ETV Bharat / international

ಕೊರೊನಾ ವೈರಸ್​ ಹರಡಲು ಬೀದಿ ನಾಯಿಗಳದ್ದೂ ಇದೆಯಂತೆ ಪ್ರಮುಖ ಪಾತ್ರ: ಅಧ್ಯಯನ

ಬಾವಲಿಯ ಹತ್ತಿರ ಸಂಬಂಧಿಯಾದ ಕ್ಯಾನಿಡ್​ ಪ್ರಾಣಿಗಳ ಕರುಳಿಗೆ ವೈರಸ್​​ ಸೋಂಕು ತಗುಲುತ್ತದೆ. ಇದರ ಪರಿಣಾಮ ಕ್ಯಾನಿಡ್​​ಗಳಲ್ಲಿ ವೈರಸ್​​ ವೇಗವಾಗಿ ವಿಕಸನ ಗೊಳ್ಳುತ್ತದೆ. ಅದು ಮತ್ತಷ್ಟು ವೇಗವಾಗಿ ಮಾನವನಿಗೆ ಜಿಗಿಯುತ್ತದೆ ಎಂದು ತಿಳಿಸಿದ್ದಾರೆ.

author img

By

Published : Apr 15, 2020, 8:51 PM IST

Stray dogs may have played role in novel coronavirus origin: Study

ಟೊರಾಂಟೋ: ಕೊರೊನಾ ವೈರಸ್​ನಂತಹ ಸಾಂಕ್ರಾಮಿಕ ರೋಗಗಳು ಹರಡಲು ಬೀದಿ ನಾಯಿಗಳೂ ಪ್ರಮುಖ ಪಾತ್ರವಹಿಸುತ್ತವೆ. ಅದು ನಿರ್ದಿಷ್ಟವಾಗಿ ನಾಯಿ ಕರಳಿನಿಂದ ಹರಡುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಹೇಳಿದೆ.

ಮೊಲಿಕ್ಯುಲರ್​​ ಬಯೋಲಜಿ ಮತ್ತು ಎವಲ್ಯೂಷನ್​ ಪತ್ರಿಕೆಯಲ್ಲಿ ವಿಜ್ಞಾನಿಗಳು ಅಧ್ಯಯನ ನಡೆಸಿದ ಕುರಿತು ಪ್ರಕಟವಾಗಿದೆ. ಹಾವುಗಳಿಂದ ಪ್ರಾರಂಭವಾಗಿ ಮಧ್ಯಂತರದಲ್ಲಿ ಪ್ಯಾಂಗೊಲಿನ್​​​, ಇತ್ತೀಚೆಗೆ ಬಾವಲಿಗಳಿಂದ ಸಾರ್ಸ್​​-ಕೋವ್​-2 ಎಂಬ ವೈರಸ್ ಮನುಷ್ಯರಿಗೆ ಹರಡಿದೆ ಎಂದು ಅಧ್ಯಯನ ಹೇಳಿದೆ.

ವಿಶ್ವಾದ್ಯಂತ ನಾಯಿಗಳ ದತ್ತಾಂಶ ಪರಿಶೀಲಿಸಿದಾಗ ಅತಿ ಹೆಚ್ಚು ನಾಯಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿವೆ. ಅದರಲ್ಲಿ ಕರುಳಿನ ಕಾಯಿಲೆಗೆ ಹೆಚ್ಚು. ಕೊರೊನಾ​, ಸಾರ್ಸ್​​​​​​-ಕೋವ್​​-2, ಬ್ಯಾಟ್​​ ಕೋವ್​, ರ್ಯಾಟ್​ ಟಿಜಿ​​-13 ವೈರಸ್​​ಗಳು ನಾಯಿಗೆ ಹರಡಿರುವ ರೋಗಗಳ ಲಕ್ಷಣಗಳಿಗೆ ಹೋಲುತ್ತವೆ ಎಂದು ಹೇಳಲಾಗಿದೆ.

ಏಕೆಂದರೆ ನಾಯಿಗಳು ಬಾವಲಿಗಳನ್ನು ತಿನ್ನುವ ಪರಿಣಾಮ ವೈರಸ್​ ಬೇಗ ಹರಡುವ ಕಾರಣವಾಗುತ್ತದೆ. ಇತ್ತ ಬೀದಿನಾಯಿಗಳು ನಮ್ಮೊಟ್ಟಿಗೆ ಓಡಾಡುವಾಗ ವೈರಾಣುಗಳು ನಮಗೆ ಸೇರುತ್ತವೆ. ಅಲ್ಲದೇ, ಕ್ಯಾನಿಡ್​​ಗಳು ತಮ್ಮ ಗುದ ಮತ್ತು ಜನನಾಂಗವನ್ನು ಬಾಯಿಂದ ನೆಕ್ಕುತ್ತವೆ. ಆಗ ಆ ಜಾಗದಲ್ಲಿರುವ ಬ್ಯಾಕ್ಟೀರಿಯಾಗಳು ದೇಹದ ಒಳಹೊಕ್ಕುತ್ತವೆ.

