ಇನ್ವರ್ ಗ್ರೋವ್ ಹೈಟ್ಸ್(ಅಮೆರಿಕ): ದಯಾಮರಣಕ್ಕೊಳಗಾದ ಪ್ರಾಣಿಗಳ ಶವಗಳನ್ನು ತಿಂದ 13 ಹದ್ದುಗಳು ಮಿನ್ನೇಸೋಟಾದ ಲ್ಯಾಂಡ್ಫಿಲ್ ಪ್ರದೇಶದಲ್ಲಿ ಅನುಚಿತವಾಗಿ ಅಸ್ವಸ್ತಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದರಲ್ಲಿ ಮೂರು ಹದ್ದುಗಳು ಮೃತಪಟ್ಟಿವೆ.
ಮಿನ್ನೇಸೋಟ ವಿಶ್ವವಿದ್ಯಾಲಯದ ರಾಪ್ಟರ್ ಕೇಂದ್ರದಲ್ಲಿ ಹತ್ತು ಪಕ್ಷಿಗಳನ್ನು ತೀವ್ರ ನಿಗಾದಲ್ಲಿಟ್ಟಿದ್ದು, ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ಟೋರಿಯಾ ಹಾಲ್ ಪಕ್ಷಿಗಳು ಚೇತರಿಸಕೊಳ್ಳುವ ಆಶಾವಾದ ವ್ಯಕ್ತಪಡಿಸಿದ್ದಾರೆ. ‘ಹದ್ದುಗಳು ಪತ್ತೆಯಾದಾಗ ಚಲನರಹಿತವಾಗಿ ಹಿಮದಲ್ಲಿ ಮುಖಮಾಡಿ ಮಲಗಿದ್ದವು.
ಪಶುವೈದ್ಯರು ಹದ್ದುಗಳನ್ನು ಪರೀಕ್ಷಿಸಿದಾಗ ಪೆಂಟೊಬಾರ್ಬಿಟಲ್ ಎಂಬ ಕೆಮಿಕಲ್ನಿಂದ ದಯಾಮರಣಗೊಳಿಸಲಾದ ಪ್ರಾಣಿ ಮೃತದೇಹವನ್ನು ತಿಂದು ಇವುಗಳು ಅಸ್ವಸ್ತಗೊಂಡಿವೆ ಎಂದು ಶಂಕಿಸಲಾಗಿದೆ. ರಾಸಾಯನಿಕವಾಗಿ ದಯಾಮರಣಕ್ಕೆ ಒಳಗಾದ ಪ್ರಾಣಿಗಳನ್ನು ಇತರ ಪ್ರಾಣಿಗಳು ಸೇವಿಸದ ಹಾಗೆ ವಿಲೇವಾರಿ ಮಾಡಬೇಕು ಎಂಬ ನಿಯಮವಿದೆ ಎಂದು ವೈದ್ಯ ಹಾಲ್ ತಿಳಿಸಿದ್ದಾರೆ.
ದಿ ರಾಪ್ಟರ್ ಸೆಂಟರ್ಗೆ ತರಲಾದ 11 ಹದ್ದುಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಮೂರು ಹದ್ದುಗಳ ದೇಹದಲ್ಲಿ ಸೀಸದ ಅಂಶ ಪತ್ತೆಯಾಗಿದ್ದು, ಒಂದು ಹದ್ದು ಹಕ್ಕಿಜ್ವರದಿಂದ ಮೃತಪಟ್ಟಿದೆ. ಉಳಿದ ಹದ್ದುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಹದ್ದುಗಳ ಆರೈಕೆಗೆ ಸಹಾಯ ಮಾಡಲು ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ವಿಕ್ಟೋರಿಯಾ ಹಾಲ್ ತಿಳಿಸಿದರು.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಶೆಲ್ ದಾಳಿ: ಪಾಕಿಸ್ತಾನದ 7 ಜನ ಸಾವು