ETV Bharat / international

ಟರ್ಕಿ- ಸಿರಿಯಾ ಯುದ್ಧದ ಜ್ವಾಲೆಗೆ ಬಿಸಿ ತುಪ್ಪ ಸುರಿದ ಅಮೆರಿಕ.. ಇನ್ನೇನು ಕಾದಿದೆಯೋ? - ಎನ್​ಡಿಎಫ್​

ಸಿರಿಯಾ ನಾಗರಿಕರ ರಕ್ಷಣೆಯ ಜವಾಬ್ದಾರಿಯಿಂದ ನುಣಿಚಿಕೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಅಮೆರಿಕ ಪಡೆಗಳನ್ನು ಸಿರಿಯಾದಿಂದ ಹಿಂದಕ್ಕೆ ಕರೆಯಿಸಿಕೊಳ್ಳುವ ನಿರ್ಧಾರೆ ತೆಗೆದುಕೊಂಡಿದ್ದಾರೆ. ಜೊತೆಗೆ ಕುರ್ದಿಗಳನ್ನು ಅಸಹಾಯಕ ಪರಿಸ್ಥಿತಿಗೆ ದೂಡಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿರುವ ಟರ್ಕಿ ಕುರ್ದಿಗಳ ಮೇಲೆ ಭೀಕರ ದಾಳಿ ನಡೆಸಿ ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸಿ, ಹೊಸ ರಾಜಕೀಯ ಸಮೀಕರಣಕ್ಕೆ ಕಾರಣವಾಗಿದೆ. ಅಮೆರಿಕದ ಬೆಂಬಲದೊಂದಿಗೆ ಇತ್ತೀಚಿನವರೆಗೂ ಹೋರಾಡಿದ ಕುರ್ದಿಗಳು, ಈಗ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕರುಣಾಜನಕವಾದ ನಿರ್ಜನ ಪರಿಸ್ಥಿತಿಯಲ್ಲಿ ಕಂಗಾಲಾಗಿ ನಿಂತಿದ್ದಾರೆ. ತಮ್ಮ ಅಸ್ತಿತ್ವವನ್ನು ರಕ್ಷಿಸಲು ಮತ್ತು ಟರ್ಕಿ ದಾಳಿ ಹಿಮ್ಮೆಟ್ಟಿಸಲು ಕುರ್ದಿಗಳು ಸಿರಿಯಾದ ಆಡಳಿತಗಾರ ಅಸಾದ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಆಘಾತಕಾರಿ.

ಸಾಂದರ್ಭಿಕ ಚಿತ್ರ
author img

By

Published : Oct 22, 2019, 9:50 PM IST

ಯಾರೋ ಹೇಳಿದ್ದು, 'ಶಾಂತಿ ಎನ್ನುವುದು ಎರಡು ರಾಷ್ಟ್ರಗಳ ನಡುವಿನ ಮಧ್ಯಂತರ ವಿರಾಮ. ದುರದೃಷ್ಟವಶಾತ್, ಸಿರಿಯಾಗೆ ಈ ಅಲ್ಪಾವಧಿಯ ಶಾಂತಿ ಸಹ ಕಳೆದ ಎಂಟು ವರ್ಷಗಳಿಂದ ಕೈತಪ್ಪಿ ಹೋಗುತ್ತಿದೆ. ಇಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆ, ರಕ್ತದ ಓಕುಳಿ ಇತ್ಯಾದಿ... ದೊಡ್ಡಣ್ಣ ಅಮೆರಿಕ ಇಲ್ಲಿನ ಮಾನವ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ವಹಿಸಿಕೊಂಡ ನಂತರವೂ ಪರಿಸ್ಥಿತಿ ಯಥಾವತ್ತಾಗಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ (ಪ್ಯಾನ್ ಟು ಫೈರ್: ಧಗಿಸುವ ಬೆಂಕಿಗೆ ಪ್ಯಾನ್ ಹಿಡಿದಂತೆ​) ಆಗಿದೆ. ಅಮೆರಿಕ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿಲ್ಲ ಎಂಬುದರ ಸಂಕೇತವಾಗಿದೆ.

