ಟೆಹ್ರಾನ್(ಇರಾನ್): ಹದಿನಾರು ವರ್ಷದ ಬಾಲಕ ಎಸಗಿದ ತಪ್ಪಿಗೆ ಆತನಿಗೆ ಘೋರ ಮರಣದಂಡನೆ ವಿಧಿಸಿದ ಇರಾನ್ ದೇಶದ ನಡೆಯನ್ನು ವಿಶ್ವಸಂಸ್ಥೆ ಖಂಡಿಸಿದೆ.
2007 ರಲ್ಲಿ ವ್ಯಕ್ತಿಯೊಬ್ಬನನ್ನು ಮಾರಣಾಂತಿಕವಾಗಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನನ್ನು ಬಂಧಿಸಲಾಗಿತ್ತು. ಬಳಿಕ ನಡೆದ ವಿದ್ಯಮಾನದಲ್ಲಿ ಬಲವಂತದ ತಪ್ಪೊಪ್ಪಿಗೆಯ ಮೇಲೆ ಆತನಿಗೆ ಘೋರ ಶಿಕ್ಷೆ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ರೀತಿ ಶಿಕ್ಷೆ ವಿಧಿಸುವುದು "ಮಕ್ಕಳ ಹಕ್ಕುಗಳ ಮೇಲೆ ಅಸಹ್ಯಕರ ಆಕ್ರಮಣ" ಎಂದು ಜಾಗತಿಕ ಸಂಸ್ಥೆ ಕಿಡಿ ಕಾರಿದೆ.