ಬೀಜಿಂಗ್: ಚೀನಾದಲ್ಲಿ ಕರೋನಾ ವೈರಸ್‌ನಿಂದ ಈವರೆಗೆ ಸುಮಾರು 1,800 ಮಂದಿ ಮೃತಪಟ್ಟಿದ್ದು, ಹುಬೈ ಪ್ರಾಂತ್ಯವೊಂದರಲ್ಲೇ 93 ಜನ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಹುಬೈ ಪ್ರಾಂತ್ಯದ ಆರೋಗ್ಯ ಆಯೋಗವು 1,807 ಹೊಸ ಕರೋನಾ (ಕೋವಿಡ್-19) ಪ್ರಕರಣಗಳು ದಾಖಲೆಯಾಗಿರುವುದಾಗಿ ವರದಿ ಮಾಡಿದೆ. ಇಲ್ಲಿಯವರೆಗೂ ದಾಖಲಾದ ಕರೊನಾ ವೈರಸ್ ಸೋಂಕಿತ ಸಂಖ್ಯೆಗಳನ್ನು ಗಮನಿಸಿದರೆ, ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.