ಮಾಸ್ಕೋ(ರಷ್ಯಾ): ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸಲು ಯುವಕರನ್ನು ತುರ್ತಾಗಿ ಸೇನೆಗೆ ಸೇರಿಸಿಕೊಂಡು ಸಮರಾಭ್ಯಾಸ ಮಾಡಿಸುತ್ತಿದೆ. ಅಭ್ಯಾಸನಿರತರಾಗಿದ್ದ ವೇಳೆ ಇಬ್ಬರು ಸ್ವಯಂಸೇವಕ ಸೈನಿಕರು ಸೇನಾಪಡೆಯ ಮೇಲೆಯೇ ಮಾಡಿದ ಗುಂಡಿನ ದಾಳಿಗೆ 11 ಸೈನಿಕರು ಮೃತಪಟ್ಟು, 15 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಉಕ್ರೇನ್ ಗಡಿಯಲ್ಲಿರುವ ನೈಋತ್ಯ ರಷ್ಯಾದ ಬೆಲ್ಗೊರೊಡ್ ಪ್ರದೇಶದ ಮಿಲಿಟರಿ ಫೈರಿಂಗ್ ರೇಂಜ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಯುದ್ಧಕ್ಕಾಗಿ ರಷ್ಯಾ ಯುವಕರನ್ನು ಸೇನೆಗೆ ಎಗ್ಗಿಲ್ಲದೇ ನೇಮಕಾತಿ ಮಾಡಿಕೊಳ್ಳುತ್ತಿದೆ. ಬಳಿಕ ಅವರಿಗೆ ತರಬೇತಿ ಕೂಡ ನೀಡುತ್ತಿದೆ. ಉಕ್ರೇನ್ ಗಡಿಯಲ್ಲಿರುವ ಬೆಲ್ಗೊರೊಡ್ ಪ್ರದೇಶದ ಮಿಲಿಟರಿ ಫೈರಿಂಗ್ ರೇಂಜ್‌ನಲ್ಲಿ ಶನಿವಾರ ಯುವ ಯೋಧರಿಗೆ ತರಬೇತಿ ನೀಡುತ್ತಿರುವಾಗ ಈ ಭಯೋತ್ಪಾದಕ ದಾಳಿ ನಡೆದಿದೆ.
ಸೋನಿಯತ್ ರಾಜ್ಯಗಳಿಂದ ಬಂದ ಇಬ್ಬರು ಬಂದೂಕುಧಾರಿ ಯುವಕರು ಸೇನಾ ಪಡೆಗಳ ಮೇಲೆಯೇ ಫೈರಿಂಗ್ ಮಾಡಿದ್ದಾರೆ. 11 ಸೈನಿಕರು ಮೃತಪಟ್ಟರೆ, 15 ಮಂದಿ ಗಾಯಗೊಂಡಿದ್ದಾರೆ. ಅವರ ಮೇಲೆ ಪ್ರತಿದಾಳಿ ಮಾಡಿ ಕೊಲ್ಲಲಾಗಿದೆ. ಇದೊಂದು ಭಯೋತ್ಪಾದಕ ದಾಳಿ ಎಂದು ರಷ್ಯಾ ಸೇನಾಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್ ಮೇಲೆ ಸಮರಕ್ಕಾಗಿ ರಷ್ಯಾದ ಪಡೆಗಳನ್ನು ಹೆಚ್ಚಿಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದು, ಅದರ ಭಾಗವಾಗಿ ಸೇನೆಗೆ 3 ಲಕ್ಷ ಯೋಧರ ನೇಮಕ ಮಾಡಲಾಗುತ್ತಿದೆ. ಈಗಾಗಲೇ 2.20 ಸಾವಿರ ಕ್ಕೂ ಹೆಚ್ಚು ಮೀಸಲು ಸೈನಿಕರನ್ನು ನೇಮಿಸಲಾಗಿದೆ ಎಂದು ರಷ್ಯಾ ಸೇನೆ ತಿಳಿಸಿದೆ.
ಓದಿ: ಬ್ರೇಕ್ ಫೇಲ್ ಆಗಿ ಉರುಳಿ ಬಿದ್ದ ಬಸ್... 20 ಮಂದಿ ದಾರುಣ ಸಾವು