ETV Bharat / international

ಅಮೆರಿಕದ ಹ್ಯಾಂಪ್ಟನ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ; 4 ಮಂದಿ ಸಾವು

ಅಮೆರಿಕದಲ್ಲಿ ಹ್ಯಾಂಪ್ಟನ್​ನಲ್ಲಿ ದುಷ್ಕರ್ಮಿಗಳು ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾರೆ.

shootoutನೈಜೇರಿಯಾಲ್ಲಿ ಬಂದೂಕು ದಾಳಿ 24 ಸಾವು: ಜುಲೈ 8 ರಂದು ನೈಜೀರಿಯಾದ ಬೆನ್ಯೂ ರಾಜ್ಯದ ಗ್ರಾಮವೊಂದಕ್ಕೆ ಬಂದೂಕುಧಾರಿಗಳು ನುಗ್ಗಿ 24 ಗ್ರಾಮಸ್ಥರನ್ನು ಹತ್ಯೆಗೈದಿರುವ ಘಟನೆ ನಡೆದಿತ್ತು. ಉಗ್ರರ ಗುಂಪು ದಾಳಿ ನಡೆಸಿ ಗ್ರಾಮಸ್ಥರ ಮಾರಣಹೋಮ ನಡೆಸಿದ್ದರು. ಬಂದೂಕುಧಾರಿಗಳು ಶನಿವಾರ ಉಕುಮ್ ಜಿಲ್ಲೆಯ ಅಕ್ಪುನಾ ಗ್ರಾಮದ ಜನರಿಗೆ 2 ಗಂಟೆಗಳಿಗೂ ಹೆಚ್ಚು ಕಾಲ ಮನಬಂದಂತೆ ಗುಂಡು ಹಾರಿಸಿದ್ದರು. ಒಟ್ಟು ವಿವಿಧ ಪ್ರಕರಣ ಗಲಭೆಗಳು ಸೇರಿ ನೈಜೇರಿಯಾದಲ್ಲಿ ಈ ವರ್ಷ 100ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.
shootout
author img

By

Published : Jul 16, 2023, 9:22 AM IST

Updated : Jul 16, 2023, 10:10 AM IST

ಹ್ಯಾಂಪ್ಟನ್ (ಅಮೆರಿಕ): ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಸಾಮಾನ್ಯ ಎಂಬಂತೆ ನಡೆಯುತ್ತಿವೆ. ಇದೀಗ, ಹ್ಯಾಂಪ್ಟನ್‌ನಲ್ಲಿ ದುಷ್ಕರ್ಮಿಗಳು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಅಟ್ಲಾಂಟಾದ ದಕ್ಷಿಣಕ್ಕಿರುವ ಸುಮಾರು 8,500 ಜನರು ವಾಸವಿರುವ ಹ್ಯಾಂಪ್ಟನ್‌ನ ಉಪವಿಭಾಗದಲ್ಲಿ ಶನಿವಾರ ಬೆಳಿಗ್ಗೆ ಶೂಟೌಟ್​ ನಡೆದಿದೆ. ದಾಳಿ ನಡೆಸಿದ ಶಂಕಿತ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಆರೋಪಿಯ ಬಂಧನಕ್ಕಾಗಿ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದೆ.

ನೈಜೀರಿಯಾದಲ್ಲಿ ನಡೆದಿದ್ದ ಗುಂಡಿನ ದಾಳಿ : ಜುಲೈ 8ರಂದು ನೈಜೀರಿಯಾದ ಬೆನ್ಯೂ ರಾಜ್ಯದ ಗ್ರಾಮವೊಂದಕ್ಕೆ ನುಗ್ಗಿದ ಬಂದೂಕುಧಾರಿಗಳು 24 ಗ್ರಾಮಸ್ಥರನ್ನು ಅಮಾನುಷವಾಗಿ ಹತ್ಯೆಗೈದಿದ್ದರು. ಉಕುಮ್ ಜಿಲ್ಲೆಯ ಅಕ್ಪುನಾ ಗ್ರಾಮದ ಜನರ ಮೇಲೆ ಎರಡು ಗಂಟೆಗೂ ಹೆಚ್ಚು ಕಾಲ ಮನಬಂದಂತೆ ಗುಂಡು ಹಾರಿಸಿದ್ದರು. ವಿವಿಧ ಗಲಭೆ ಪ್ರಕರಣಗಳಿಂದ ದೇಶದಲ್ಲಿ ಈ ವರ್ಷ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಕಾರ್​ ರೇಸಿಂಗ್​ ಮೇಲೆ ಗುಂಡಿನ ದಾಳಿ : ಮೆಕ್ಸಿಕೋದಲ್ಲಿ ಕಾರ್​ ರೇಸಿಂಗ್​ ವೇಳೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 10 ಮಂದಿ ರೇಸರ್​ಗಳು ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿದ್ದರು. ಮೇ 20, 2023ರಂದು ಉತ್ತರ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಕಾರ್‌ ರೇಸಿಂಗ್​ ನಡೆಯುತ್ತಿತ್ತು. ವ್ಯಾನ್​ವೊಂದರಲ್ಲಿ ಬಂದ ಬಂದೂಕುಧಾರಿಗಳು ಕಾರ್‌ ರೇಸ್​ನಲ್ಲಿ ಭಾಗವಹಿಸಿದವರ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದರು. ಇದರಿಂದ ಕನಿಷ್ಠ 10 ಮಂದಿ ರೇಸರ್​ಗಳು ಪ್ರಾಣ ಕಳೆದುಕೊಂಡಿದ್ದರು. 9 ಮಂದಿಗೆ ತೀವ್ರ ಗಾಯಗಳಾಗಿತ್ತು ಎಂದು ಬಾಜಾ ಕ್ಯಾಲಿಫೋರ್ನಿಯಾ ಸ್ಟೇಟ್ ಅಟಾರ್ನಿ ಜನರಲ್ ಕಚೇರಿ ತಿಳಿಸಿತ್ತು.

