ETV Bharat / international

ಬ್ರೇಕ್​ ಫೇಲ್​ ಆಗಿ ಉರುಳಿ ಬಿದ್ದ ಬಸ್​... 20 ಮಂದಿ ದಾರುಣ ಸಾವು - Columbia bus disaster

ಕೊಲಂಬಿಯಾದಲ್ಲಿ ನಡೆದ ಬಸ್​ ದುರಂತದಲ್ಲಿ 20 ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ. ಬಸ್​ನ ಬ್ರೇಕ್​ ಫೇಲ್​ ಆಗಿರುವುದು ಇದಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

20-killed-in-colombia-bus-accident
ಕೊಲಂಬಿಯಾದಲ್ಲಿ 20 ಮಂದಿ ದಾರುಣ ಸಾವು
author img

By

Published : Oct 16, 2022, 7:00 AM IST

ಬೊಗೊಟಾ(ಕೊಲಂಬಿಯಾ): ಬ್ರೇಕ್​ ವೈಫಲ್ಯದಿಂದ ಬಸ್ಸೊಂದು ಉರುಳಿ ಬಿದ್ದು 20 ಮಂದಿ ದಾರುಣವಾಗಿ ಮೃತಪಟ್ಟು, 15 ಮಂದಿ ಗಾಯಗೊಂಡ ದುರ್ಘಟನೆ ನೈಋತ್ಯ ಕೊಲಂಬಿಯಾದಲ್ಲಿ ಶನಿವಾರ ನಡೆದಿದೆ. ಈ ಬಸ್​ ಕೊಲಂಬಿಯಾದಿಂದ ಟುಮಾಕೊ ನಗರಕ್ಕೆ ತೆರಳುತ್ತಿತ್ತು. ಈ ವೇಳೆ ಇಲ್ಲಿನ ಪಾಸ್ತೋ ಮತ್ತು ಪೊಪಯಾನ್​ ನಗರಗಳ ನಡುವಿನ ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ ಬಸ್​ ದುರಂತ ಸಂಭವಿಸಿದೆ.

ಮಂಜು ಕವಿದ ವಾತಾವರಣದಲ್ಲಿ ಬಸ್​ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಬಸ್​ ಉರುಳಿಬಿದ್ದಿದೆ. ಬಸ್​ನಲ್ಲಿನ ತಾಂತ್ರಿಕ ದೋಷದಿಂದಾಗಿ ಬ್ರೇಕ್​ ಫೇಲ್ ಆಗಿ ದುರಂತ ಸಂಭವಿಸಿದೆ.

ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾಂತ್ರಿಕ ವೈಫಲ್ಯದಿಂದ ದುರ್ಘಟನೆ ಸಂಭವಿಸಿದೆ. 20 ಮಂದಿ ಸಾವಿಗೀಡಾಗಿದ್ದು, 15 ಮಂದಿ ಗಾಯಗೊಂಡಿದ್ದಾರೆ. 10 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಅರಣ್ಯದಲ್ಲಿ ಬಾಂಬ್ ಇಟ್ಟ ಕಿಡಿಗೇಡಿಗಳು​: ಮೇಯುವಾಗ ಎಮ್ಮೆ ಬಾಯಲ್ಲೇ ಸ್ಫೋಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.