ಜವಾಬ್ದಾರಿಯಿಂದ ನುಣಿಚಿಕೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಅಮೆರಿಕ ಪಡೆಗಳನ್ನು ಸಿರಿಯಾದಿಂದ ಹಿಂದಕ್ಕೆ ಕರೆಯಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಜೊತೆಗೆ ಕುರ್ದಿಗಳನ್ನು ಅಸಹಾಯಕ ಪರಿಸ್ಥಿತಿಗೆ ದೂಡಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿರುವ ಟರ್ಕಿ ಕುರ್ದಿಗಳ ಮೇಲೆ ಭೀಕರ ದಾಳಿ ನಡೆಸಿ ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸಿ, ಹೊಸ ರಾಜಕೀಯ ಸಮೀಕರಣಕ್ಕೆ ಕಾರಣವಾಗಿದೆ. ಅಮೆರಿಕದ ಬೆಂಬಲದೊಂದಿಗೆ ಇತ್ತೀಚಿನವರೆಗೂ ಹೋರಾಡಿದ ಕುರ್ದಿಗಳು, ಈಗ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕರುಣಾಜನಕವಾದ ನಿರ್ಜನ ಪರಿಸ್ಥಿತಿಯಲ್ಲಿ ಕಂಗಾಲಾಗಿ ನಿಂತಿದ್ದಾರೆ. ತಮ್ಮ ಅಸ್ತಿತ್ವವನ್ನು ರಕ್ಷಿಸಲು ಮತ್ತು ಟರ್ಕಿ ದಾಳಿ ಹಿಮ್ಮೆಟ್ಟಿಸಲು ಕುರ್ದಿಗಳು ಸಿರಿಯಾದ ಆಡಳಿತಗಾರ ಅಸಾದ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಆಘಾತಕಾರಿ.

ಆರ್ಥಿಕ ನಿರ್ಬಂಧಗಳು ವಿಧಿಸುವುದಾಗಿ ಟ್ರಂಪ್, ಅಂಕಾರಾಗೆ (ಟರ್ಕಿ ರಾಜಧಾನಿ) ಬೆದರಿಕೆ ಹಾಕಿದ್ದರೂ ಅಮೆರಿಕದ ಪರದೆ ಹಿಂದಿನ ರಾಜಕೀಯವು 5 ದಿನಗಳ ಕದನ ವಿರಾಮಕ್ಕೆ ದಾರಿ ಮಾಡಿಕೊಟ್ಟಿದೆ. ಜೊತೆಗೆ ಕುರ್ದಿ ಉಗ್ರಗಾಮಿಗಳನ್ನು ಟರ್ಕಿ ತನ್ನ ಗಡಿಯಿಂದ ಹೊರ ದೂಡಬೇಕು. ಟರ್ಕಿಯ ದುರ್ಬಲ ಆರ್ಥಿಕತೆಯ ಮೇಲೆ ಯಾವುದೇ ಆರ್ಥಿಕ ನಿರ್ಬಂಧಗಳನ್ನು ವಿಧಿಸಬಾರದು ಎಂಬ ಷರತ್ತುಗಳೊಂದಿಗೆ ಟರ್ಕಿ- ಅಮೆರಿಕ ನಡುವೆ ಒಪ್ಪಂದ ಏರ್ಪಟ್ಟಿದೆ. ಸಿರಿಯಾದ ಎನ್‌ಡಿಎಫ್​ನ (ನ್ಯಾಷನಲ್ ಡೆಮಾಕ್ರಟಿಕ್ ಫೋರ್ಸ್) ಸೈನ್ಯವನ್ನು ದಕ್ಷಿಣ ಸಿರಿಯಾ ಗಡಿಯಿಂದ 20 ಕಿ.ಮೀ ದೂರದಲ್ಲಿ ನಿಯೋಜನಗೊಳ್ಳುವಂತೆ ಆದೇಶಿಸಲಾಗಿದೆ. ಅಮೆರಿಕ ಈ ಷರತ್ತು ಹೇರಿದಕ್ಕೆ ಟರ್ಕಿ ಸಂತುಷ್ಟವಾಗಿದೆ. 'ಮಾನವೀಯತೆಯ ಮರುಸ್ಥಾಪನೆಗೆ ಇದು ಸರಿಯಾದ ಹೆಜ್ಜೆ' ಎಂದು ಟ್ರಂಪ್ ತಮ್ಮ ಬೆನನ್ನು ತಾವೇ ತಟ್ಟಿಕೊಂಡಿದ್ದರೂ. ವಾಸ್ತವದಲ್ಲಿ ಇದು ಇಸ್ಲಾಮಿಕ್ ಸ್ಟೇಟ್​​ನ ಪುನಃಸ್ಥಾಪನೆ ರೂಪದ ಗುಪ್ತ ಬೆದರಿಕೆ ಎಂಬ ವಿಶ್ಲೇಷಣೆ ಬಹುವಾಗಿ ಕೇಳಿ ಬರುತ್ತಿದೆ.

