ETV Bharat / international

ಬಾಂಗ್ಲಾದಲ್ಲಿ 1000ರದ ಗಡಿ ದಾಟಿದ ಡೆಂಘೀ ಸಾವಿನ ಸಂಖ್ಯೆ...2 ಲಕ್ಷ ಜನರಿಗೆ ಅಂಟಿದ ಸೋಂಕು!

Bangladesh dengue outbreak:ಬಾಂಗ್ಲಾದಲ್ಲಿ 2023ರಲ್ಲಿ ಡೆಂಘೀ ಜ್ವರದಿಂದ ಸಾವನ್ನಪ್ಪಿದವರ ಸಂಖ್ಯೆ 1000 ರದ ಗಡಿ ದಾಟಿದೆ.

ಡೆಂಗ್ಯೂ
ಡೆಂಗ್ಯೂ
author img

By ETV Bharat Karnataka Team

Published : Oct 3, 2023, 10:12 AM IST

ಢಾಕಾ(ಬಾಂಗ್ಲಾದೇಶ): ನೆರೆಯ ಬಾಂಗ್ಲಾ ದೇಶದಲ್ಲಿ ಡೆಂಘೀ ವ್ಯಾಪಕವಾಗಿ ಹಬ್ಬಿದ್ದು ಕೇವಲ ಈ ಒಂದೇ ವರುಷದಲ್ಲಿ ಡೆಂಘೀ ಮಾರಿಗೆ 1,000 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಬಾಂಗ್ಲಾದ ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. 2022 ರ ಸಾವಿನ ವರದಿಗೆ ಹೋಲಿಸಿದರೆ 2023 ಸಾವಿನ ಪ್ರಮಾಣ ಅಧಿಕವಾಗಿದೆ.

ಈ ವರುಷ ಪೂರ್ಣಗೊಳ್ಳಲು ಇನ್ನೂ 3 ತಿಂಗಳೂ ಬಾಕಿ ಇದೆ. ಆದರೆ, 9 ತಿಂಗಳಿನಲ್ಲಿಯೇ ಡೆಂಘೀ ಜ್ವರದಿಂದ ಸಾವನ್ನಪ್ಪಿರುವವರ ಸಂಖ್ಯೆ 1000ದ ಗಡಿ ದಾಟಿದೆ. ನಿಖರ ಮಾಹಿತಿ ಪ್ರಕಾರ ಇದುವರೆಗೆ 1,017 ಜನರು ಸಾವನ್ನಪ್ಪಿದ್ದು, ಸುಮಾರು 2,09,000 ಜನರು ಸೋಂಕಿತರಾಗಿದ್ದಾರೆ. 2000ದಲ್ಲಿ ಸಾಂಕ್ರಾಮಿಕ ರೋಗವನ್ನು ಬಿಟ್ಟರೆ ಈ ಬಾರಿಯೇ ಸೊಳ್ಳೆಯಿಂದ ಹರಡಿದ ಖಾಯಿಲೆಯಿಂದ ಬಾಂಗ್ಲಾ ತತ್ತರಿಸಿದೆ.

ಸಾವನ್ನಪ್ಪಿದ ಜನರಲ್ಲಿ 15 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 112 ಮಕ್ಕಳು ಹಾಗೂ ಶಿಶುಗಳೇ ಆಗಿವೆ. ಇನ್ನು ದಿನಕಳೆದಂತೆ ಜನನಿಬಿಡ ದಕ್ಷಿಣ ಏಷ್ಯಾದ ದೇಶದಲ್ಲಿ ರೋಗವು ವೇಗವಾಗಿ ಹರಡುತ್ತಿರುವುದರಿಂದ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ಹೋಗಿದ್ದು, ಹೊಸ ರೋಗಿಗಳನ್ನು ದಾಖಲಿಸಿಕೊಳ್ಳಲು ಹೆಣಗಾಡುತ್ತಿವೆ. ಅತೀ ಜ್ವರ, ತಲೆನೋವು, ವಾಕರಿಕೆ, ವಾಂತಿ, ಸ್ನಾಯು ನೋವು ಅಲ್ಲದೇ ಗಂಭೀರ ಪ್ರಕರಣಗಳಲ್ಲಿ ರಕ್ತಸ್ರಾವವು ಸಾವಿಗೆ ಕಾರಣವಾಗುತ್ತದೆ.

