ETV Bharat / international

ಗನ್ ಜೊತೆ ಆಟವಾಡುತ್ತಾ 1, 2 ವರ್ಷದ ಕಂದಮ್ಮಗಳಿಗೆ ಗುಂಡು ಹಾರಿಸಿದ 8ರ ಬಾಲಕ.. ಒಂದು ಮಗು ಸಾವು, ಮೊತ್ತೊಂದು ಗಂಭೀರ! - ಪೆನ್ಸಕೋಲಾದಲ್ಲಿ ಮಗುವನ್ನು ಕೊಂದ ಫ್ಲೋರಿಡಾ ಬಾಲಕ

8 ವರ್ಷದ ಫ್ಲೋರಿಡಾ ಬಾಲಕ ಆಕಸ್ಮಿಕವಾಗಿ ಗುಂಡು ಹಾರಿಸಿ ಒಂದು ವರ್ಷದ ಮಗುವನ್ನು ಕೊಂದು ಹಾಕಿರುವ ಘಟನೆ ಅಮೆರಿಕಾದ ಪೆನ್ಸಕೋಲಾದಲ್ಲಿ ನಡೆದಿದೆ.

Florida boy accidentally shoots and kills baby in America, Florida boy kills baby in Pensacola, America crime news, ಅಮೆರಿಕಾದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿಸಿ ಮಗುವನ್ನು ಕೊಂದ ಫ್ಲೋರಿಡಾ ಬಾಲಕ, ಪೆನ್ಸಕೋಲಾದಲ್ಲಿ ಮಗುವನ್ನು ಕೊಂದ ಫ್ಲೋರಿಡಾ ಬಾಲಕ, ಅಮೆರಿಕ ಅಪರಾಧ ಸುದ್ದಿ
ಒಂದು ಮಗು ಸಾವು, ಮೊತ್ತೊಂದು ಗಂಭೀರ
author img

By

Published : Jun 28, 2022, 8:06 AM IST

ಪೆನ್ಸಕೋಲಾ (ಅಮೆರಿಕ): ನಗರದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ತಂದೆಯ ಗನ್​ ತೆಗೆದುಕೊಂಡು ಎರಡು ಪುಟ್ಟ ಕಂದಮ್ಮಗಳ ಮೇಲೆ 8 ವರ್ಷದ ಬಾಲಕ ಆಟವಾಡುತ್ತಾ ಗುಂಡು ಹಾರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ ಒಂದು ವರ್ಷದ ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಎರಡು ವರ್ಷದ ಮಗು ಆಸ್ಪತ್ರೆಯಲ್ಲಿ ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿದೆ.

ಫ್ಲೋರಿಡಾದ ಮೋಟೆಲ್‌ನಲ್ಲಿ ಭಾನುವಾರ 8 ವರ್ಷದ ಬಾಲಕ ರೂಂನಲ್ಲಿ ತನ್ನ ತಂದೆಯ ಗೆಳತಿಯ ಮಕ್ಕಳಾದ ಒಂದು ವರ್ಷ ಮತ್ತು ಎರಡು ವರ್ಷದ ಹೆಣ್ಮಕ್ಕಳ ಜೊತೆ ಆಟವಾಡುತ್ತಿದ್ದ. ಬಾಲಕನ ತಂದೆ ತನ್ನ ರೂಮ್ ಬಂದೂಕನ್ನು ಇಟ್ಟಿದ್ದರು. ಇದನ್ನು ಗಮನಿಸಿದ ಬಾಲಕ ತಂದೆ ಕೊಠಡಿಯಿಂದ ಹೊರ ಹೋದ ನಂತರ ಗನ್​ ಅನ್ನು ಕೈಗೆತ್ತಿಕೊಂಡು ಪುಟ್ಟ ಕಂದಮ್ಮಗಳ ಜೊತೆ ಆಟವಾಡುತ್ತಿದ್ದ.

ಅಷ್ಟೇ ಅಲ್ಲ ಆ ಬಾಲಕ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾನೆ. ಪರಿಣಾಮ ಒಂದು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎರಡು ವರ್ಷದ ಮಗುವಿಗೆ ಗುಂಡು ತಗುಲಿದ ಹಿನ್ನೆಲೆ ಆಸ್ಪತ್ರೆಯಲ್ಲಿ ಸಾವು ಬುದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ ಎಂದು ಎಸ್ಕಾಂಬಿಯಾ ಕೌಂಟಿ ಶೆರಿಫ್ ಚಿಪ್ ಸಿಮನ್ಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಓದಿ: ಸ್ವಂತ ಮಗುವಿನ ಕೊಲೆ ಆರೋಪ ಎದುರಿಸುತ್ತಿದ್ದ ಮಹಿಳೆ ಆರೋಪ ಮುಕ್ತ

ಹುಡುಗನ ತಂದೆ ಕೋಣೆಗೆ ಮರಳಿದ್ದಾರೆ. ಬಂದೂಕು ತೆಗೆದುಕೊಂಡು ಕೊಠಡಿ ತೊರೆದಿದ್ದಾರೆ. ಅವರು ಲೈಸೆನ್ಸ್​ ಇಲ್ಲದ ಗನ್​ ಹೊಂದಿದ್ದಲ್ಲದೇ ಅಪ್ರಾಪ್ತನ ಕೈಗೆ ಸಿಗುವ ರೀತಿಯಲ್ಲಿ ಗನ್​ ಇಟ್ಟಿರುವುದು ಸೇರಿ ಎರಡು ಅಪರಾಧ ಎಸಗಿದ್ದಾರೆ. ಹೀಗಾಗಿ ಆರೋಪಿಯನ್ನು ಬಂಧಿಸಲಾಗಿತ್ತು. ಆದರೆ ಅವರು 41,000 ಡಾಲರ್​ ಮೊತ್ತದ ಜಾಮೀನು ನೀಡಿ ಬಿಡುಗಡೆಯಾಗಿದ್ದಾರೆ. ಅತ್ತ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.