲಾಹೋರ್(ಪಾಕಿಸ್ತಾನ) : ರಾವಲ್ಪಿಂಡಿಯಲ್ಲಿರುವ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡುವ ಭಾರತೀಯ ವೃದ್ಧೆಯೊಬ್ಬರ ಬಹುಕಾಲದ ಕನಸು ನನಸಾಗಿದೆ. ಪಾಕಿಸ್ತಾನವು 90 ವರ್ಷದ ರೀನಾ ಛಿಬ್ಬರ್ ವರ್ಮಾ ಅವರಿಗೆ ವೀಸಾ ನೀಡಿದೆ. 75 ವರ್ಷದ ನಂತರ ವಾಘಾ-ಅಟ್ಟಾರಿ ಗಡಿಯ ಮೂಲಕ ಅವರು ಇಲ್ಲಿಗೆ ಬಂದಿದ್ದಾರೆ. ದೇಶ ವಿಭಜನೆಯ ಸಮಯದಲ್ಲಿ ಇವರು ಪಾಕ್ ತೊರೆದಿದ್ದರು.

ವರ್ಮಾ ಅವರು ಇಲ್ಲಿಗೆ ಬಂದ ನಂತರ ರಾವಲ್ಪಿಂಡಿಗೆ ಭೇಟಿ ನೀಡಿ ಅಲ್ಲಿ ತಮ್ಮ ಪೂರ್ವಜರ ನಿವಾಸಕ್ಕೆ ತೆರಳಿದರು. ಇದಾದ ನಂತರ ಶಾಲೆ ಮತ್ತು ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ. ಪುಣೆಯಿಂದ ಪಾಕ್​ಗೆ ಬಂದಿರುವ ವರ್ಮಾ, ವಿಭಜನೆಯಾದಾಗ ಅವರ ಕುಟುಂಬ ರಾವಲ್ಪಿಂಡಿಯ ದೇವಿ ಕಾಲೇಜು ರಸ್ತೆಯಲ್ಲಿ ವಾಸಿಸುತ್ತಿತ್ತಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ನಾನು ಮಾಡರ್ನ್ ಸ್ಕೂಲ್ ನಲ್ಲಿ ಓದುತ್ತಿದ್ದೆ. ನನ್ನ ನಾಲ್ವರು ಒಡಹುಟ್ಟಿದವರೂ ಅದೇ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಉಳಿದ ನನ್ನ ಸಹೋದರ ಮತ್ತು ಸಹೋದರಿ ಕೂಡ ಮಾಡರ್ನ್ ಸ್ಕೂಲ್ ಬಳಿ ಇರುವ ಗಾರ್ಡನ್ ಕಾಲೇಜಿನಲ್ಲಿ ಓದುತ್ತಿದ್ದರು ಎಂದು ವಿವರಿಸಿದ್ದಾರೆ.

ನನ್ನ ತಂದೆ ಪ್ರಗತಿಪರ ಚಿಂತನೆಯ ವ್ಯಕ್ತಿಯಾಗಿರುವುದರಿಂದ ನಮಗೆ ಧಾರ್ಮಿಕ ಕಟ್ಟುಪಾಡುಗಳು ಹೆಚ್ಚಿರಲಿಲ್ಲ. ನಾವು ಎಲ್ಲರ ಜೊತೆ ಬೆರೆಯುತ್ತಿದ್ದೆವು. ನಮ್ಮ ಮನೆಗೆ ಮುಸ್ಲಿಂ ಸ್ನೇಹಿತರು ಬರುತ್ತಿದ್ದರು. ವಿಭಜನೆಯ ಮೊದಲು ಹಿಂದೂ ಮತ್ತು ಮುಸ್ಲಿಂ ಸಮಸ್ಯೆ ಇರಲಿಲ್ಲ. ನಂತರ ಇದು ಸಂಭವಿಸಿದೆ. ಇದೇ ರೀತಿ ನಮ್ಮಂಥವರ ವೀಸಾ ನಿರ್ಬಂಧಗಳನ್ನು ಸಡಿಲಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನ್ ವರ್ಮಾಗೆ ಮೂರು ತಿಂಗಳ ವೀಸಾವನ್ನು ನೀಡಿದೆ. 1947 ರಲ್ಲಿ ವಿಭಜನೆಯ ಸಮಯದಲ್ಲಿ ಅವರ ಕುಟುಂಬವು ಭಾರತಕ್ಕೆ ಸ್ಥಳಾಂತರಗೊಂಡಾಗ ಅವರಿಗೆ ಕೇವಲ 15 ವರ್ಷ ವಯಸ್ಸಾಗಿತ್ತು.

ವರ್ಮಾ ಅವರು 1965 ರಲ್ಲಿ ಪಾಕಿಸ್ತಾನಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಯುದ್ಧದ ಕಾರಣದಿಂದಾಗಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ್ದರಿಂದ ಅದನ್ನು ಪಡೆಯುವಲ್ಲಿ ವಿಫಲರಾಗಿದ್ದರು.

ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಪೂರ್ವಜರ ಮನೆಗೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದೆ ಎಂದು ವೃದ್ಧೆ ಹೇಳಿದ್ದಾರೆ. ಪಾಕಿಸ್ತಾನಿ ಪ್ರಜೆಯಾದ ಸಜ್ಜದ್ ಹೈದರ್ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕಿಸಿ ರಾವಲ್ಪಿಂಡಿಯಲ್ಲಿರುವ ಅಜ್ಜಿಯ ಮನೆಯ ಚಿತ್ರಗಳನ್ನು ಕಳುಹಿಸಿಕೊಟ್ಟಿದ್ದರು.

ಇತ್ತೀಚೆಗಷ್ಟೇ ಅಜ್ಜಿ ಮತ್ತೆ ಪಾಕಿಸ್ತಾನಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದನ್ನು ನಿರಾಕರಿಸಲಾಗಿತ್ತು. ನಂತರ ಅವರು ತಮ್ಮ ಆಸೆಯನ್ನು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹೀನಾ ರಬ್ಬಾನಿ ಖಾರ್ ಅವರಿಗೆ ಟ್ಯಾಗ್ ಮಾಡಿದ್ದರು. ಅವರು ತಮ್ಮ ಪೂರ್ವಜರ ಪಟ್ಟಣಕ್ಕೆ ಭೇಟಿ ನೀಡಲು ವೀಸಾವನ್ನು ನೀಡಿದ್ದಾರೆ.

ಇದನ್ನೂ ಓದಿ: ಮಡಿಕೇರಿ ಜಿಲ್ಲಾ ಕಚೇರಿ ತಡೆಗೋಡೆ ಕುಸಿತ: ಮಂಗಳೂರು ಸಂಪರ್ಕಿಸುವ ಹೆದ್ದಾರಿ ಬಂದ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.