ETV Bharat / international

ಲುಫ್ತಾನ್ಸಾ ಏರ್​ಲೈನ್ಸ್​ ಪೈಲಟ್​ಗಳ ಮುಷ್ಕರ: 800 ವಿಮಾನ ಸಂಚಾರ ರದ್ದು - ಪೈಲಟ್​ಗಳ ಮುಷ್ಕರ

ಲುಫ್ತಾನ್ಸಾ ಏರ್​ಲೈನ್ಸ್​ ಪೈಲಟ್​ಗಳು ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಕಂಪನಿಯ ಸುಮಾರು 800 ವಿಮಾನ ಸಂಚಾರಗಳು ರದ್ದಾಗಿವೆ.

800 flights of Lufthansa Airlines grounded
ಪೈಲಟ್ ಮುಷ್ಕರ: ಲುಫ್ತಾನ್ಸಾ ಏರ್​ಲೈನ್ಸ್​ನ 800 ವಿಮಾನಗಳ ಸಂಚಾರ ರದ್ದು
author img

By

Published : Sep 2, 2022, 11:02 AM IST

ನವದೆಹಲಿ: ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ತಾನ್ಸಾ ಏರ್​ಲೈನ್ಸ್​ ಇಂದು ಜರ್ಮನಿಯಿಂದ ಹೊರಡುವ ಮತ್ತು ಒಳಗೆ ಬರುವ ಬಹುತೇಕ ಎಲ್ಲ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಪೈಲಟ್​ಗಳ ಮುಷ್ಕರದ ಕಾರಣದಿಂದ ಲುಫ್ತಾನ್ಸಾ ಈ ಕ್ರಮಕ್ಕೆ ಮುಂದಾಗಿದೆ. ಸೆಪ್ಟೆಂಬರ್ 2 ರಂದು ಲುಫ್ತಾನ್ಸಾ 800 ವಿಮಾನಯಾನಗಳನ್ನು ರದ್ದುಗೊಳಿಸಿದ್ದು, ಇದರಿಂದ ಸುಮಾರು 1 ಲಕ್ಷ 30 ಸಾವಿರ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೇತನ ಹೆಚ್ಚಳ ಕುರಿತಂತೆ ಕಂಪನಿಯೊಂದಿಗೆ ನಡೆದ ಮಾತುಕತೆಗಳು ವಿಫಲವಾದ ನಂತರ ಲುಫ್ತಾನ್ಸಾ ಏರ್​ಲೈನ್ಸ್​ ಮತ್ತು ಲುಫ್ತಾನ್ಸಾ ಕಾರ್ಗೊ ಪೈಲಟ್​ಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸ್ಥಳೀಯ ಕಾಲಮಾನದ ಪ್ರಕಾರ ಮುಷ್ಕರವು ಶುಕ್ರವಾರ ಬೆಳಗ್ಗೆ 00:01ಕ್ಕೆ ಆರಂಭವಾಗಿ ರಾತ್ರಿ 23:59ಕ್ಕೆ ಮುಗಿಯಲಿದೆ. ವಿಮಾನಯಾನ ಸಂಚಾರದಲ್ಲಿನ ವ್ಯತ್ಯಯವು ಶನಿವಾರ ಹಾಗೂ ಭಾನುವಾರದವರೆಗೂ ಮುಂದುವರಿಯಬಹುದು ಎಂದು ಕಂಪನಿ ತಿಳಿಸಿದೆ.

ಪೈಲಟ್​ಗಳ ವೇತನವನ್ನು ಪ್ರತಿ ತಿಂಗಳಿಗೆ 900 ಯೂರೋ ಹೆಚ್ಚಿಸುವ ಅತ್ಯುತ್ತಮ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟಿತ್ತು. ಆದರೂ ಈ ಆಫರ್ ಒಪ್ಪಿಕೊಳ್ಳದ ಪೈಲಟ್​ಗಳ ಕ್ರಮದ ಬಗ್ಗೆ ಕಂಪನಿ ವಿಷಾದ ವ್ಯಕ್ತಪಡಿಸಿದೆ. ಈ ವರ್ಷಾಂತ್ಯಕ್ಕೆ ಶೇ 5.5 ರಷ್ಟು ವೇತನ ಹೆಚ್ಚಳ, ಹಣದುಬ್ಬರಕ್ಕೆ ಸ್ವಯಂಚಾಲಿತ ಪರಿಹಾರ ಮತ್ತು ಸ್ಯಾಲರಿ ಗ್ರಿಡ್ ಹೊಂದಾಣಿಕೆ ಈ ಬೇಡಿಕೆಗಳನ್ನು ಮುಂದಿಟ್ಟು ಪೈಲಟ್​ಗಳು ಮುಷ್ಕರ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.