ETV Bharat / international

Mpox cases: ಕಾಂಗೋದಲ್ಲಿ 5,236 ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆ, 229 ಮಂದಿ ಸಾವು:WHO - ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ

ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್‌ಒ)ಯ ವರದಿಯ ಪ್ರಕಾರ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ(ಡಿಆರ್‌ಸಿ)ದಲ್ಲಿ ಇಲ್ಲಿಯವರೆಗೆ ಒಟ್ಟು 5,236 ಶಂಕಿತ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿವೆ. ಜತೆಗೆ 229 ಮಂದಿ ಸಾವಿಗೀಡಾಗಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ
author img

By

Published : Jul 15, 2023, 7:04 PM IST

ಕಿನ್ಶಾಸಾ (ಕಾಂಗೋ): ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದ ಹೊಸ ವರದಿಯ ಪ್ರಕಾರ, ಈ ವರ್ಷ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (ಡಿಆರ್‌ಸಿ) ಒಟ್ಟು 5,236 ಶಂಕಿತ ಮಂಕಿಪಾಕ್ಸ್ (Mpox/monkeypox) ಪ್ರಕರಣಗಳು ಮತ್ತು 229 ಸಾವುಗಳು ವರದಿಯಾಗಿವೆ.

ಡಬ್ಲ್ಯೂಹೆಚ್‌ಒ ವರದಿಯ ಪ್ರಕಾರ "ಜನವರಿ 1ರಿಂದ ಜೂನ್ 25 ರವರೆಗೆ, ಹೆಚ್ಚಿನ ಶಂಕಿತ ಪ್ರಕರಣಗಳು (ಶೇ.70 ರಷ್ಟು) ಮತ್ತು ಸಾವುಗಳು (ಶೇ.72 ರಷ್ಟು) 0 ಮತ್ತು 15 ವರ್ಷ ವಯಸ್ಸಿನ ಮಕ್ಕಳಲ್ಲಿ ಸಂಭವಿಸಿವೆ. ಆದರೆ, 455 ಪ್ರಕರಣಗಳು ಮಾತ್ರ ಪಿಸಿಆರ್‌ನೊಂದಿಗೆ ದೃಢೀಕರಿಸಲ್ಪಟ್ಟಿವೆ ಎಂದು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಡಿಆರ್‌ಸಿಯಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ಪ್ರಕರಣಗಳು ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಕಾಳಜಿಯ ಪ್ರಶ್ನೆಯಾಗಿ ಉಳಿದಿದೆ. ಇದರ ನಿರಂತರ ಮೇಲ್ವಿಚಾರಣೆ ಮತ್ತು ಪ್ರತಿಕ್ರಿಯೆ ಅಗತ್ಯವಿರುತ್ತದೆ ಎಂದು ವರದಿ ಹೇಳಿದೆ. ಇಲ್ಲಿನ ಮೊದಲ ಮಾನವ ಪ್ರಕರಣ ಈಕ್ವಟೂರ್ ಪ್ರಾಂತ್ಯದಲ್ಲಿ 1970ರಲ್ಲಿ ಪತ್ತೆಯಾಗಿತ್ತು. ಜಾಗತಿಕ ಏಕಾಏಕಿ ಮೊದಲು ವಿಶ್ವಾದ್ಯಂತ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡುವ ದೇಶ(ಕಾಂಗೋ) ಇದಾಗಿತ್ತು. ಇಲ್ಲಿನ ಹೆಚ್ಚಿನ ಪ್ರಾಂತ್ಯಗಳಲ್ಲಿ ಪ್ರಕರಣಗಳು ವರದಿಯಾಗಿವೆ.

ಝೂನೋಟಿಕ್ ಪ್ರಸರಣ : ಪ್ರಕರಣ(ಮಂಕಿಪಾಕ್ಸ್) ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನವು ಸಮಭಾಜಕ ಮಳೆಕಾಡಿನೊಳಗೆ ಬರುತ್ತವೆ. ಅಲ್ಲಿ ವೈರಸ್ ಕಾಡು ಪ್ರಾಣಿಗಳ ನಡುವೆ ಪರಿಚಲನೆಯಾಗುತ್ತದೆ. ಝೂನೋಟಿಕ್ ಪ್ರಸರಣ ಘಟನೆಗಳ ಮೂಲ ಎಂದು ಊಹಿಸಲಾಗಿದೆ. ಆದಾಗ್ಯೂ, ಇದು ಹೆಚ್ಚಾಗಿ ದೃಢೀಕರಿಸಲ್ಪಟ್ಟಿಲ್ಲ. ಈ ವರ್ಷ ಮೊದಲ ಬಾರಿಗೆ ಕ್ವಾಂಗೋ ಪ್ರಾಂತ್ಯದಿಂದ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಕಳೆದ ಕೆಲವು ವರ್ಷಗಳಿಂದ ಕಾಂಗೋದಲ್ಲಿ ಅನೇಕ ಮಂಕಿಪಾಕ್ಸ್ ಪ್ರಕರಣಗಳು ಏಕಾಏಕಿ ಪತ್ತೆಯಾಗಿವೆ. ಹೆಚ್ಚಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಅನೇಕ ಜನರು ಕಾಡು ಪ್ರಾಣಿಗಳ ಮೂಲಗಳನ್ನು ಒಳಗೊಂಡಂತೆ ಪ್ರೋಟೀನ್‌ಗಾಗಿ ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತರಾಗಿದ್ದಾರೆ. ಸಾಮಾನ್ಯವಾಗಿ, ರೋಗನಿರ್ಣಯದ ಸೇವೆಗಳು ಮತ್ತು ಆರೋಗ್ಯ ರಕ್ಷಣೆಗೆ ಪ್ರವೇಶವು ಸೀಮಿತವಾಗಿರುತ್ತದೆ. ಇದು ರೋಗ ನಿಯಂತ್ರಣ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತದೆ ಎನ್ನಲಾಗಿದೆ.