ಸಿರಿಯಾ ಏಳು ದಶಕಗಳ ಹಿಂದೆ ಫ್ರಾನ್ಸ್‌ನಿಂದ ಸ್ವಾತಂತ್ರ್ಯ ಪಡೆಯಿತು. ಸಿರಿಯಾವು ಕುರ್ದಿ, ಅರ್​​ಮೇನಿಯನ್ನರು, ಅಸಿರಿಯಾದವರು, ಕ್ರಿಶ್ಚಿಯನ್ನರು, ಶಿಯಾಗಳು, ಸುನ್ನಿಗಳ ಸಮುದಾಯದಂತಹ ಜನರು ವಾಸಿಸುತ್ತಿದ್ದಾರೆ. ಸಿರಿಯಾದ ಬಹುಸಂಖ್ಯಾತರಾದ ಕುರ್ದಿಗಳಿಗೆ ಪ್ರತ್ಯೇಕ ದೇಶವಿಲ್ಲ. ಇರಾನ್, ಟರ್ಕಿ, ಇರಾಕ್, ಸಿರಿಯಾ, ಅರ್ಮೇನಿಯಾದಲ್ಲಿ ಹೆಚ್ಚಾಗಿ ಹರಡಿರುವ ಸುಮಾರು 17 ಲಕ್ಷ ಜನರು ಉತ್ತರ ಸಿರಿಯಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. 2011ರ ಅರಬ್ ಉದಯವು ಹಲವು ದೇಶಗಲ್ಲಿ ಜನಾಂದೋಲನಗಳನ್ನು ಬಡಿದೆಬ್ಬಿಸಿತ್ತು. ಇದು ಸಿರಿಯಾವನ್ನು ತೀವ್ರವಾಗಿ ಬೆಚ್ಚಿಬೀಳಿಸಿದಲ್ಲದೇ ಅಂತರ್ಯುದ್ಧ ಮತ್ತು ಹಿಂಸಾಚಾರಕ್ಕೆ ಕಾರಣವಾಯಿತು.

