ETV Bharat / international

ಉಕ್ರೇನ್​ನ ರೈಲ್ವೆ ನಿಲ್ದಾಣದ ಮೇಲೆ ರಷ್ಯಾ ರಾಕೆಟ್ ದಾಳಿ: 30ಕ್ಕೂ ಹೆಚ್ಚು ಜನರ ಸಾವು

author img

By

Published : Apr 8, 2022, 5:50 PM IST

ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸುತ್ತಿದ್ದ ರೈಲು ನಿಲ್ದಾಣದ ಮೇಲೆ ರಷ್ಯಾ ಸೇನೆಯು ರಾಕೆಟ್​ ದಾಳಿ ಮಾಡಿದೆ.

Ukraine-Russian war
Ukraine-Russian war

ಕೀವ್​(ಉಕ್ರೇನ್​): ರಷ್ಯಾ ಸೇನೆಯು ಉಕ್ರೇನ್​ನಲ್ಲಿ ಮತ್ತಷ್ಟು ಭೀಕರ ದಾಳಿ ನಡೆಸುತ್ತಿದೆ. ನಾಗರಿಕರ ಸ್ಥಳಾಂತರಕ್ಕೆ ಬಳಸುತ್ತಿದ್ದ ರೈಲ್ವೆ ನಿಲ್ದಾಣದ ಮೇಲೂ ಇಂದು ಭೀಕರ ರಾಕೆಟ್​ ದಾಳಿ ಮಾಡಿದೆ. ಪರಿಣಾಮ, 30ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಕ್ರಾಮಾಟೋರ್ಸ್ಕ್ ರೈಲ್ವೆ ನಿಲ್ದಾಣವನ್ನು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಬಳಸಲಾಗುತ್ತಿತ್ತು. ಹೀಗಾಗಿ ಈ ನಿಲ್ದಾಣದಲ್ಲಿ ನೂರಾರು ಜನರು ಸೇರಿದ್ದರು. ಈ ವೇಳೆ ರಷ್ಯಾ ಸೇನೆಯು ರಾಕೆಟ್​ ದಾಳಿ ಮಾಡಿದೆ ಎಂದು ಉಕ್ರೇನ್​ನ ಡೊನೆಟ್ಸ್ಕ್ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಪಾವ್ಲೋ ಕೈರಿಲೆಂಕೊ ತಿಳಿಸಿದ್ದಾರೆ. ಅಲ್ಲದೇ, ರಷ್ಯಾ ಸೇನೆಯು ಜನರನ್ನು ಆತಂಕ, ಭಯಭೀತರನ್ನಾಗಿಸುತ್ತಿದೆ. ಹಲವಾರು ನಾಗರಿಕರನ್ನು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಒತ್ತೆ ಇಟ್ಟುಕೊಳ್ಳಲು ಬಯಸುತ್ತಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಅಮೆರಿಕ ಗುಪ್ತಚರ ಸಂಸ್ಥೆ ಪ್ರವೇಶಿಸಲು ಯತ್ನಿಸಿದ ಪಾಕ್​ ಐಎಸ್​ಐ ಗೂಢಾಚಾರಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.