ಬೀಜಿಂಗ್: ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ ಘಟನೆಯಲ್ಲಿ 50 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಚೀನಾ ಮತ್ತು ತಜಕಿಸ್ತಾನ ಗಡಿಯಲ್ಲಿ 6.8 ತೀವ್ರತೆಯ ಭೂಕಂಪನ ಸಂಭವಿಸಿದೆ. ಘಟನೆಯಲ್ಲಿ ಉಂಟಾದ ಸಾವು ನೋವಿನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಚೀನಾದ ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದ ಬಳಿ ಗುರುವಾರ ಮುಂಜಾನೆ ತಜಕಿಸ್ತಾನದ ಭಾಗದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ತಜಕಿಸ್ತಾನದ ಮುರ್ಘೋಬ್‌ನ ಪಶ್ಚಿಮಕ್ಕೆ 67 ಕಿಲೋಮೀಟರ್ (41 ಮೈಲಿ) ವ್ಯಾಪ್ತಿಯಲ್ಲಿ ಮತ್ತು US ಭೂವಿಜ್ಞಾನ ಕಚೇರಿ ಸಮೀಕ್ಷೆಯ ಪ್ರಕಾರ 20 ಕಿಲೋಮೀಟರ್ (12 ಮೈಲಿ) ಆಳದಲ್ಲಿ ಸಂಭವಿಸಿದೆ. ಈ ಪ್ರದೇಶವು ಚೀನಾದಿಂದ ದೂರದಲ್ಲಿದ್ದು ಕಡಿಮೆ ಜನಸಂಖ್ಯೆಯನ್ನು ಹೊಂದಿದೆ.
ವಿವಿಧ ಏಜೆನ್ಸಿಗಳಿಂದ ಪ್ರಾಥಮಿಕ ಭೂಕಂಪನ ಮಾಪನಗಳು ಸಾಮಾನ್ಯವಾಗಿ ಭಿನ್ನವಾಗಿದ್ದು, ಚೀನಾ ಭೂಕಂಪನ ಜಾಲಗಳ ಕೇಂದ್ರ ಭೂಕಂಪವು 7.2 ತೀವ್ರತೆ ಮತ್ತು 10 ಕಿಲೋಮೀಟರ್ (6 ಮೈಲುಗಳು) ಆಳದಲ್ಲಿದೆ ನಡೆದಿದೆ ಎಂದು ತಿಳಿಸಿದೆ.
ಟರ್ಕಿಯನ್ನು ನಲುಗಿಸಿದ ಭೂಕಂಪ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭೂಕಂಪನ ತೀವ್ರವಾಗುತ್ತಿದ್ದು, ಕಳೆದ ಎರಡು ವಾರದ ಹಿಂದೆ ಟರ್ಕಿಯಲ್ಲಿ ನಡೆದ 7.8 ತೀವ್ರತೆಯ ಭೂಕಂಪನ ಅಲ್ಲಿನ ಸಾವಿರಾರು ಜನರ ಪ್ರಾಣವನ್ನು ಬಲಿತೆಗೆದುಕಂಡಿದೆ. ಹೆಚ್ಚಿನದಾಗಿ ಟರ್ಕಿ ಆಗಾಗ ಭೂಕಂಪಕ್ಕೆ ಒಳಗಾಗಿದ್ದು ಈ ಬಾರಿ ಸಂಭವಿಸಿದ ಕಂಪನ ದಾಖಲೆ ಮಟ್ಟದ್ದಾಗಿದೆ. ಒಟ್ಟು ಇದುವರೆಗೆ ವರದಿಯಾಗಿರುವ ಪ್ರಕಾರ 50 ಸಾವಿರಕ್ಕೂ ಹೆಚ್ಚು ಜನರ ಸಾವಾಗಿದೆ. ಅಲ್ಲದೆ ಅವಶೇಷಗಳಡಿ ಸಿಲುಕಿಕೊಂಡು ನರಕಯಾಕತನೆ ಪಟ್ಟು ಕೆಲವರು ಅಲ್ಲಿಯೇ ಉಸಿರು ಚೆಲ್ಲಿದರೆ ಇನ್ನೂ ಕೆಲವರು ಹೇಗೋ ಉಸಿರು ಬಿಗಿ ಹಿಡಿದು ರಕ್ಷಣಾ ಕಾರ್ಯಾಚರಣೆಯಲ್ಲಿ ಬದುಕಿ ಬಂದವರು ಇದ್ದಾರೆ.
ಫೆಬ್ರವರಿನ 6 ರಂದು ಸಂಭವಿಸಿದ 7.8 ತೀವ್ರತೆಯ ಭೂಕಂಪನ ಅಮೆರಿಕಾದ ಭೂವಿಜ್ಞಾನದ ಕೇಂದ್ರದ ಸಂಮೀಕ್ಷೆ ಪ್ರಕಾರ 17.09 ಕಿಮೀ ಆಳದಲ್ಲಿ ಸಂಭವಿಸಿತ್ತು. ಇದಾಗಿ ಫೆಬ್ರವರಿ 21 ರಂದು ವಾಪಾಸ್ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದೆ. ಇದರಲ್ಲೂ ಮತ್ತೆ ಕಾರ್ಯಾಚರಣೆ ನಡೆದು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಮೂರಕ್ಕು ಹೆಚ್ಚು ಜನ ಸಾವಿಗೆ ತುತ್ತಾಗಿದ್ದಾರೆ.
ಶ್ರೀನಗರದಲ್ಲಿ 3.6 ತೀವ್ರತೆಯ ಭೂಕಂಪನ: ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ಫೆಬ್ರವರಿ 17ರಂದು ಮುಂಜಾನೆ 5.01 ಗಂಟೆ ಸುಮಾರಿಗೆ ಭೂಮಿಯ 10 ಕಿಮೀಟರ್ ಆಳದಲ್ಲಿ 3.6 ತೀವ್ರತೆಯ ಕಂಪನ ಉಂಟಾಗಿತ್ತು.
ತಮಿಳುನಾಡಿನ ಚೆನ್ನೈನಲ್ಲಿ ಅನುಭವದ ಕಂಪನ: ಚೆನ್ನೈ ನಗರದ ಅಣ್ಣಾಸಲೈ ಹತ್ತಿರದ ಮೌಂಟ್ ರಸ್ತೆಯಲ್ಲಿರುವ ಕಟ್ಟಡಗಳಲ್ಲಿ ಜನರಿಗೆ ಲಘು ಭೂಕಂಪನದ ಅನುಭವವಾಗಿದೆ. ಈ ಘಟನೆಗೆ ಪಕ್ಕದಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಅಥವಾ ನಿಜವಾಗಿಯೂ ಭೂಮಿ ಕಂಪಿಸಿದ ತಿಳಿದಿಲ್ಲ.
ಇದನ್ನೂ ಓದಿ: ಟರ್ಕಿ, ಸಿರಿಯಾಗೆ "ಸೋಮವಾರ" ಶಾಪ: ಮತ್ತೊಂದು ಭೂಕಂಪನದಿಂದ ತತ್ತರಿಸಿದ ದೇಶಗಳು