ಒಂದೇ ವಾರದಲ್ಲಿ 6 ಜನ ಸಾವು, 25 ಮಂದಿ ಗಾಯ: ಜೂನ್​ ತಿಂಗಳ ವಾರವೊಂದರಲ್ಲೇ ಅಮೆರಿಕದಲ್ಲಿ ನಡೆದ ಗುಂಡಿನ ದಾಳಿ ಸೇರಿದಂತೆ ವಿವಿಧ ರೀತಿಯ ಹಿಂಸಾಚಾರದಲ್ಲಿ 6 ಮಂದಿ ಸಾವನ್ನಪ್ಪಿದ್ದ, 25 ಮಂದಿ ಜನ ಗಾಯಗೊಂಡಿದ್ದರು. ಚಿಕಾಗೋದ ನೈಋತ್ಯಕ್ಕೆ ಸುಮಾರು 20 ಮೈಲುಗಳಷ್ಟು ದೂರದಲ್ಲಿರುವ ಇಲಿನಾಯ್ಸ್‌ನ ವಿಲ್ಲೋಬ್ರೂಕ್‌ನ ಪಾರ್ಕಿಂಗ್ ಸ್ಥಳವೊಂದರಲ್ಲಿ ನೂರಾರು ಜನರು ಜೂನ್‌ಟೀಂತ್ ಆಚರಿಸಲು ಜಮಾಯಿಸಿದ್ದರು. ಈ ವೇಳೆ, ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಡುಪೇಜ್ ಕೌಂಟಿ ಶೆರಿಫ್‌ ಕಚೇರಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಆಚರಣೆ ಹಿಂಸಾಸ್ವರೂಪ ಪಡೆದುಕೊಂಡಿತ್ತು.

ಉಪನಗರ ಚಿಕಾಗೋ, ವಾಷಿಂಗ್ಟನ್ ಸ್ಟೇಟ್, ಪೆನ್ಸಿಲ್ವೇನಿಯಾ, ಸೇಂಟ್ ಲೂಯಿಸ್, ದಕ್ಷಿಣ ಕ್ಯಾಲಿಫೋರ್ನಿಯಾ ಮತ್ತು ಬಾಲ್ಟಿಮೋರ್‌ನಲ್ಲಿನ ಕಳೆದ ಹಲವಾರು ವರ್ಷಗಳಿಂದ ಗುಂಡಿನ ದಾಳಿಗಳು, ನರಹತ್ಯೆಗಳು ಮತ್ತು ಇತರ ಹಿಂಸಾಚಾರಗಳ ಹೆಚ್ಚಾಗಿ ಕಂಡು ಬರುತ್ತಿವೆ. ಪ್ರಾಧ್ಯಾಪಕ ಡೇನಿಯಲ್ ನಾಗಿನ್ ಪ್ರಕಾರ, ಸಾಮಾನ್ಯವಾಗಿ ಹದಿಹರೆಯದವರಲ್ಲಿ ಕಂಡುಬರುವ ಸಣ್ಣಪುಟ್ಟ ವಿವಾದಗಳು ಗಂಭೀರ ಹಿಂಸಾಚಾರಕ್ಕೆ ಕಾರಣವಾಗಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Mpox cases: ಕಾಂಗೋದಲ್ಲಿ 5,236 ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆ, 229 ಮಂದಿ ಸಾವು:WHO

Last Updated : Jul 16, 2023, 10:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.