ETV Bharat / international

ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ.. - ಜೂನ್​ 19 ಸೋಮವಾರ ನಡುರಾತ್ರಿ 2 ಗಂಟೆಗೆ ಈ ಕಂಪನ

ಮೊನ್ನೆ ಫ್ರಾನ್ಸ್​ನಲ್ಲಿ ಪ್ರಬಲ ಭೂಕಂಪದ ವರದಿಯಾಗಿತ್ತು. ಅದು ಮಾಸುವ ಮುನ್ನವೇ ಕೇಂದ್ರ ಮೆಕ್ಸಿಕೋದಲ್ಲಿ ತೀವ್ರತೆಯ ಭೂಕಂಪನ ಸಂಭವಿಸಿದೆ.

6.3 magnitude quake hits off coast of Central Mexico
ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ..
author img

By

Published : Jun 19, 2023, 6:56 AM IST

Updated : Jun 19, 2023, 11:43 AM IST

ಮೆಕ್ಸಿಕೋ ಸಿಟಿ (ಮೆಕ್ಸಿಕೋ): ಮಧ್ಯ ಮೆಕ್ಸಿಕೋದ ಕರಾವಳಿಯಲ್ಲಿ 6.3 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಸೋಮವಾರ ಮಾಹಿತಿ ನೀಡಿದೆ.

ಭೂಕಂಪನದ ತೀವ್ರತೆ 6.3 ರಷ್ಟು ಇತ್ತು ಎಂದು ಎನ್​ಸಿಎಸ್​​​​​​​ ತಿಳಿಸಿದ್ದು, ಜೂನ್​ 19 ಸೋಮವಾರ ನಡುರಾತ್ರಿ 2 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಆಫ್ ಕೋಸ್ಟ್ ಆಫ್ ಸೆಂಟ್ರಲ್ ಮೆಕ್ಸಿಕೋದಲ್ಲಿ ಭೂಕಂಪನ ಕೇಂದ್ರವಿದ್ದು, 10 ಕಿಮೀ ಆಳದಲ್ಲಿ ಇದು ಸಂಭವಿಸಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿ ಆಗಿಲ್ಲ.

ಭೂಕಂಪವು ಬಾಜಾ ಕ್ಯಾಲಿಫೋರ್ನಿಯಾ ಸುರ್ ಮತ್ತು ಸೊನೊರಾ ರಾಜ್ಯಗಳ ನಡುವಣ ಪ್ರದೇಶದ ಲೊರೆಟೊದ ಉತ್ತರ - ಈಶಾನ್ಯಕ್ಕೆ ಸುಮಾರು 48 ಮೈಲುಗಳು ಅಂದರೆ ಸುಮಾರು 78 ಕಿಲೋಮೀಟರ್ ನಲ್ಲಿ ಕೇಂದ್ರೀಕೃತವಾಗಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಪ್ರದೇಶವು ಸಣ್ಣ ಪಟ್ಟಣಗಳು ಮತ್ತು ಮೀನುಗಾರಿಕೆ ಪ್ರದೇಶದಿಂದ ಕೂಡಿದೆ. ಹಳ್ಳಿಗಳಿಂದ ಕೂಡಿದ ಕರಾವಳಿಯಾಗಿದ್ದು, ಕಡಲತೀರದ ಕ್ಯಾಂಪ್‌ಸೈಟ್‌ಗಳಲ್ಲಿ ಮನರಂಜನೆಗೆ ಹೆಸರು ವಾಸಿಯಾಗಿದೆ. ಇಲ್ಲಿ ಹೆಚ್ಚಿ ಅಮೆರಿಕದ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ ಎಂದು ವರದಿಯಾಗಿದೆ.

"ನಾವು ಭೂಕಂಪನದ ಅನುಭವ ಪಡೆದಿದ್ದೇವೆ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾರೆ. ಆದರೆ ಯಾವುದೇ ಹಾನಿ ಆಗಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ಹೇಳಿವೆ.

ಕಳೆದ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಮೆಕ್ಸಿಕೊದಲ್ಲಿ 8.1ರಷ್ಟು ತೀವ್ರತೆಯ ಭೂಕಂಪ ಇಲ್ಲಿ ಸಂಭವಿಸಿದ್ದರಿಂದ 32 ಜನರು ಸಾವನ್ನಪ್ಪಿದ್ದರು. ಭೂಕಂಪನದಿಂದಾಗಿ ಹಲವು ಕಟ್ಟಡಗಳು ನೆಲಸಮವಾಗಿದ್ದವು. ಇದೇ ವೇಳೆ ಅಲ್ಲಿನ ಸರ್ಕಾರ ಆಗ ಸುನಾಮಿ ಎಚ್ಚರಿಕೆಯನ್ನು ನೀಡಿತ್ತು.

ಮೊನ್ನೆ ಮೊನ್ನೆ ಫ್ರಾನ್ಸ್​​ನಲ್ಲಿ ಸುಮಾರು 5.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇಲ್ಲಿಯೂ ಯಾವುದೇ ಸಾವು ನೋವಿನ ವರದಿಯಾಗಿರಲಿಲ್ಲ. ಇನ್ನು ಕಳೆದ ವಾರ ನವದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಭೂಮಿ ನಡುಗಿತ್ತು. ಆದರೆ ಇವೆಲ್ಲ ಕಡಿಮೆ ತೀವ್ರತೆಯ ಕಂಪನಗಳಾಗಿದ್ದವು.

ಭೂಮಿ ನಡುಗಿದ್ದರಿಂದ ಜನರು ಭೀತಿಗೊಳಗಾಗಿದ್ದರು. ನಮ್ಮ ದೇಶದಲ್ಲಿ ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಆಗಾಗ ಭೂಕಂಪನದ ವರದಿಗಳು ಬರುತ್ತಲೇ ಇರುತ್ತವೆ.

ಇದನ್ನು ಓದಿ:France quake: ಫ್ರಾನ್ಸ್​ನಲ್ಲಿ 5.8 ತೀವ್ರತೆಯ ಭೂಕಂಪನ: ಮನೆಗಳು ಬಿರುಕು, ವಿದ್ಯುತ್ ಸಂಪರ್ಕ ಕಡಿತ

Last Updated : Jun 19, 2023, 11:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.