ETV Bharat / international

ಲಂಡನ್​ನಲ್ಲಿ ಬಸವೇಶ್ವರ ಜಯಂತಿ: ಸಮಾನತೆಗಾಗಿ ಹೋರಾಡಿದ ಹರಿಕಾರರಿಗೆ ನಮನ

author img

By

Published : May 2, 2022, 10:12 PM IST

Updated : May 3, 2022, 10:57 AM IST

ಲಂಡನ್‌ನಲ್ಲಿ ಬಸವೇಶ್ವರರ 889ನೇ ಜನ್ಮದಿನವನ್ನು ಆಚರಿಸಲಾಯಿತು. ಹಾಗೇ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೂ ಈ ವೇಳೆ ಪುಷ್ಟ ನಮನ ಸಲ್ಲಿಸಲಾಯಿತು.

ಲಂಡನ್​ನಲ್ಲಿ ಅರ್ಥಪೂರ್ಣವಾಗಿ ಜರುಗಿದ ಬಸವೇಶ್ವರ ಜಯಂತಿ, ಅಂಬೇಡ್ಕರ್​ಗೆ ಫೋಟೋಗೆ ಪುಷ್ಪನಮನ

ಇಂಗ್ಲೆಂಡ್​ ​: ಲಂಡನ್‌ನಲ್ಲಿ ಬಸವೇಶ್ವರರ 889ನೇ ಜನ್ಮದಿನವನ್ನು ಆಚರಿಸಲಾಗಿದೆ. ಈ ವೇಳೆ ಲಂಡನ್‌ನ ಬಸವೇಶ್ವರ ಪ್ರತಿಮೆಗೆ ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ಶ್ರೀಮತಿ ಗಾಯಿತ್ರಿ ಇಸ್ಸಾರ್ ಕುಮಾರ್ ಅವರು ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ, ಬಾಬಾ ಸಾಹೇಬ್​ ಅಂಬೇಡ್ಕರ್​ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಯುನೈಟೆಡ್ ಕಿಂಗ್‌ಡಮ್‌ನ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಈ ಕಾರ್ಯಕ್ರಮ ಆಯೋಜಿಸಿತ್ತು.

ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನೀಲ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಬೇಕಾಗಿತ್ತು. ಆದರೆ ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಹಾಜರಾಗದ ಹಿನ್ನೆಲೆ ಪ್ರಕಟಣೆ ಮೂಲಕ ಕನ್ನಡಿಗರಿಗೆ ಶ್ಲಾಘಿಸಿದ್ದಾರೆ. ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಹೋಗಲಾಡಿಸುವ ಹೋರಾಟದಲ್ಲಿ ಬಸವೇಶ್ವರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ನಡುವಿನ ಪರಿಕಲ್ಪನಾ ಸಂಬಂಧ ಎತ್ತಿ ಹಿಡಿದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಪ್ರಯತ್ನಗಳನ್ನು ಉಲ್ಲೇಖಿಸಿದ್ದಾರೆ.

ಈ ಸಂದರ್ಭದಲ್ಲಿ ಯುಕೆ ಮೂಲದ ಎರಡು ಪ್ರಮುಖ ಕನ್ನಡ ಸಂಘಟನೆಗಳಾದ ಕನ್ನಡ ಬಳಗ ಮತ್ತು ಕನ್ನಡಿಗರು ಯುಕೆ ಮುಖ್ಯಸ್ಥರಾದ ಡಾ.ಸ್ನೇಹಾ ಕುಲಕರ್ಣಿ, ಗಣಪತಿ ಭಟ್ ಮತ್ತು ಬಸವೇಶ್ವರ ಫೌಂಡೇಶನ್ ಅಧ್ಯಕ್ಷ ಹಾಗೂ ಲ್ಯಾಂಬೆತ್ ನಗರದ ಮಾಜಿ ಮೇಯರ್ ನೀರಜ್ ಪಾಟೀಲ್ ಉಪಸ್ಥಿತರಿದ್ದರು. ಕನ್ನಡ ಬಳಗ 39 ವರ್ಷದಿಂದ ಮತ್ತು ಕನ್ನಡಿಗರು ಯುಕೆ ಕಳೆದ 17 ವರ್ಷಗಳಿಂದ ಯುಕೆಯಲ್ಲಿ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಾ ಬರುತ್ತಿದೆ.

ಶ್ಲಾಘನೆ ಪತ್ರ
ಶ್ಲಾಘನೆ ಪತ್ರ

2015ರಲ್ಲಿ ಲ್ಯಾಂಬೆತ್​ ಬಸವೇಶ್ವರ ಫೌಂಡೇಶನ್ ನೇತೃತ್ವದಲ್ಲಿ ಬ್ರಿಟಿಷ್​ ಸಂಸತ್​ ಎದುರು ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಅಂದಿನಿಂದಲೂ ಪ್ರತಿವರ್ಷ ಒಟ್ಟಿಗೆ ಬಸವಣ್ಣ ಹಾಗೂ ಅಂಬೇಡ್ಕರ್​ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ.

Last Updated : May 3, 2022, 10:57 AM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.