ETV Bharat / international

ವಿಸ್ಕಿ ಕುಡಿದು ಸಾವನ್ನಪ್ಪಿದ ನಾಲ್ಕು ವರ್ಷದ ಮಗು; ಅಜ್ಜಿ, ತಾಯಿ ಅರೆಸ್ಟ್​ - 4-year-old drinking whiskey

ನಾಲ್ಕು ವರ್ಷದ ಹೆಣ್ಣು ಮಗುವಿಗೆ ಅಜ್ಜಿಯೋರ್ವಳು ವಿಸ್ಕಿ ಕುಡಿಸಿರುವ ಪರಿಣಾಮ ಅದು ಸಾವನ್ನಪ್ಪಿರುವ ಘಟನೆ ಬ್ಯಾಟನ್​ನಲ್ಲಿ ನಡೆದಿದೆ.

4-year-old dies after drinking whiskey
4-year-old dies after drinking whiskey
author img

By

Published : Apr 23, 2022, 5:23 PM IST

ಬ್ಯಾಟನ್(ಲೂಸಿಯಾನ): ನಾಲ್ಕು ವರ್ಷದ ಹೆಣ್ಣು ಮಗುವೊಂದು ವಿಸ್ಕಿ ಕುಡಿದು ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಅಜ್ಜಿ ಹಾಗೂ ತಾಯಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಲೂಸಿಯಾನದ ಬ್ಯಾಟನ್ ಎಂಬಲ್ಲಿ ಈ ಘಟನೆ ನಡೆದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಚಿಕ್ಕ ಮಗುವಿಗೆ ಅಜ್ಜಿ ರೊಕ್ಸಾನ್ನೆ(53) ವಿಸ್ಕಿ ಕುಡಿಯುವಂತೆ ಒತ್ತಾಯ ಮಾಡಿದ್ದು, ಇದನ್ನ ಮಗುವಿನ ತಾಯಿ ಇದನ್ನು ನೋಡುತ್ತಿರುವಾಗಲೇ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಮಗು ಮದ್ಯ ಸೇವಿಸಿರುವ ಪರಿಣಾಮ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಆರೋಪಿಗಳ ಬಂಧನವಾಗಿದೆ.

ಇದನ್ನೂ ಓದಿ: ಏಕಕಾಲದಲ್ಲಿ ಹಾರಾಡಿದ 77 ಸಾವಿರಕ್ಕೂ ಹೆಚ್ಚು ತ್ರಿವರ್ಣಧ್ವಜ; ಪಾಕ್ ದಾಖಲೆ ಮುರಿದ ಭಾರತ

ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ತೀವ್ರವಾದ ಅಲ್ಕೋಹಾಲ್ ಸೇವನೆಯಿಂದ ಮಗು ಸಾವನ್ನಪ್ಪಿದ್ದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.