ETV Bharat / international

ಕ್ಯಾಲಿಪೋರ್ನಿಯಾದಲ್ಲಿ ಅಪಹರಿಸಿ ಕೊಲೆ: ಭಾರತೀಯ ಮೂಲದ 8 ತಿಂಗಳ ಮಗು ಸೇರಿ ನಾಲ್ವರ ಹತ್ಯೆ

ಕ್ಯಾಲಿಪೋರ್ನಿಯಾದಲ್ಲಿ ಕಿಡ್ನಾಪ್ ಆಗಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರ ಕೊಲೆಯಾಗಿದೆ.

ಕ್ಯಾಲಿಪೋರ್ನಿಯಾದಲ್ಲಿ ಭಾರತೀಯರ ಹತ್ಯೆ
ಕ್ಯಾಲಿಪೋರ್ನಿಯಾದಲ್ಲಿ ಭಾರತೀಯರ ಹತ್ಯೆ
author img

By

Published : Oct 6, 2022, 10:17 AM IST

Updated : Oct 6, 2022, 1:25 PM IST

ಕ್ಯಾಲಿಪೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅಪಹರಿಸಲ್ಪಟ್ಟಿದ್ದ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಇವರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಂಜಾಬ್ ಮೂಲದ ಸಿಖ್ ಕುಟುಂಬದ 8 ತಿಂಗಳ ಮಗು ಸೇರಿ ನಾಲ್ವರನ್ನು ಕಳೆದ ಸೋಮವಾರ ಕಿಡ್ನಾಪ್ ಮಾಡಲಾಗಿತ್ತು.

ಜಸ್ ಪ್ರೀತ್ ಸಿಂಗ್(36), ಪತ್ನಿ ಜಸ್ಲೀನ್ ಕೌರ್(27) ಹಾಗೂ ಅವರ 8 ತಿಂಗಳ ಮಗು ಆರುಹಿ ಧೇರಿ ಮತ್ತು ಮಗುವಿನ ಚಿಕ್ಕಪ್ಪ ಅಮನ್ ದೀಪ್ ಸಿಂಗ್(39) ಕೊಲೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆಯಾದ ನಾಲ್ವರು ಒಂದೇ ಕುಟುಂಬದವರಾಗಿದ್ದಾರೆ.

ಕ್ಯಾಲಿಪೋರ್ನಿಯಾದಲ್ಲಿ ಭಾರತೀಯರ ಅಪಹರಣ: ಸೋಮವಾರ ಸೌತ್ ಹೈವೇಯ 800ನೇ ಬ್ಲಾಕ್​​ನಲ್ಲಿ ವಹಿವಾಟು ನಡೆಸುವಾಗ ಶಸ್ತ್ರಾಸ್ತ್ರ ತೋರಿಸಿ ನಾಲ್ವರನ್ನು ಅಪಹರಿಸಲಾಗಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆದ್ರೆ ನಾಲ್ವರು ಕೊಲೆಯಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ನಾಲ್ವರ ಶವಗಳು ಒಂದೇ ಕಡೆ ಕಂಡುಬಂದ ಮಾಹಿತಿಯನ್ನು ಕಾರ್ಮಿಕರೊಬ್ಬರು ನೀಡಿದ್ದರು. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪತ್ತೆ ಹಚ್ಚಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಅಪಹರಣ ಮಾಡಿದ್ದ ಆರೋಪಿ ಸಲ್ಗಾಡೋ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಸ್ಥಿತಿ ಗಂಭೀರವಾಗಿದೆ. ಭಾರತೀಯ ಕುಟುಂಬವನ್ನು ಆರೋಪಿ ಅಪಹರಿಸುವುದು ವಿಡಿಯೋದಲ್ಲಿ ಸೆರೆಯಾಗಿತ್ತು.

(ಓದಿ: ಮೆಕ್ಸಿಕೋದಲ್ಲಿ ಭೀಕರ ದಾಳಿ.. ಗುಂಡೇಟಿಗೆ ಮೇಯರ್​, ಪೊಲೀಸ್​ ಅಧಿಕಾರಿಗಳು ಸೇರಿ 18 ಮಂದಿ ಸಾವು)

Last Updated : Oct 6, 2022, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.