ETV Bharat / international

ಹಮಾಸ್​ ವಿರುದ್ಧದ ಇಸ್ರೇಲ್​ ದಾಳಿ ಸೂಕ್ತವೆನಿಸಿದರೂ, ಸಾವುನೋವು ಕಳವಳಕಾರಿ: ಬೈಡನ್ - Israel

ಗಾಜಾ ನಗರದಲ್ಲಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಮಾಧ್ಯಮಗಳ ಕಚೇರಿಗಳಿದ್ದ ಬಹುಮಹಡಿ ಕಟ್ಟಡವನ್ನು ಕ್ಷಿಪಣಿ ಮೂಲಕ ಧ್ವಂಸ ಮಾಡಿದ ಇಸ್ರೇಲ್​ ನಡೆಗೆ ಬೆಂಬಲ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅಲ್ಲಿ ಸಂಭವಿಸಿರುವ ಸಾವು-ನೋವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

Israeli strike on Gaza media building
ಇಸ್ರೇಲ್​ ದಾಳಿ
author img

By

Published : May 16, 2021, 10:42 AM IST

ವಾಷಿಂಗ್ಟನ್: ಗಾಜಾದಲ್ಲಿರುವ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಗಳನ್ನು ಹೊಂದಿದ್ದ ಬಹುಮಹಡಿ ಕಟ್ಟಡ ಹಾಗೂ ವಸತಿ ಸಮುಚ್ಚಯಗಳನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಈ ಘಟನೆಗೆ ವಿಶ್ವಸಂಸ್ಥೆ​ ಪ್ರಧಾನ ಕಾರ್ಯದರ್ಶಿ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ​ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿ, ಹಮಾಸ್​ ಉಗ್ರರ ವಿರುದ್ಧದ ಇಸ್ರೇಲ್​ ದಾಳಿ ಸೂಕ್ತವೆನಿಸಿದರೂ ಸಾವುನೋವು ಕಳವಳಕಾರಿ ಬೆಳವಣಿಗೆ​ ಎಂದು ಹೇಳಿದ್ದಾರೆ.

ಹಮಾಸ್ ಉಗ್ರರ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನಡೆಸಿದ ದಾಳಿ ಸೂಕ್ತವಾಗಿರಬಹುದು. ಆದರೆ ಘಟನೆಯಲ್ಲಿ ಸಂಭವಿಸಿದ ಸಾವು ನೋವು ಮತ್ತು ಪತ್ರಕರ್ತರ ರಕ್ಷಣೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತೇನೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ದೂರವಾಣಿ ಮಾತುಕತೆ ವೇಳೆ ಬೈಡನ್‌ ತಿಳಿಸಿದ್ದಾರೆ.

ಉಭಯ ನಾಯಕರು ವಿವಾದದ ಕೇಂದ್ರಬಿಂದು ಜೆರುಸಲೆಂ ನಗರದ ಬಗ್ಗೆ ಮಾತನಾಡಿದ್ದಾರೆ. ಜೆರುಸಲೆಂ ಎಲ್ಲಾ ಧರ್ಮ ಮತ್ತು ಹಿನ್ನೆಲೆಯ ಜನರಿಗೆ ಶಾಂತಿಯುತ ಸಹಬಾಳ್ವೆಯ ಸ್ಥಳವಾಗಿರಬೇಕು ಎಂದು ಪ್ರತಿಪಾದಿಸಿದ್ದಾರೆ. ಪ್ಯಾಲೆಸ್ತೀನಿಯನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಬೈಡನ್ ಈ ಮೊದಲು ಹಿಂಸಾಚಾರದ ಬಗ್ಗೆ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಗಾಜಾ ಮೇಲೆ ಇಸ್ರೇಲ್​ ಡೆಡ್ಲಿ ಅಟ್ಯಾಕ್​: 13 ಮಹಡಿ ದೂರದರ್ಶನ ಕಟ್ಟಡ ನೆಲಸಮ

ಇನ್ನು ಇಸ್ರೇಲ್​ ನಡೆಸಿದ ವೈಮಾನಿಕ ದಾಳಿಗೆ ವಿಶ್ವಸಂಸ್ಥೆ​ ಪ್ರಧಾನ ಕಾರ್ಯದರ್ಶಿ ಕಳವಳ ವ್ಯಕ್ತಪಡಿಸಿದ್ದು, ನಾಗರಿಕ ಮತ್ತು ಮಾಧ್ಯಮದ ಮೇಲೆ ನಡೆಸಿದ ವಿವೇಚನೆಯಿಲ್ಲದ ದಾಳಿ ಇದಾಗಿದೆ. ಈ ದಾಳಿ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಎಚ್ಚರಿಸಿದ್ದಾರೆ.

  • .@antonioguterres calls for an immediate end to the fighting in Gaza and Israel, stressing that only a sustainable political solution will lead to lasting peace and reiterating his commitment to supporting Palestinians and Israelis to resolve the conflict.https://t.co/qT0ieDr0aI

    — United Nations (@UN) May 14, 2021 " class="align-text-top noRightClick twitterSection" data=" ">

ಇಸ್ರೇಲ್‌ನ ಉತ್ತರ ಮತ್ತು ಪೂರ್ವ ಗಡಿಗಳ ಸಮೀಪವಿರುವ ಗಾಜಾ ನಗರ ಕಳೆದೊಂದು ವಾರದಿಂದ ಸಂಪೂರ್ಣ ದಾಳಿಗೆ ತುತ್ತಾಗಿದೆ. ಇಸ್ರೇಲ್​​ನಿಂದ ರಾಕೆಟ್​​​ಗಳು ಬಂದುರುಳುತ್ತಿದ್ದು, ಇದಕ್ಕೆ ಪ್ರತಿಯಾಗಿ ಗಾಜಾದಿಂದ ಹಮಾಸ್‌ ಉಗ್ರರು ನೂರಾರು ರಾಕೆಟ್​​ಗಳನ್ನು ಇಸ್ರೇಲ್ ಭೂಪ್ರದೇಶದತ್ತ ಉಡಾಯಿಸುತ್ತಿದ್ದಾರೆ. ಪ್ರಸ್ತುತ ವಿದ್ಯಮಾನವನ್ನು 2008ರಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ ನಡುವಿನ 4ನೇ ಯುದ್ಧ ಎಂದೇ ಕರೆಯಲಾಗುತ್ತಿದೆ.

ಈ ಹಿಂಸಾಚಾರದಲ್ಲಿ ಈಗಾಗಲೇ 31 ಮಕ್ಕಳು ಸೇರಿದಂತೆ ಪ್ಯಾಲೆಸ್ತೀನ್​ನ 122 ಮಂದಿ ಬಲಿಯಾಗಿದ್ದಾರೆ. 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳುತ್ತಿದೆ. ಇಸ್ರೇಲ್‌ನ 7 ಮಂದಿ ಮೃತಪಟ್ಟಿರುವುದು ವರದಿಯಾಗಿದೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಮಾಧ್ಯಮ ಕಚೇರಿ, ವಸತಿ ಕಟ್ಟಡದ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.