ಏನಿದು ಮಂಕಿಪಾಕ್ಸ್?: ಮಂಕಿಪಾಕ್ಸ್ ಕೂಡ ಸಿಡುಬಿನ ಒಂದು ಪ್ರಭೇದ. ಮೊದಲ ಪ್ರಕರಣವನ್ನು 1958ರಲ್ಲಿ ಸಂಶೋಧನೆಗಾಗಿ ಹಿಡಿದಿಟ್ಟಿದ್ದ ಮಂಗಗಳಲ್ಲಿ ಪತ್ತೆ ಮಾಡಲಾಗಿತ್ತು. 1970ರಲ್ಲಿ ಪ.ಆಫ್ರಿಕಾದಲ್ಲಿ ಮೊದಲ ಬಾರಿಗೆ ಮಾನವರಲ್ಲಿ ಈ ಸೋಂಕು ಪತ್ತೆಯಾಗಿತ್ತು.

ಲಕ್ಷಣಗಳು: ಇತರ ಸಿಡುಬುಗಳಲ್ಲಿ ಬರುವಂತೆ ಇದರಲ್ಲೂ ಜ್ವರ, ಬೆನ್ನು ನೋವು, ತಲೆ ನೋವು ಹಾಗೂ ಸುಸ್ತು ಕಾಡುತ್ತದೆ. ಕಂಕುಳಿನಲ್ಲಿ, ಗದ್ದದ ಬಳಿ ಸಣ್ಣ ಉಂಡೆಗಳಂತಹ ದುಗ್ಧಗ್ರಂಥಿಗಳು ಕಾಣುತ್ತವೆ. ಸಾಮಾನ್ಯವಾಗಿ ಸಣ್ಣ ಗಾತ್ರದಲ್ಲಿ ಇರುವ ಇವು ದೇಹಕ್ಕೆ ರೋಗ ಬಂದಾಗ ದೊಡ್ಡದಾಗುತ್ತವೆ. ಜ್ವರ ಆರಂಭವಾದ 3 ದಿನಗಳ ಒಳಗೆ ಚರ್ಮ ಕೆಂಪಾಗಿ ಬೊಕ್ಕೆಗಳು ಏಳುತ್ತವೆ. ಈ ಬೊಕ್ಕೆಗಳ ಒಳಗೆ ನೀರಿನ ರೀತಿಯ ದ್ರಾವಣ ಇರುತ್ತದೆ. ಕೆಲವೊಮ್ಮೆ ಈ ದ್ರಾವಣದ ಬಣ್ಣ ಸ್ವಲ್ಪ ಹಳದಿ ಇರಬಹುದು. ಇವು ಮುಖ್ಯವಾಗಿ ಮುಖ, ಅಂಗೈ ಮತ್ತು ಅಂಗಾಲುಗಳ ಮೇಲೆ ಇರುತ್ತದಾದರೂ ತೀವ್ರವಾದ ಸೋಂಕಿನಲ್ಲಿ ಬಾಯಿ, ಕಣ್ಣು ಸೇರಿ ಶರೀರದ ಎಲ್ಲೆಡೆ ಇರಬಹುದು.

ಈ ಲಕ್ಷಣಗಳು ಸುಮಾರು 2 ರಿಂದ 4 ವಾರಗಳ ಕಾಲ ಇರುತ್ತವೆ. ಬಳಿಕ ಯಾವುದೇ ಚಿಕಿತ್ಸೆ ಇಲ್ಲದೆಯೂ ಗುಣವಾಗಬಹುದು. ಆದರೆ, ನವಜಾತ ಶಿಶುಗಳಲ್ಲಿ, ಕ್ಯಾನ್ಸರ್ ರೋಗಿಗಳಲ್ಲಿ, ಸ್ಟಿರಾಯ್ಡ್ ಚಿಕಿತ್ಸೆ ಪಡೆಯುವವರಲ್ಲಿ ಹಾಗೂ ಶರೀರದ ರಕ್ಷಕ ವ್ಯವಸ್ಥೆ ದುರ್ಬಲವಾಗಿರುವವರಲ್ಲಿ ಮಂಕಿಪಾಕ್ಸ್ ಪ್ರಾಣಕ್ಕೆ ಕುತ್ತುತರಬಹುದು.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಪತ್ತೆಯಾಯ್ತು ಮೊದಲ ಮಂಕಿಪಾಕ್ಸ್​ ಪ್ರಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.