ನ್ಯೂಯಾರ್ಕ್: ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗಮಾರ್ಗ ನಿಲ್ದಾಣದಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ನಡೆಸಿದ ಜನರ ಮೇಲೆ ಸ್ಮೋಕ್ ಗ್ರೆನೇಡ್ ಎಸೆದು ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 5 ಜನರು ಮೃತಪದ್ದಾರೆ. 13 ಜನರು ಗಾಯಗೊಂಡಿದ್ದಾರೆ.
25ನೇ ಸೇಂಟ್ ನಿಲ್ದಾಣದಿಂದ ಹೊರಟ ದಕ್ಷಿಣ ಭಾಗದ ಆರ್ ರೈಲಿನಲ್ಲಿ ಈ ದಾಳಿ ಸಂಭವಿಸಿದೆ. ರೈಲು ಚಲಿಸುತ್ತಿದ್ದಂತೆಯೇ ಶಂಕಿತ ಉಗ್ರ ಹೊಗೆ ಬಾಂಬ್ (ಸ್ಮೋಕ್ ಗ್ರೆನೇಡ್ ) ಎಸೆದು ಮನಸೋಇಚ್ಚೆ ಗುಂಡು ಹಾರಿಸಿದ್ದಾನೆ. ಬಳಿಕ ಮುಂದಿನ ನಿಲ್ದಾಣದಲ್ಲಿ ರೈಲು ನಿಂತ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಅಪರಿಚಿತನ ಗುಂಡೇಟಿಗೆ ಕನಿಷ್ಠ 5 ಜನರು ರೈಲಿನಲ್ಲೇ ಮೃತಪಟ್ಟಿದ್ದಾರೆ. 13 ಜನರು ತೀವ್ರ ಗಾಯಗೊಂಡಿದ್ದು ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಂಕಿತ ಶೂಟರ್ ಸುಮಾರು 5 ಅಡಿ 5 ಇಂಚು ಎತ್ತರದ ವ್ಯಕ್ತಿ, ಕಿತ್ತಳೆ ಬಣ್ಣದ ಬಟ್ಟೆ ಮತ್ತು ಗ್ಯಾಸ್ ಮಾಸ್ಕ್ ಧರಿಸಿದ್ದ ಎಂದು ಪೊಲೀಸರು ಗುರುತಿಸಿದ್ದಾರೆ. ಯಾವ ಕಾರಣಕ್ಕಾಗಿ ಗುಂಡು ಹಾರಿಸಿದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬಂದೂಕುಧಾರಿ ವ್ಯಕ್ತಿ ಶಂಕಿತ ಉಗ್ರ ಎಂದು ಊಹಿಸಲಾಗಿದ್ದು, ಅವನ ಸೆರೆಗಾಗಿ ತಂಡಗಳನ್ನು ರಚಿಸಲಾಗಿದೆ.
ಓದಿ: ಎಣ್ಣೆಕಾಳು, ಖಾದ್ಯ ತೈಲ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಕಡಿವಾಣ