ತಪಚುಲಾ, ಮೆಕ್ಸಿಕೊ: ವಲಸಿಗರ ಕಳ್ಳಸಾಗಣೆ ಮಾರ್ಗ ಎಂದು ಕರೆಯಲ್ಪಡುವ ಗ್ವಾಟೆಮಾಲನ್ ಗಡಿಯ ಸಮೀಪವಿರುವ ಟೌನ್‌ಶಿಪ್‌ನಲ್ಲಿ ಆರು ಜನ ಕೊಲ್ಲಲ್ಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಗ್ವಾಟೆಮಾಲಾ ಗಡಿಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಸಿಲ್ಟೆಪೆಕ್ ಟೌನ್‌ಶಿಪ್‌ನಲ್ಲಿ ಮಂಗಳವಾರ ಈ ಹತ್ಯೆಗಳು ಸಂಭವಿಸಿವೆ ಎಂದು ದಕ್ಷಿಣ ರಾಜ್ಯವಾದ ಚಿಯಾಪಾಸ್‌ನ ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವಿಡಿಯೋಗಳ ಪ್ರಕಾರ, ಹೆಚ್ಚಿನ ಸಂತ್ರಸ್ತರು ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು. ಸಂತ್ರಸ್ತರೆಲ್ಲರೂ ಒಂದೇ ಪಿಕಪ್ ಟ್ರಕ್‌ನಲ್ಲಿ ಸವಾರಿ ಮಾಡುತ್ತಿದ್ದರು. ದಾಳಿಕೋರರು ರಸ್ತೆಬದಿಯಿಂದ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಆರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.
ಈ ಪ್ರದೇಶವು ಬಹಳ ಹಿಂದಿನಿಂದಲೂ ವಲಸಿಗರ ಕಳ್ಳಸಾಗಣೆ ಮಾರ್ಗ ಎಂದು ಕರೆಯಲ್ಪಟ್ಟಿದೆ. ಆದರೆ ಇದು ಇತ್ತೀಚೆಗೆ ಕಳ್ಳಸಾಗಣೆ ಮತ್ತು ಸುಲಿಗೆ ವ್ಯವಹಾರಗಳ ಮೇಲೆ ಹಕ್ಕು ಸಾಧಿಸಲು ಜಲಿಸ್ಕೋ ಮತ್ತು ಸಿನಾಲೋವಾ ಕಾರ್ಟೆಲ್‌ಗಳ ನಡುವಿನ ರಕ್ತಸಿಕ್ತ ಟರ್ಫ್ ಕದನಗಳ ದೃಶ್ಯವಾಗಿದೆ. ಇಲ್ಲಿನ ಸಮೀಪದ ನಗರವಾದ ಮೊಟೊಜಿಂಟ್ಲಾದ ಅತಿದೊಡ್ಡ ಜನಸಂಖ್ಯಾ ಕೇಂದ್ರದ ನಿವಾಸಿಗಳು, ಟ್ಯಾಕ್ಸಿ ಮತ್ತು ಬಸ್ ಚಾಲಕರು ಕಾರ್ಟೆಲ್‌ಗಳಿಂದ ನಿರಂತರ ಬೆದರಿಕೆಗಳು ಮತ್ತು ಸುಲಿಗೆಗೆ ತುತ್ತಾಗುತ್ತಿದ್ದಾರೆ. ಇದರ ವಿರುದ್ಧ ಜನರು ಪ್ರತಿಭಟನೆ ನಡೆಸಿದರು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.
ಮಂಗಳವಾರ ನಡೆದ ಪ್ರತಿಭಟನೆಯ ಮೆರವಣಿಗೆಯಲ್ಲಿ ಹಸ್ತಾಂತರಿಸಿದ ಕರಪತ್ರಗಳಲ್ಲಿ ಒಂದನ್ನು ಓದಿದ ಪ್ರಾಸಿಕ್ಯೂಟರ್‌ಗಳು, ಈ ಹೋರಾಟ ಸುರಕ್ಷಿತ ಮೋಟೋಜಿಂಟ್ಲಾಗಾಗಿ ನಡೆಯುತ್ತಿದೆ. ಯಾವುದೇ ರಕ್ಷಣೆ ಪಾವತಿಗಳಿಗೆ ಅಲ್ಲ, ಅಪಹರಣಗಳಿಗೆ ಅಲ್ಲ.. ಇದು ಶಾಂತಿ ಮತ್ತು ನೆಮ್ಮದಿಗಾಗಿ ಎಂದು ತಿಳಿಸಿದರು. ಇನ್ನು ಗಡಿಯ ಸಮೀಪದಲ್ಲಿ ಅಪರಿಚಿತ ದುಷ್ಕರ್ಮಿಗಳು ಸರಕು ಸಾಗಣೆ ಟ್ರಕ್‌ಗೆ ಬೆಂಕಿ ಹಚ್ಚಿ ಈ ನಗರದ ಮುಖ್ಯ ರಸ್ತೆಯನ್ನು ನಿರ್ಬಂಧಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಜ್ವಾಲಾಮುಖಿಗೆ ತತ್ತರಿಸಿದ್ದ ಗ್ವಾಟೆಮಾಲನ್: ಕಳೆದ ವರ್ಷ ಮಾರ್ಚ್ನಲ್ಲಿ ಗ್ವಾಟೆಮಾಲನ್ ಸಿಟಿ ಜ್ವಾಲಾಮುಖಿಗೆ ತ್ತರಿಸಿತ್ತು. ಜ್ವಾಲಾಮುಖಿ ಸ್ಫೋಟದ ಹಿನ್ನೆಲೆಯಲ್ಲಿ ಸುಮಾರು 500 ಕುಟುಂಬಗಳು ಸ್ಥಳಾಂತರಗೊಂಡಿದ್ದರು. ಗ್ವಾಟೆಮಾಲಾದ ವಿಪತ್ತು ಏಜೆನ್ಸಿಯು ಹತ್ತಿರದ ಪಟ್ಟಣವಾದ ಎಸ್ಕುಯಿಂಟ್ಲಾದಲ್ಲಿ ಸ್ಥಳಾಂತರಿಸುವವರಿಗೆ ಆಶ್ರಯ ತಾಣವೊಂದನ್ನು ತೆರೆಯಲಾಗಿತ್ತು. ಅಲ್ಲಿನ ಜಿಮ್ವೊಂದನ್ನು ಆಶ್ರಯ ತಾಣವಾಗಿ ಪರಿವರ್ತಿಸಲಾಗಿತ್ತು.
3,763 ಮೀಟರ್ ಎತ್ತರದ ಜ್ವಾಲಾಮುಖಿ ಮಧ್ಯ ಅಮೆರಿಕದಲ್ಲಿ ಅತ್ಯಂತ ಸಕ್ರಿಯವಾಗಿರುವ ಜ್ವಾಲಾಮುಖಿಯಲ್ಲೊಂದು. 2018ರಲ್ಲಿ ಸ್ಫೋಟವು 194 ಜನರನ್ನು ಕೊಂದಿತ್ತು ಮತ್ತು 234 ಮಂದಿ ಕಾಣೆಯಾಗಿದ್ದರು.