ETV Bharat / international

ಕಾಬೂಲ್​ನಲ್ಲಿ ಶಾಲೆ ಮೇಲೆ ಬಾಂಬ್​ ದಾಳಿ: 46 ಬಾಲಕಿಯರು ಸೇರಿ 53 ಸಾವು.. ಭಾರಿ ಪ್ರಮಾಣದಲ್ಲಿ ಗಾಯ

author img

By

Published : Oct 3, 2022, 10:09 PM IST

ಇಲ್ಲಿಯವರೆಗೆ ಸ್ಫೋಟ ಮತ್ತು ಸಾವುನೋವುಗಳ ಕುರಿತು ಯಾವುದೇ ಹೆಚ್ಚುವರಿ ಮಾಹಿತಿಗಳು ಲಭ್ಯವಾಗಿಲ್ಲ ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ. ಸ್ಫೋಟದ ಕುರಿತು ತಾಲಿಬಾನ್ ಅಧಿಕಾರಿಗಳು ಯಾವುದೇ ಹೇಳಿಕೆಯನ್ನು ನೀಡಿಲ್ಲ. ದಾಳಿಯಲ್ಲಿ ಸುಮಾರು 100 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಬಹು ಮಾಧ್ಯಮಗಳು ವರದಿ ಮಾಡಿವೆ

46 girls women among 53 killed in Kabul education centre bombing
ಕಾಬೂಲ್​ನಲ್ಲಿ ಶಾಲೆ ಮೇಲೆ ಬಾಂಬ್​ ದಾಳಿ

ಕಾಬೂಲ್​(ಅಫ್ಘಾನಿಸ್ತಾನ): ಇಲ್ಲಿನ ಶಿಕ್ಷಣ ಕೇಂದ್ರವೊಂದರಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ 46 ಬಾಲಕೀಯರು ಮತ್ತು ಯುವತಿಯರು ಸೇರಿದಂತೆ 53 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಕಾಬೂಲ್‌ನ ಹಜಾರಾ ಕ್ವಾರ್ಟರ್‌ನಲ್ಲಿ ನಡೆಯುತ್ತಿದ್ದ ತರಗತಿಯಲ್ಲಿ ಈ ಬಾಂಬ್​ ದಾಳಿ ನಡೆದಿದೆ. 53 ಮಂದಿ ಸಾವನ್ನಪ್ಪಿದರೆ, 110 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಪಶ್ಚಿಮ ಭಾಗದ ಜನನಿಬಿಡ ಪ್ರದೇಶವನ್ನು ಗುರಿಯಾಗಿಸಿಕೊಂಡು ಸೋಮವಾರ ಮತ್ತೊಂದು ಸ್ಫೋಟ ಸಂಭವಿಸಿದೆ. ಶಾಹಿದ್ ಮಜಾರಿ ರಸ್ತೆಯ ಬಳಿಯ ಪುಲ್-ಎ-ಸುಖ್ತಾ ಪ್ರದೇಶದ ಬಳಿ ಈ ಸ್ಫೋಟ ಸಂಭವಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಇಲ್ಲಿಯವರೆಗೆ ಸ್ಫೋಟ ಮತ್ತು ಸಾವುನೋವುಗಳ ಕುರಿತು ಯಾವುದೇ ಹೆಚ್ಚುವರಿ ಮಾಹಿತಿಗಳು ಲಭ್ಯವಾಗಿಲ್ಲ ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ. ಸ್ಫೋಟದ ಕುರಿತು ತಾಲಿಬಾನ್ ಅಧಿಕಾರಿಗಳು ಯಾವುದೇ ಹೇಳಿಕೆಯನ್ನು ನೀಡಿಲ್ಲ. ದಾಳಿಯಲ್ಲಿ ಸುಮಾರು 100 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಬಹು ಮಾಧ್ಯಮಗಳು ವರದಿ ಮಾಡಿವೆ.

ಇನ್ನೊಂದೆಡೆ, ಕಾಜ್ ಶಿಕ್ಷಣ ಕೇಂದ್ರದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ಅಲ್ಪಸಂಖ್ಯಾತ ಹಜಾರಾ ಸಮುದಾಯದ ಮಹಿಳೆಯರು ಕಾಬೂಲ್‌ನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಪ್ಪು ಬಟ್ಟೆ ಧರಿಸಿದ ಮಹಿಳಾ ಪ್ರತಿಭಟನಾಕಾರರು ನರಮೇಧದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಪಸಂಖ್ಯಾತರು ಮತ್ತು ಅವರ ಹಕ್ಕುಗಳನ್ನು ರಕ್ಷಣೆ ಮಾಡವಂತೆ ಒತ್ತಾಯಿಸಿದರು ಎಂದು ಪಜ್ವಾಕ್ ಆಫ್ಘನ್ ನ್ಯೂಸ್ ವರದಿ ಮಾಡಿದೆ.

ಇದನ್ನು ಓದಿ:ಹಿಂದೂಗಳ ಪೂಜಾಸ್ಥಳಗಳನ್ನು ಕೆನಡಾ ಸರ್ಕಾರ ರಕ್ಷಿಸಲಿ: ಮಾಜಿ ರಾಯಭಾರಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.