ಹವಮಾನ ಬದಲಾವಣೆಯಿಂದ ಸೊಳ್ಳೆಗಳಿಂದ ಹರಡುವ ಚಿಕೂನ್‌ಗುನ್ಯಾ, ಹಳದಿ ಜ್ವರ ಮತ್ತು ಜಿಕಾದಿಂದ ಡೆಂಘೀ ಮತ್ತು ಇತರ ರೋಗಗಳು ವೇಗವಾಗಿ ಮತ್ತು ಮತ್ತಷ್ಟು ಹರಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ. ಡೆಂಘೀಗೆ ನಿರ್ದಿಷ್ಟವಾಗಿ ಚಿಕಿತ್ಸೆ ನೀಡುವ ಯಾವುದೇ ಲಸಿಕೆ ಅಥವಾ ಔಷಧ ಇಲ್ಲ, ಇದು ಜೂನ್ - ಸೆಪ್ಟೆಂಬರ್ ಮಾನ್ಸೂನ್ ಅವಧಿಯಲ್ಲಿ ದಕ್ಷಿಣ ಏಷ್ಯಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಈಡಿಸ್ ಈಜಿಪ್ಟಿ ಸೊಳ್ಳೆಯು ನಿಂತ ನೀರಿನಲ್ಲಿ ಬೆಳೆಯುತ್ತದೆ.

ಬಾಂಗ್ಲಾದಲ್ಲಿ 1960 ರ ದಶಕದಿಂದ ಡೆಂಘೀ ಪ್ರಕರಣಗಳು ದಾಖಲಾಗುತ್ತಾ ಬಂದಿವೆ. ಆದರೆ, 2000 ರಲ್ಲಿ ಡೆಂಘೀ ಹೆಮರಾಜಿಕ್ ಜ್ವರ ಸಾಂಕ್ರಾಮಿಕವಾಗಿ ಹಬ್ಬಿತ್ತು. ಬಾಂಗ್ಲಾ ದೇಶವನ್ನು ಸೊಳ್ಳೆ ಹರಡುವ ರೋಗಗಳಿಗೆ ಒಳಗಾಗುವ ಹೆಚ್ಚಿನ ಅಪಾಯದ ರಾಷ್ಟ್ರ ಎಂದೂ ಪರಿಗಣಿಸಲಾಗಿದೆ. ಸಾಮಾನ್ಯ ಜ್ವರದಂತೆ ಕಾಣಿಸಿಕೊಳ್ಳುವ ಡೆಂಘೀ ಅತಿಯಾದರೆ ಪ್ರಾಣವನ್ನೇ ತೆಗೆಯುತ್ತದೆ.

ವರದಿಗಳ ಪ್ರಕಾರ, ವಿಶ್ವದ ಶೇ 40ರಷ್ಟು ಜನರು ಡೆಂಘೀ ಹರಡುವ ಅಪಾಯ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ವರ್ಷ ಸುಮಾರು 400 ಮಿಲಿಯನ್​ ಜನರು ಇದೇ ಜ್ವರದಿಂದ ಬಳಲುತ್ತಾರೆ. 400 ಮಿಲಿಯನ್​ ಜನರಲ್ಲಿ 100 ಮಿಲಿಯನ್​ ಜನರ ಆರೋಗ್ಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. 22 ಸಾವಿರ ಜನ ಪ್ರತಿವರ್ಷ ಡೆಂಘಿ ಜ್ವರದಿಂದ ಸಾವನ್ನಪ್ಪುತ್ತಿದ್ದಾರೆ. (ಎಎನ್​ಐ)

ಇದನ್ನೂ ಓದಿ: Dengue: ಬಾಂಗ್ಲಾದೇಶದಲ್ಲಿ ಡೆಂಗ್ಯೂ ಹೆಚ್ಚಳ; 300ಕ್ಕೂ ಹೆಚ್ಚು ಜನರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.