ಸೇಂಟ್ ಪಾಲ್ (ಮಿನ್ನೇಸೋಟ): ಶನಿವಾರ ಮಿನ್ನೇಸೋಟದ ಸೇಂಟ್ ಪಾಲ್ನಲ್ಲಿ ಗುಂಡು ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಐವರು ಗುಂಡು ಹಾರಿಸಿದ್ದಾರೆ, ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗುಂಡಿನ ದಾಳಿಗೆ ಸೂಕ್ತ ಕಾರಣಗಳೂ ಸಹ ಇಲ್ಲ. ಕಾರ್ಯಕ್ರಮ ಒಂದರ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ.
-
Larry Jiles Jr. aka Chef Hot Hands was one of the victims fatally shot yesterday in St. Paul at a funeral reception, Quad Area Chamber of Commerce confirms. Photo from a ribbon cutting for his cafe in Centerville.
— Kirsten Mitchell (@Kirsten_TV) February 26, 2023 " class="align-text-top noRightClick twitterSection" data="
“We will remember his warm smile and passion for serving people.” pic.twitter.com/8iWPSaf8N3
">Larry Jiles Jr. aka Chef Hot Hands was one of the victims fatally shot yesterday in St. Paul at a funeral reception, Quad Area Chamber of Commerce confirms. Photo from a ribbon cutting for his cafe in Centerville.
— Kirsten Mitchell (@Kirsten_TV) February 26, 2023
“We will remember his warm smile and passion for serving people.” pic.twitter.com/8iWPSaf8N3Larry Jiles Jr. aka Chef Hot Hands was one of the victims fatally shot yesterday in St. Paul at a funeral reception, Quad Area Chamber of Commerce confirms. Photo from a ribbon cutting for his cafe in Centerville.
— Kirsten Mitchell (@Kirsten_TV) February 26, 2023
“We will remember his warm smile and passion for serving people.” pic.twitter.com/8iWPSaf8N3
ಶನಿವಾರ ಸಂಜೆ 5 ಗಂಟೆಗೆ ಸೆಲೆಬ್ರೇಷನ್ ಆಫ್ ಲೈಫ್ ಕಾರ್ಯಕ್ರಮದ ನಂತರ ಪಾರ್ಕಿಂಗ್ ಸ್ಥಳದಲ್ಲಿ ನಡೆದ ಜಗಳದಲ್ಲಿ ಎಲ್ಲ ಐವರು ಗುಂಡು ಹಾರಿಸಿದ್ದಾರೆ. ಇದರಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದ ಬಳಿಕ ಎರಡನೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸೇಂಟ್ ಪಾಲ್ ಪೊಲೀಸರು ತಿಳಿಸಿದ್ದಾರೆ.
ಓರ್ವನಿಗೆ ಗಂಭೀರ ಗಾಯಗಳಾಗಿವೆ. ಮತ್ತಿಬ್ಬರು ಯುವತಿಯರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಘಟನೆ ಸಂಬಂಧ ಯಾರನ್ನೂ ಪೊಲೀಸರು ಇದು ವರೆಗೆ ಬಂಧಿಸಿಲ್ಲ. ದೂರಿನ ಸಂಬಂದ ಯಾವುದೇ ಹೆಸರನ್ನು ಪೊಲೀಸರು ತಿಳಿಸಿಲ್ಲ. ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಶನಿವಾರ ರಾತ್ರಿ ಟ್ವೀಟ್ ಮಾಡಿ," ನಗರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಸ್ವೀಕಾರ ಅಲ್ಲ" ಎಂದಿದ್ದಾರೆ.
