ETV Bharat / international

ಅಮೆರಿಕದ ಹುಕ್ಕಾ ಲಾಂಜ್‌ನಲ್ಲಿ ಗುಂಡಿನ ದಾಳಿ: ಮೂವರ ಸಾವು, ಆರು ಮಂದಿಗೆ ಗಾಯ - ಹುಕ್ಕಾ ಲಾಂಜ್‌ನಲ್ಲಿ ಗುಂಡಿನ ದಾಳಿ

Shooting at American Hookah Lounge: ಅಮೆರಿಕದ ದಕ್ಷಿಣ ಸಿಯಾಟಲ್‌ ಹುಕ್ಕಾ ಲಾಂಜ್‌ನಲ್ಲಿ ಭಾನುವಾರ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಮೂವರ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

3 dead, 6 wounded in shooting at a hookah lounge in south Seattle; no word on suspects
ಅಮೆರಿಕದ ಹುಕ್ಕಾ ಲಾಂಜ್‌ನಲ್ಲಿ ಗುಂಡಿನ ದಾಳಿ: ಮೂವರ ಸಾವು, ಆರು ಮಂದಿ ಗಾಯ
author img

By

Published : Aug 21, 2023, 7:58 AM IST

ಸಿಯಾಟಲ್ (ಅಮೆರಿಕ): ದಕ್ಷಿಣ ಸಿಯಾಟಲ್‌ನ ಹುಕ್ಕಾ ಲಾಂಜ್‌ನಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಆರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೌಂಟ್ ಬೇಕರ್ ಸಮೀಪದಲ್ಲಿ ಭಾನುವಾರ ಬೆಳಗ್ಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಆರೋಪಿಗಳ ಬಗ್ಗೆ ಸಿಟಿ ಪೊಲೀಸರು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಅದೇ ಸಮಯದಲ್ಲಿ, ಹಲವರು 911 ಸಂಖ್ಯೆ ದೂರವಾಣಿ ಕರೆಗಳನ್ನು ಮಾಡಿದ್ದಾರೆ. ಈ ಕರೆಗಳಿಂದ ಪೊಲೀಸರಿಗೆ ಘಟನೆಯ ವರದಿ ಲಭಿಸಿದೆ. ಭಾನುವಾರ ಬೆಳಗ್ಗೆ ಸುಮಾರು 4.30 ಗಂಟೆಯ ಸಮಯದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓರ್ವನ ಸ್ಥಿತಿ ಚಿಂತಾಜನಕ: ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ವೇಳೆ, ಘಟನೆಯಲ್ಲಿ ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃಪಟ್ಟವರ ಹೆಸರು ಮತ್ತು ವಯಸ್ಸನ್ನು ಬಿಡುಗಡೆ ಮಾಡಲಾಗಿಲ್ಲ. ಗಾಯಗೊಂಡ ಆರು ಜನರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡ ಇತರ ಐವರ ಆರೋಗ್ಯ ಮಧ್ಯಮ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಯಾಟಲ್ ಮೇಯರ್ ಹೇಳಿದ್ದೇನು?: ಸಿಯಾಟಲ್ ಪೊಲೀಸರು ಜುಲೈವರೆಗೆ 869 ಬಂದೂಕುಗಳನ್ನು ಕ್ಷಿಪ್ರವಾಗಿ ಹಿಂಪಡೆದಿದ್ದಾರೆ. ವೇಗವಾಗಿ ಶಸ್ತ್ರಾಸ್ತ್ರಗಳನ್ನು ಹಿಂಪಡೆದುಕೊಂಡಿದ್ದರೂ ಸಹ ಇನ್ನೂ ಹೆಚ್ಚಿನ ಅಕ್ರಮ ಬಂದೂಕುಗಳು ಕೆಲವರ ಕೈಯಲ್ಲಿವೆ. ಇವೆಲ್ಲ ಮತ್ತೊಂದು ದುರಂತಕ್ಕೆ ಕಾರಣವಾಗಬಹುದು ಎಂದು ಸಿಯಾಟಲ್ ಮೇಯರ್ ಬ್ರೂಸ್ ಹ್ಯಾರೆಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಪ್ರಕರಣ, ಅಮೆರಿಕದ ಹ್ಯಾಂಪ್ಟನ್‌ನಲ್ಲಿ ಗುಂಡಿನ ದಾಳಿ - ನಾಲ್ವರ ಸಾವು: ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಸಾಮಾನ್ಯ ಎನ್ನುವಂತೆ ನಡೆಯುತ್ತಿವೆ. ಜುಲೈ 15ರಂದು ಹ್ಯಾಂಪ್ಟನ್‌ನಲ್ಲಿ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದರು. ಅಟ್ಲಾಂಟಾದ ದಕ್ಷಿಣಕ್ಕಿರುವ ಸುಮಾರು 8,500 ಜನರು ನೆಲೆಸಿರುವ ಹ್ಯಾಂಪ್ಟನ್‌ನ ಉಪವಿಭಾಗದಲ್ಲಿ ಜುಲೈ 15ರಂದು (ಶನಿವಾರ) ಬೆಳಿಗ್ಗೆ ಶೂಟೌಟ್​ ನಡೆದಿತ್ತು.

ನೈಜೀರಿಯಾದಲ್ಲಿ ನಡೆದಿತ್ತು ಗುಂಡಿನ ದಾಳಿ: ಜುಲೈ 8ರಂದು ನೈಜೀರಿಯಾದ ಬೆನ್ಯೂ ರಾಜ್ಯದ ಗ್ರಾಮವೊಂದಕ್ಕೆ ನುಗ್ಗಿದ ಬಂದೂಕುಧಾರಿಗಳು, 24 ಗ್ರಾಮಸ್ಥರನ್ನು ಅಮಾನುಷವಾಗಿ ಕೊಲೆ ಮಾಡಿದ್ದರು. ಉಕುಮ್ ಜಿಲ್ಲೆಯ ಅಕ್ಪುನಾ ಗ್ರಾಮದ ಜನರ ಮೇಲೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ವಿವಿಧ ಗಲಭೆ ಪ್ರಕರಣಗಳಿಂದ ದೇಶದಲ್ಲಿ ಈ ವರ್ಷ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಇದನ್ನೂ ಓದಿ: Shooting in US: ವಾಷಿಂಗ್ಟನ್​ನಲ್ಲಿ ಅಪರಿಚಿತರಿಂದ ಗುಂಡಿನ ದಾಳಿ: ಮೂವರು ಸಾವು, ಇಬ್ಬರು ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.