ಅಸಾದ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದಾಗ ಸಿರಿಯನ್ ಸರ್ಕಾರ ಕಾದ ಕಬ್ಬಿಣದ ಮೇಲೆ ಕಾಲಿಟ್ಟಂತೆ ಆಯಿತು. ಅರಬ್ ಒಕ್ಕೂಟ, ಯುರೋಪ್, ಟರ್ಕಿ, ಅಮೆರಿಕ, ಇಸ್ರೇಲ್ ಸೇರಿದಂತೆ ಇತರ ರಾಷ್ಟ್ರಗಳು ಬಂಡುಕೋರರನ್ನು ಬೆಂಬಲಿಸಿದವು. ಕಷ್ಟದ ಪರಿಸ್ಥಿತಿಯಲ್ಲಿದ್ದ ಸಿರಿಯಾದ ಸರ್ಕಾರವು ಇರಾನ್‌ನ ಚಾಣಾಕ್ಷ ಹಿರಿಯ ಅಧಿಕಾರಿಗಳ, ಸಾವಿರಾರು ಹಿಜ್ಬುಲ್ಲಾ ಗೆರಿಲ್ಲಾಗಳ ಬೆಂಬಲ ಮತ್ತು ರಷ್ಯಾದ ವಾಯು ಪಡೆಯ ನೆರವು ಪಡೆಯಿತು. ಅಫ್ಘಾನಿಸ್ತಾನವನ್ನು ಧ್ವಂಸಗೊಳಿಸುತ್ತಿದಂತೆ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕ- ಸೋವಿಯತ್ ಒಕ್ಕೂಟದ ರಾಜಕೀಯ ನಾಟಕದಲ್ಲಿ ಸಿರಿಯಾ ಪ್ರಕ್ಷುಬ್ಧತೆ ಪರಿಸ್ಥಿತಿ ಎದುರಿಸುವಂತಾಯಿತು.

ಹೊರ ರಾಷ್ಟ್ರಗಳು ನಮ್ಮ ಮಧ್ಯಪ್ರವೇಶಿಸಿದರೆ ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಬೆದರಿಕೆ ಹಾಕಿದ ಅಸಾದ್, ತನ್ನ ಮಾತನ್ನು ಉಳಿಸಿಕೊಳ್ಳಲು ತನ್ನದೇ ಜನರನ್ನು ಬಲಿಪಡೆದ. ವಿಶ್ವಸಂಸ್ಥೆ ಮತ್ತು ಜಾಗತಿಕ ಸಮುದಾಯ ಇದನ್ನು ವಿರೋಧಿಸಿದವು. ಟ್ರಂಪ್ ಅವರು ಮುಂಬರಲಿರುವ ಅಧ್ಯಕ್ಷೀಯ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು, ಮಾಜಿ ಅಧ್ಯಕ್ಷ ಒಬಾಮಾ ಅವರ ತಪ್ಪನ್ನು ಸರಿಪಡಿಸಲಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಉಲ್ಬಣಗೊಳ್ಳುತ್ತಿರುವ ಯುದ್ಧದ ಅಪಾಯ ಈಗ ಹಿಮ್ಮೆಟ್ಟುವಂತೆ ಕಾಣುತ್ತಿಲ್ಲ. ಲಿಂಡೆಸ್​​ ಗ್ರಹಾಂ ಅವರು, 'ಟ್ರಂಪ್‌ ಅವರ ಆತುರದ ಕಾರ್ಯತಂತ್ರವು ಒಬಾಮಾ ಕೈಗೊಂಡ ನಿರ್ಧಾರಕ್ಕಿಂತ ದೊಡ್ಡ ಅಪಾಯ' ಎಂದು ಆರೋಪಿಸಿದರು.

