ಕುವೈತ್ ನಗರ: ಕುವೈತ್ ಸಂಸತ್ ಚುನಾವಣೆಗೆ ಮತದಾನ ನಡೆಯುತ್ತಿದ್ದು, 50 ಸ್ಥಾನಗಳಿಗೆ 326 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
10 ಕ್ಷೇತ್ರಗಳಿಂದ 50 ಚುನಾಯಿತ ಸದಸ್ಯರನ್ನು ವರ್ಗಾವಣೆ ಮಾಡಲಾಗದ ಮತಗಳಿಂದ ( non-transferable vote) ಆಯ್ಕೆ ಮಾಡಲಾಗುತ್ತದೆ.
ಶಿಕ್ಷಣ ಸಚಿವಾಲಯವು ದೇಶದ 102 ಶಾಲೆಗಳಲ್ಲಿ ಮತಗಟ್ಟೆಗಳನ್ನು ನಿರ್ಮಿಸಿದೆ. ಚುನಾವಣಾ ಮೇಲ್ವಿಚಾರಣೆಗಾಗಿ ಸರ್ಕಾರ ಐದು ತಂಡಗಳನ್ನು ರಚಿಸಿದೆ. ಕೋವಿಡ್ ನಿಯಮ ಪಾಲಿಸಿ ವೋಟಿಂಗ್ ನಡೆಸಲು ಕ್ರಮ ಕೈಗೊಂಡಿದೆ. ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಮತಗಟ್ಟೆಯೊಳಗೆ ಬಿಡಲಾಗುತ್ತಿದೆ.
ಅಲ್ಲದೆ ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆ ಮಾಡಲಾಗಿದೆ. ಸೋಂಕು ದೃಢ ಪಟ್ಟಿರುವವರ ಹಕ್ಕು ಚಲಾಯಿಸಬೇಕಾದರೆ, ಆ್ಯಪ್ ಮೂಲಕ ಪರವಾನಗಿ ಪಡೆದಿರಬೇಕೆಂದು ಆರೋಗ್ಯ ಸಚಿವಾಲಯದ ವಕ್ತಾರ ಅಬ್ದುಲ್ಲಾ ಅಲ್- ಸನಾದ್ ಹೇಳಿದ್ದರು.