ETV Bharat / international

ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್ ದಾಳಿಕೋರರಿಂದ ರಾಕೆಟ್‌ ದಾಳಿ: ನಾಲ್ಕು ಮಂದಿ ಸಾವು - ಗಾಜಾದಿಂದ ಇಸ್ರೇಲ್ ಮೇಲೆ ರಾಕೆಟ್‌ ದಾಳಿ

ಪ್ಯಾಲೆಸ್ತೀನ್ ದಾಳಿಕೋರರು ಗಾಜಾದಿಂದ ಇಸ್ರೇಲ್ ಕಡೆಗೆ ಶನಿವಾರ ಬೆಳಗ್ಗೆ ರಾಕೆಟ್‌ ದಾಳಿ ನಡೆಸಿದ ನಂತರ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಹಲವು ಮಂದಿ ಗಾಯಗೊಂಡಿದ್ದಾರೆ.

rocket
ರಾಕೆಟ್‌ ದಾಳಿ
author img

By ETV Bharat Karnataka Team

Published : Oct 7, 2023, 2:01 PM IST

ಟೆಲ್ ಅವಿವ್ (ಇಸ್ರೇಲ್) : ಪ್ಯಾಲೇಸ್ಟಿನಿಯನ್ ಭಯೋತ್ಪಾದಕರು ಶನಿವಾರ ಮುಂಜಾನೆ ಇಸ್ರೇಲ್​ ಪ್ರದೇಶಗಳ ಮೇಲೆ ರಾಕೆಟ್‌ ದಾಳಿ ನಡೆಸಿದ್ದು, ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ದಾಳಿಯ ಬಳಿಕ ಇಸ್ರೇಲ್ ಸರ್ಕಾರವು ಯುದ್ಧ ಘೋಷಿಸಿದ್ದು, ನಾಗರಿಕರು ಮನೆಯೊಳಗೆ ಇರುವಂತೆ ಸಲಹೆ ನೀಡಿದೆ.

ಮಾಹಿತಿ ಪ್ರಕಾರ, ಗಾಜಾ ಪಟ್ಟಿಯಿಂದ ಇಸ್ರೇಲ್‌ನ ಅನೇಕ ವಸತಿ ಪ್ರದೇಶಗಳ ಮೇಲೆ ರಾಕೆಟ್‌ಗಳನ್ನು ಹಾರಿಸಲಾಗಿದೆ. ರಾಜಧಾನಿ ಟೆಲ್ ಅವಿವ್‌ ಸೇರಿದಂತೆ ಅನೇಕ ಕಡೆ ಸೈರನ್‌ ಸಹಾಯದಿಂದ ವೈಮಾನಿಕ ದಾಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನ್ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್‌ಗೆ ಭಾರಿ ಒಳನುಸುಳುವಿಕೆ ನಡೆಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಇಂದು ಮುಂಜಾನೆ ನಡೆದ ಈ ಬಾಂಬ್ ದಾಳಿಯು ಸುಮಾರು 30 ನಿಮಿಷಗಳ ಕಾಲ ನಡೆಯಿತು. ದಕ್ಷಿಣ ಇಸ್ರೇಲ್‌ನ ಕಟ್ಟಡವೊಂದರ ಮೇಲೆ ರಾಕೆಟ್ ಬಿದ್ದ ಪರಿಣಾಮ 70 ವರ್ಷದ ಮಹಿಳೆ ಸೇರಿ ನಾಲ್ಬರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ತಿಳಿಸಿದೆ.