ಗ್ರಹಾಂ ಟೀಕೆ ಸಾಕಷ್ಟು ಸಮರ್ಥನೀಯವಾಗಿದೆ. ಅಸ್ಥಿರವಾದ ಪ್ರಯೋಜನಗಳ ಅಮೆರಿಕದ ಆತುರದ ನಿರ್ಧಾರಗಳಿಂದಾಗಿ ಸಮಸ್ಯೆಗಳು ಉದ್ಭವಿಸುತ್ತಿವೆ. ಸ್ವತಂತ್ರ ಕುರ್ದಿ ರಾಷ್ಟ್ರ ಸ್ಥಾಪನೆಗೆ 1984ರಲ್ಲಿ ರೂಪುಗೊಂಡ ಮತ್ತು ಸಶಸ್ತ್ರ ಹೋರಾಟ ಆರಂಭಿಸುತ್ತಿರುವ ಪಿಕೆಕೆ ಈಗ ಭಾರಿ ಪ್ರಮಾಣದ ನಷ್ಟಕ್ಕೆ ಈಡಾಗುತ್ತಿದೆ. ಪಿಕೆಕೆ ಬೆಂಬಲದೊಂದಿಗೆ ಪಿವೈಡಿ ಸಿರಿಯಾದಲ್ಲಿ ಕುರ್ದಿ ಪಕ್ಷವಾಗಿ ಬಲವಾಗಿ ಬೇರೂರಿತ್ತು. ಟರ್ಕಿ-ಸಿರಿಯಾ ಗಡಿಯಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿದ್ದ ಐಸಿಸ್​​​ ಉಗ್ರವಾದ ಅಳಿಸಿಹಾಕಲು ಅಮೆರಿಕ, ಕುರ್ದಿಸ್​​ ಸೈನ್ಸ ಮತ್ತು ಎಸ್​ಸಿಎಫ್​ನ ಶಸ್ತ್ರಾಸ್ತ್ರ ಬೆಂಬಲ ಪಡೆಯಿತು. ಟರ್ಕಿಯ ಗಡಿಯಲ್ಲಿ ಎನ್‌ಡಿಎಫ್ ಸ್ವಾಯತ್ತ ಮಂಡಳಿಗಳನ್ನು ರಚಿಸಿದೆ. ಸಾವಿರಾರು ಐಸಿಸ್​​​ ಉಗ್ರಗಾಮಿಗಳನ್ನು ಬಂಧಿಸಿದೆ. ಕುರ್ದಿಗಳ ಅಗತ್ಯತೆ ಪಡೆದ ಟ್ರಂಪ್, ತಮ್ಮ ಹಾದಿಯನ್ನು ಬದಲಾಯಿಸಿಕೊಂಡು ನ್ಯಾಟೋ ಸದಸ್ಯರಾಗಿರುವ ಟರ್ಕಿಯನ್ನು ಬೆಂಬಲಿಸಲು ಶುರು ಮಾಡಿದ್ದಾರೆ.

ಅಂಕಾರಾ, ನಿರಂತರವಾಗಿ ತೊಂದರೆ ಕೊಡುತ್ತಿರುವ ಉಗ್ರಗಾಮಿಗಳ ಮೇಲೆ ಬಾಂಬ್ ದಾಳಿ ಆರಂಭಿಸಿದ್ದಾರೆ. ತನ್ನ ಗಡಿಯಿಂದ 50 ಕಿ.ಮೀ ಉದ್ದದ ಎಸ್‌ಡಿಎಫ್ ಮುಕ್ತ ಬಫರ್ ವಲಯ ಹೊಂದಲು ಟರ್ಕಿ ಬಯಸಿದೆ. ಇದನ್ನು ಒಪ್ಪಿಕೊಂಡು ಕುರ್ದಿ ಸೈನ್ಯವು ತನ್ನ ನಿಯಂತ್ರಣದಲ್ಲಿರುವ ಇಸ್ಲಾಮಿಕ್​ ಉಗ್ರ ಸಂಘಟನೆ ಐಸಿಸ್​​ ಸೈನಿಕರನ್ನು ಬಿಡುಗಡೆ ಮಾಡಿದರೆ ಏನಾಗಬಹುದು ಅಥವಾ ಐಎಸ್ ಬಲವನ್ನು ಗಳಿಸಿ ಅದರ ಹತ್ಯಾಕಾಂಡವನ್ನು ಪುನರಾರಂಭಿಸಿದರೆ ಏನಾಗಬಹುದು? ಶಾಶ್ವತವಾದ ಮಾನವರ ಹತ್ಯಾಕಾಂಡಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಇನ್ನು ದೊಡ್ಡ-ದೊಡ್ಡ ರಾಷ್ಟ್ರಗಳ ರಾಜಕೀಯ ನಡೆ ಹಲವು ಪ್ರಕ್ಷುಬ್ಧತೆಗಳನ್ನೂ ಹುಟ್ಟುಹಾಕಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.