ಸೇಂಟ್ ಪಾಲ್ ಮೇಯರ್ ಮೆಲ್ವಿನ್ ಕಾರ್ಟರ್ ಈ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ," ನಗರದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರು ದೂಷಿಸುತ್ತಿದ್ದಾರೆ. ಅದನ್ನು ಕೇಳಲಾಗುತ್ತಿಲ್ಲ. ಹಿಂಸಾಚಾರ, ಹತ್ಯೆಯಂತಹ ಪದ ಬಳಕೆ ತುಂಬಾ ಕಠಿಣವಾಗಿ ಕೇಳಿಸುತ್ತದೆ. ಸಾಧ್ಯವಾದಷ್ಟು ನಗರವನ್ನು ಶಾಂತಿಯಿಂದ ಇಡಲು ಬಯಸುತ್ತೇವೆ. ಈ ರೀತಿಯ ಹಿಂಸಾಚಾರವನ್ನು ಆದಷ್ಟು ನಿಯಂತ್ರಕ್ಕೆ ತರುತ್ತೇವೆ. ಐವರು ಗುಂಡು ಹಾರಿಸಿಕೊಂಡಿರುವ ಘಟನೆ ನಮ್ಮ ಭದ್ರತೆಯನ್ನು ಪ್ರಶ್ನೆ ಮಾಡುತ್ತಿದೆ" ಎಂದಿದ್ದಾರೆ.
ಇದನ್ನೂ ಓದಿ: ಒರ್ಲ್ಯಾಂಡೊದಲ್ಲಿ ಶೂಟೌಟ್ಗೆ 9 ವರ್ಷದ ಬಾಲಕಿ ಹಾಗೂ ಒರ್ವ ಪರ್ತಕರ್ತ ಬಲಿ
ನಗರದಲ್ಲಿ ಅಪರಾಧ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದೆ. ಎರಡು ವಾರಗಳ ಹಿಂದೆ ಹಾರ್ಡಿಂಗ್ ಹೈಸ್ಕೂಲ್ ವಿದ್ಯಾರ್ಥಿಯ ಅಂತ್ಯಕ್ರಿಯೆಯ ವೇಳೆ ಮೂವರು ಯುವಕರು ಗುಂಡು ಹಾರಿಸಿ ಗಾಯ ಮಾಡಿಕೊಂಡಿದ್ದರು. ಈ ಘಟನೆ ಸಂಭವಿಸಿದ ಬೆನ್ನಲ್ಲೆ ಮತ್ತೆ ಗುಂಡು ಹಾರಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ವಿನಾಕಾರಣ ಗುಂಡಿನ ದಾಳಿಯಿಂದ ಸಾವುಗಳು: ಅಮೆರಿಕದಲ್ಲಿ ವಿನಾ ಕಾರಣ ಶೂಟೌಟ್ ಮಾಡಿ ಮೂವರನ್ನು ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಮೆಕ್ಸಿಕೋದ ಅಲ್ಬುಕರ್ಕ್ನಲ್ಲಿ ಒಬ್ಬ ವ್ಯಕ್ತಿ ಚಾಕು ಇರಿತ ಹಾಗೂ ಇಬ್ಬರು ಶೂಟೌಟ್ನಿಂದ ಕೊಲೆಯಾಗಿರುವ ಪ್ರಕರಣ ನಡೆದಿತ್ತು. ಈ ಎರಡೂ ಘಟನೆಗಳಲ್ಲಿ ಕೊಲೆಗಳಿಗೆ ಯಾವುದೇ ಕಾರಣಗಳಿರಲ್ಲಿಲ್ಲ.
ಅಮೆರಿಕದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಮಾಧ್ಯಮದ ಕೆಲಸಗಾರರು ಮತ್ತು 9 ವರ್ಷದ ಮೇಲೆ ಗುಂಡು ಹಾರಿಸಿ ಸಾಯಿಸಲಾಗಿತ್ತು. ಈ ದಾಳಿಯಲ್ಲಿ 9 ವರ್ಷದ ಮಗುವಿನ ತಾಯಿಗೂ ಗಾಯಗಳಾಗಿತ್ತು. ಈ ಸಂಬಂಧ ಆರೋಪಿ 19 ವರ್ಷದ ಕೀತ್ ಮೆಲ್ವಿನ್ ಮೋಸೆಸ್ ಎಂಬುವವನನ್ನು ಪೊಲೀಸರು ಬಂಧಿಸಿದ್ದರು. ಆದರೆ ಗುಂಡಿ ದಾಳಿಗೆ ಕಾರಣವನ್ನು ಈತನೂ ಹೇಳಿಲ್ಲ.
ಇದನ್ನೂ ಓದಿ: ವಿನಾಕಾರಣ ಗುಂಡಿನ ದಾಳಿ ಮೂವರ ಸಾವು: ಆರೋಪಿ ಪತ್ತೆಗಾಗಿ ಶೋಧ