ಕೆನಡಾದ ಒಟ್ಟಾವಾ ವಿಶ್ವವಿದ್ಯಾಲಯದ ಕ್ಸುಹುವಾ ಕ್ಸಿಯಾ ಅವರ ಪ್ರಕಾರ, ಈ ಪ್ರಾಣಿಗಳಿಂದ ಪ್ರತ್ಯೇಕಿಸಲ್ಪಟ್ಟ ವೈರಸ್‌ಗಳು ಸಾರ್ಸ್​​-ಕೋವ್​-2ಕ್ಕೂ ತುಂಬಾ ಭಿನ್ನವಾಗಿವೆ. ಸಾರ್ಸ್​​-ಕೋವ್​-2 ಮೂಲ ಮತ್ತು ಆರಂಭಿಕ ಪ್ರಸರಣ ಪತ್ತೆ ಹಚ್ಚಲು ಒಂದು ಕಲ್ಪನೆ ರಚನೆಗೆ ಅವಲೋಕನ ಮಾಡುತ್ತಿದ್ದೇವೆ ಎಂದು ಕ್ಸಿಯಾ ಹೇಳಿದ್ದಾರೆ.

ಬಾವಲಿಯ ಹತ್ತಿರ ಸಂಬಂಧಿಯಾದ ಕ್ಯಾನಿಡ್​ ಪ್ರಾಣಿಗಳ ಕರುಳಿಗೆ ವೈರಸ್​​ ಸೋಂಕು ತಗುಲುತ್ತದೆ. ಇದರ ಪರಿಣಾಮ ಕ್ಯಾನಿಡ್​​ಗಳಲ್ಲಿ ವೈರಸ್​​ ವೇಗವಾಗಿ ವಿಕಸನಗೊಳ್ಳುತ್ತದೆ. ಅದು ಮತ್ತಷ್ಟು ವೇಗವಾಗಿ ಮಾನವನಿಗೆ ಜಿಗಿಯುತ್ತದೆ ಎಂದು ತಿಳಿಸಿದ್ದಾರೆ.

ಈಗ ಕೊರೊನಾ ವೈರಸ್​​ ಪ್ರಾಣಿಗಳಿಂದ ಮನುಷ್ಯರಿಗೆ ಹೇಗೆ ಹರಡುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಮತ್ತು ಪತ್ತೆ ಹಚ್ಚಲು ಜಗತ್ತಿನ ವಿಜ್ಞಾನಿಗಳು ಪರದಾಡುತ್ತಿದ್ದಾರೆ. ಅಲ್ಲದೆ, ಸಂಶೋಧಕರು ಕಾಡು ನಾಯಿಗಳಲ್ಲಿ ಸಾರ್ಸ್​ ತರಹದ ವೈರಸ್​​​ ಕಂಡು ಬರುತ್ತದೆಯೇ ಇಲ್ಲವೇ ಎಂಬುದರ ಕುರಿತು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಮಾನವರು ಮತ್ತು ಸಸ್ತನಿಗಳು ಜ್ಯಾಪ್​​ (ZAP) ಎಂಬ ಪ್ರಮುಖ ಆಂಟಿವೈರಲ್ ಪ್ರೋಟೀನ್ ಅನ್ನು ಹೊಂದಿವೆ. ಈ ಅಂಶ ಯಾರಲ್ಲಿ ಕಡಿಮೆಯಾಗುತ್ತದೋ ಅವರಿಗೆ ವೈರಸ್ ಹರಡುತ್ತದೆ. ಆರ್‌ಎನ್‌ಎ ಜೀನೋಮ್‌ನೊಳಗೆ ಸಿಪಿಜಿ ಡೈನ್ಯೂಕ್ಲಿಯೊಟೈಡ್ಸ್ ಎಂದು ಕರೆಯಲ್ಪಡುವ ಒಂದು ಜೋಡಿ ರಾಸಾಯನಿಕವನ್ನು ಜ್ಯಾಪ್​​ ಮುಖ್ಯಗುರಿಯಾಗಿಸಿಕೊಂಡಿರುತ್ತದೆ. ವೈರಸ್​​​ ಕೊಲ್ಲಲು ಜ್ಯಾಪ್​​​​ ರಕ್ಷಣಾ ಕವಚವಾಗಿ ನಿಲ್ಲುತ್ತದೆ ಎಂದು ಕ್ಸಿಯಾ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.