ಕಠ್ಮಂಡು(ನೇಪಾಳ): ದಕ್ಷಿಣ ನೇಪಾಳದ ಬಾರಾ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಬಸ್ ಚಿತ್ವಾನ್‌ನ ನಾರಾಯಣಗಡದಿಂದ ಬಾರಾದ ಪಥ್ಲೈಯಾಗೆ ತೆರಳುತ್ತಿದ್ದಾಗ ಪೂರ್ವ-ಪಶ್ಚಿಮ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ವಾನ್‌ಪುರ ಜಿಲ್ಲೆಯ ಹೆಟೌಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 12 ಮಂದಿ ಸಾವನ್ನಪ್ಪಿದ್ದು, ಇಬ್ಬರು ಚುರೆ ಹಿಲ್ ಆಸ್ಪತ್ರೆಯಲ್ಲಿ ಮತ್ತು ಮಕ್ವಾನ್‌ಪುರ ಆಸ್ಪತ್ರೆ ಮತ್ತು ಚಿತ್ವಾನ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 24 ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಕವಾನ್‌ಪುರ ಜಿಲ್ಲಾ ಪೊಲೀಸ್ ಇನ್ಸ್‌ಪೆಕ್ಟರ್ ಬಲರಾಮ್ ಶ್ರೇಷ್ಠಾ ತಿಳಿಸಿದ್ದಾರೆ.
ದಶೈನ್ ಹಬ್ಬದಿಂದ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ. ಬಸ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಕೊಂಡಿತ್ತು. ಹೀಗಾಗಿಯೇ ನಿಯಂತ್ರಣ ಕಳೆದುಕೊಂಡ ಬಸ್ ಸೇತುವೆಯಿಂದ ನದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ನೇಪಾಳದಲ್ಲಿ ದಶೈನ್‌ನಂತಹ ಹಬ್ಬಗಳನ್ನು ಸಂಭ್ರಮದಿಂದ ಭರ್ಜರಿಯಾಗಿ ಆಚರಿಸಲಾಗುತ್ತದೆ. ಭಾರಿ ಸಂಖ್ಯೆಯಲ್ಲಿ ಜನ ಸೇರುವುದರಿಂದ ಇಂತಹ ಅಪಾಯಗಳು ಆಗುತ್ತಿರುತ್ತವೆ.
ಇದನ್ನು ಓದಿ:ವಿಷಾಹಾರ ಸೇವನೆ ಶಂಕೆ: ಮೂವರು ಬಾಲಕರು ಸಾವು, 11 ಮಂದಿ ಆಸ್ಪತ್ರೆಗೆ ದಾಖಲು