ಗಾಜಾ ಪಟ್ಟಿಯಿಂದ ಸುಮಾರು 70 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಟೆಲ್ ಅವಿವ್‌ನಲ್ಲಿ ರೆಡ್ ಅಲರ್ಟ್ ಎಚ್ಚರಿಕೆಯನ್ನು ನೀಡಲಾಗಿದೆ. ಇನ್ನೊಂದೆಡೆ, ವೈಮಾನಿಕ ದಾಳಿಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಇಸ್ರೇಲ್​ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಅವೀವ್‌ನಲ್ಲಿರುವ ಮಿಲಿಟರಿ ಪ್ರಧಾನ ಕಚೇರಿಗೆ ತೆರಳಿದ್ದು, ಉನ್ನತ ಭದ್ರತಾ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ಇದನ್ನೂ ಓದಿ : ಗಾಜಾ ಮೇಲೆ ಇಸ್ರೇಲ್ ಬಾಂಬ್ ದಾಳಿ : ಇಸ್ಲಾಮಿಕ್​ ಜಿಹಾದ್​ ಚಳುವಳಿಯ ಮೂವರ ಹತ್ಯೆ

ಕಳೆದ ಮೇ ತಿಂಗಳಲ್ಲಿ ಸಹ ಇಸ್ರೇಲ್​ ಮತ್ತು ಪ್ಯಾಲೆಸ್ಟೀನ್​​ ನಡುವೆ ಯುದ್ಧದ ಕಾರ್ಮೋಡ ಆವರಿಸಿತ್ತು. ಇಸ್ರೇಲ್​ ಸೇನೆ ಗಾಜಾದ ಮೇಲೆ ಬಾಂಬ್​ ದಾಳಿ ಮಾಡಿತ್ತು. ಪರಿಣಾಮ ಪ್ಯಾಲೆಸ್ಟೀನ್​ ಇಸ್ಲಾಮಿಕ್​ ಜಿಹಾದ್​ ಚಳವಳಿಯ ಮೂವರು ಹತ್ಯೆಯಾಗಿದ್ದರು. ಉತ್ತರ ಗಾಜಾದಲ್ಲಿ ಇಸ್ಲಾಮಿಕ್ ಜಿಹಾದ್‌ ಕಮಾಂಡರ್ ಖಲೀಲ್ ಬಹಿತಿನಿ, ಗುಂಪಿನ ಮಿಲಿಟರಿ ಕೌನ್ಸಿಲ್‌ನ ಉನ್ನತ ಅಧಿಕಾರಿ ಜಾಹೆದ್ ಅಹ್ನಮ್ ಮತ್ತು ತಾರೆಕ್ ಅಜಾಲ್ದಿನ್ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲಿ ಸೇನೆ ಪ್ರಕಟಣೆಯಲ್ಲಿ ಮಾಹಿತಿ ನೀಡಿತ್ತು. ಅಷ್ಟೇ ಅಲ್ಲದೆ, ದಾಳಿಯಲ್ಲಿ 15 ನಾಗರಿಕರು ಸೇರಿದಂತೆ 28 ಪ್ಯಾಲೆಸ್ತೀನಿಯರು ಅಸುನೀಗಿದ್ದರು. ಹಾಗೆಯೇ, 93 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದಲ್ಲಿರುವ ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತ್ತು.

ಇದನ್ನೂ ಓದಿ : ಗಾಜಾ ಮೇಲೆ ಮುಂದುವರೆದ ಇಸ್ರೇಲ್​ ವೈಮಾನಿಕ ದಾಳಿ : 28 ಮಂದಿ ಸಾವು, ಹಲವರಿಗೆ ಗಾಯ

ಇನ್ನು 2007 ರಲ್ಲಿ ಪ್ಯಾಲೆಸ್ತೀನಿನಲ್ಲಿ ಹಮಾಸ್‌ ಅಧಿಕಾರಕ್ಕೆ ಬಂದ ಬಳಿಕ ಗಾಜಾ ಪಟ್ಟಿಯ ಮೇಲೆ ಹಲವು ದಿಗ್ಬಂಧನಗಳನ್ನು ವಿಧಿಸಿದೆ. ಪ್ಯಾಲೇಸ್ಟಿನಿ ಉಗ್ರರು ಮತ್ತು ಇಸ್ರೇಲ್ ಹಲವಾರು ವಿನಾಶಕಾರಿ ಯುದ್ಧಗಳನ್ನು ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.