ETV Bharat / international

ಈ ನಗರದಲ್ಲಿ ಕಾರ್ ಪಾರ್ಕಿಂಗ್ ಜಾಗದ ಕ್ರಯ 6 ಕೋಟಿ ರೂಪಾಯಿ!

author img

By

Published : Nov 25, 2022, 12:59 PM IST

ಅಮೆರಿಕದ ಅತ್ಯಂತ ದುಬಾರಿ ನಗರ ಎಂದು ಹೇಳಲಾಗುವ ನ್ಯೂಯಾರ್ಕ್​ನಲ್ಲಿ ಕಾರು ಪಾರ್ಕಿಂಗ್ ಜಾಗಕ್ಕೆ ತೆರಬೇಕಾದ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳುತ್ತೀರಾ.

car parking
ಕಾರು ಪಾರ್ಕಿಂಗ್

ಮೆಟ್ರೋ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾಮನ್​. ಅದರಲ್ಲೂ ವಾಹನ ನಿಲ್ಲಿಸಲು ಸ್ಥಳ ಕಂಡುಹಿಡಿಯುವುದಂತೂ ಇನ್ನೊಂದು ದೊಡ್ಡ ಸವಾಲಿನ ಕೆಲಸ. ಅದಕ್ಕಾಗಿಯೇ ಕಾರ್ಪೊರೇಟ್ ಕಚೇರಿಗಳು, ಕಾಂಪ್ಲೆಕ್ಸ್​ಗಳು ಮತ್ತು ಶಾಪಿಂಗ್ ಮಾಲ್‌ಗಳು ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ವಿಶೇಷ ಶುಲ್ಕವನ್ನು ವಿಧಿಸುತ್ತವೆ.

ಪಾರ್ಕಿಂಗ್ ಶುಲ್ಕವು ನಗರ ಮತ್ತು ನಗರ ಪ್ರದೇಶಗಳಲ್ಲಿನ ದಟ್ಟಣೆಯನ್ನು ಅವಲಂಬಿಸಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಭಿನ್ನವಾಗಿರುತ್ತದೆ. ಆದರೆ, ಅಮೆರಿಕದ ಅತ್ಯಂತ ದುಬಾರಿ ನಗರ ಎಂದು ಹೇಳಲಾಗುವ ನ್ಯೂಯಾರ್ಕ್​ನಲ್ಲಿ ಪಾರ್ಕಿಂಗ್ ಜಾಗಕ್ಕೆ ತೆರಬೇಕಾದ ಬೆಲೆ ಕೇಳಿದ್ರೆ ನೀವು ಬೆಚ್ಚಿಬೀಳುವಂತಿದೆ.

ಇದನ್ನೂ ಓದಿ: ದೇಶದ ಅಗ್ಗದ ಎಲೆಕ್ಟ್ರಿಕ್​ ಕಾರು ಬಿಡುಗಡೆ.. ಒಮ್ಮೆ ಚಾರ್ಜ್​ ಮಾಡಿ 200 ಕಿಮೀ ದೂರ ಕ್ರಮಿಸಿ

ಇತ್ತೀಚೆಗೆ, ಸಿಎನ್‌ಬಿಸಿ ಒಂದು ವರದಿ ಬಿಡುಗಡೆ ಮಾಡಿದ್ದು, 16 ಮಿಲಿಯನ್ ಡಾಲರ್ ದುಬಾರಿ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಸ್ಥಳವನ್ನು ಏಳೂವರೆ ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಿದೆ. ಅಂದರೆ ಸುಮಾರು ಆರು ಕೋಟಿ ರೂಪಾಯಿ. ಅಂದಹಾಗೆ, ಇಲ್ಲಿ ನೆಲದ ಮೇಲೆ ವಾಹನಗಳನ್ನು ನಿಲುಗಡೆ ಮಾಡುವುದಿಲ್ಲ. ಕಾರುಗಳನ್ನು ಎತ್ತುವ ಮತ್ತು ಕ್ಯಾಬಿನ್‌ಗಳಲ್ಲಿ ಇರಿಸುವ ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೆ ಇದೆ. ಹೀಗಾಗಿ, ಹೆಚ್ಚು ಪಾರ್ಕಿಂಗ್​ ಶುಲ್ಕ ಪಾವತಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: ಮುಂದಿನ ವರ್ಷ ಮಾರುಕಟ್ಟೆಗೆ ಬರಲಿದೆ ವಿದ್ಯುತ್ ಚಾಲಿತ ಬೈಕ್ ಕಾರ್: ಏನಿದರ ವಿಶೇಷತೆ?

ಇನ್ನು ನಗರದ ದುಬಾರಿ ವಸತಿ ಪ್ರದೇಶಗಳಲ್ಲಿ ಸಹ ಪಾರ್ಕಿಂಗ್ ವೆಚ್ಚ ಅಧಿಕವಿದೆ. ಸುಮಾರು $500,000 ರಿಂದ $600,000 ಇದೆ. ಅಂದರೆ ಮೂರು ಕೋಟಿ ರೂ.ಗಳಿಂದ ರೂ. ಐದು ಕೋಟಿ. ಸಾಮಾನ್ಯ ಸ್ಥಳಗಳಲ್ಲಿ ಕಾರ್ ಪಾರ್ಕಿಂಗ್‌ಗೆ ಕನಿಷ್ಠ ದರ ಮೂರು ಲಕ್ಷ ಡಾಲರ್‌ಗಳು ಎಂದು ನ್ಯೂಯಾರ್ಕ್ ಮೂಲದ ರಿಯಲ್ ಎಸ್ಟೇಟ್ ಕಂಪನಿಯೊಂದು ತಿಳಿಸಿದೆ.

ಇದನ್ನೂ ಓದಿ: ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದ ರೋಲ್ಸ್ ರಾಯ್ಸ್: ಭಾರತದಲ್ಲಿ ಇದರ ಬೆಲೆ ಎಷ್ಟು ಗೊತ್ತಾ?

ನಗರದಲ್ಲಿ ಹೆಚ್ಚುತ್ತಿರುವ ಕಾರುಗಳ ಸಂಖ್ಯೆಯೇ ಈ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನ್ಯೂಯಾರ್ಕ್‌ನಲ್ಲಿ ಕಾರುಗಳ ಸಂಖ್ಯೆ 224 ಪ್ರತಿಶತದಷ್ಟು ಹೆಚ್ಚಾಗಿದೆ. ಪರಿಣಾಮವಾಗಿ, ಕಾರ್ ಪಾರ್ಕಿಂಗ್ ಪ್ರದೇಶದ ಬೆಲೆಗಳು ಮನೆ ಬೆಲೆಗಳಷ್ಟೇ ಹೆಚ್ಚಾಗುತ್ತಿದೆ ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.