ದುಬೈ: ಭಾರತೀಯ ಮಹಿಳಾ ಕ್ರಿಕೆಟ್ನ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸ್ಪಿನ್ನರ್ ಪೂನಮ್ ಯಾದವ್ ಹಾಗೂ ರಾಧಾ ಯಾದವ್ ಟಿ20 ರ್ಯಾಂಕಿಂಗ್ನಲ್ಲಿ ಆಯಾ ಸ್ಥಾನಗಳಲ್ಲೇ ಮುಂದುವರೆದಿದ್ದಾರೆ.
ಸ್ಮೃತಿ ಮಂಧಾನ 698 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದು, ಜಿಮಿಯಾ ರೋಡ್ರಿಗಸ್(672) ಹಾಗೂ ಹರ್ಮನ್ಪ್ರೀತ್ ಕೌರ್(647) ಕ್ರಮವಾಗಿ ಆರು ಮತ್ತು ಒಂಭತ್ತನೇ ಸ್ಥಾನದಲ್ಲಿದ್ದಾರೆ.
765 ಅಂಕಗಳೊಂದಿಗೆ ನ್ಯೂಜಿಲ್ಯಾಂಡ್ನ ಸುಸೀ ಬೇಟ್ಸ್ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಪೂನಮ್ ಯಾದವ್(710) ಹಾಗೂ ರಾಧಾ ಯಾದವ್(681) ಕ್ರಮವಾಗಿ ಎರಡು ಮತ್ತು ಐದನೇ ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾದ ಮೇಗನ್ ಸ್ಕಟ್ 796 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ವಿಂಡೀಸ್ನ ದೀಂದ್ರ ಡಾಟಿನ್ ಆಲ್ರೌಂಡರ್ ವಿಭಾಗದಲ್ಲಿ 424 ಅಂಕಗಳೊಂದಿಗೆ ಮೊದಲ ಸ್ಥಾನ ಹೊಂದಿದ್ದಾರೆ.
ತಂಡಗಳ ರ್ಯಾಂಕಿಂಗ್ನಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಇಂಗ್ಲೆಂಡ್ ಇದೆ. ಭಾರತ ಮೂರನೇ ಸ್ಥಾನದಲ್ಲೇ ಮುಂದುವರೆದಿದೆ.